Russia & Ukraine War: ಉಕ್ರೇನ್ ಡ್ರೋನ್ ದಾಳಿಯ ಎಡವಟ್ಟು, ರಷ್ಯಾದಲ್ಲಿ ನ್ಯೂಕ್ಲಿಯರ್ ಬಾಂಬ್ ಬ್ಲಾಸ್ಟ್?

ಉಕ್ರೇನ್ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು, ರಷ್ಯಾ ದೇಶವನ್ನು ಪದೇ ಪದೇ ಕೆಣಕುತ್ತಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ಆದರೆ ನಿನ್ನೆ ರಾತ್ರಿ ಮತ್ತೊಂದು ರಣಭೀಕರ ಘಟನೆ ನಡೆದು ಹೋಗಿದೆ. ತಾನು ಏನು ಮಾಡುತ್ತಿದ್ದೇನೆ ಅನ್ನೋ ಅರಿವೇ ಇಲ್ಲದಂತೆ ಈಗ ಉಕ್ರೇನ್ ಸೇನೆ ಭೀಕರ ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ. ಅದರಲ್ಲೂ ರಷ್ಯಾ ಸೇನೆ ನ್ಯೂಕ್ಲಿಯರ್ ಬಾಂಬ್‌ಗಳನ್ನ ಇಟ್ಟಿರುವ ಜಾಗದಲ್ಲೇ ಡ್ರೋನ್‌ಗಳು ಅಬ್ಬರಿಸಿವೆ. ಈ ದಾಳಿಯ ನಂತರ ರಷ್ಯಾದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ನಿನ್ನೆ ರಾತ್ರಿ ದಿಢೀರ್ ರೊಚ್ಚಿಗೆದ್ದಿದ್ದ ಉಕ್ರೇನ್ ಮಿಲಿಟರಿ ನೇರವಾಗಿ ರಷ್ಯಾಗೆ ನುಗ್ಗಿಸಿಬಿಟ್ಟಿದೆ. ಉಕ್ರೇನ್ ಹೀಗೆ ದಾಳಿ ಮಾಡಿರುವ ಡ್ರೋನ್‌ಗಳು ಹೋಗಿ ನೇರವಾಗಿ ಬಡಿದಿರುವುದು ರಷ್ಯಾ ದೇಶದ ನ್ಯೂಕ್ಲಿಯರ್ ಘಟಕಗಳ ಬಳಿ. ನ್ಯೂಕ್ಲಿಯರ್ ಅಸ್ತ್ರಗಳ ಸಂಗ್ರಹ & ಪ್ರಯೋಗಗಳೂ ನಡೆಯುವ ಜಾಗದ ಮೇಲೆಯೇ ಉಕ್ರೇನ್ ಸೇನೆ ಡ್ರೋನ್‌ಗಳ ಮೂಲಕ ದಾಳಿ ಮಾಡುತ್ತಿದೆ ಎಂದು ಆರೋಪ ಮಾಡಲಾಗಿದೆ. ಈ ಘಟನೆ ಬೆನ್ನಲ್ಲೇ ರಷ್ಯಾದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಅಣುಬಾಂಬ್ ಸ್ಫೋಟವಾಗಿದೆಯಾ? ಎಂಬ ಅನುಮಾನ ಮೂಡಿದೆ. ಯಾಕಂದ್ರೆ ಉಕ್ರೇನ್‌ನ ಸೇನೆ ಡ್ರೋನ್ ದಾಳಿ ನಡೆಸಿದ ಜಾಗದಲ್ಲಿ ದಟ್ಟ ಹೊಗೆ ಆವರಿಸಿದೆ.

Russia on High Alert Following Ukraine Drone Strike at Engels Base

ಅವಾಂತರ ಸೃಷ್ಟಿಸಿದ ಉಕ್ರೇನ್ ಸೇನೆ?

ರಷ್ಯಾ & ಉಕ್ರೇನ್ ಯುದ್ಧ ಬಿರುಗಾಳಿ ಮತ್ತಷ್ಟು ಜೋರಾಗಿರುವ ಸಮಯದಲ್ಲೇ, ಉಕ್ರೇನ್ ಸೇನೆ ಇದೀಗ ರಷ್ಯಾ ವಿರುದ್ಧ ಪ್ರತಿದಾಳಿ ಶುರು ಮಾಡಿದೆ. ಈಗಾಗಲೇ ಉಕ್ರೇನ್ ದೇಶದ ಪ್ರಮುಖ ನಗರ & ರಾಜ್ಯಗಳನ್ನು ರಷ್ಯಾ ಸೇನೆ ತನ್ನ ವಶಕ್ಕೆ ಪಡೆದಿದೆ. ಹೀಗಾಗಿ ಉಕ್ರೇನ್‌ನ ಪಡೆಗಳಿಗೆ ಇನ್ನಷ್ಟು ಹೋರಾಟ ನಡೆಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಸೂಕ್ಷ್ಮ ಪರಿಸ್ಥಿತಿ ನಡುವೆ ರಷ್ಯಾ & ಉಕ್ರೇನ್ ಗಡಿ ಕೊತ ಕೊತ ಕುದಿಯುತ್ತಿದ್ದು, ಉಕ್ರೇನ್‌ಗೆ ಪಾಠ ಕಲಿಸಲು ಕಾಯುತ್ತಿದೆ ರಷ್ಯಾ. ಇದೇ ಸಮಯದಲ್ಲಿ ನೇರವಾಗಿ ಉಕ್ರೇನ್ ಸೇನೆ ತನ್ನ ಡ್ರೋನ್‌ಗಳ ಮೂಲಕ ರಷ್ಯಾ ಒಳಗಡೆ ನುಗ್ಗಿ ಅವಾಂತರ ಸೃಷ್ಟಿಸಿದೆ.

3 ವರ್ಷ ಮುಗಿಸಿರುವ ಯುದ್ಧ

2022ರ ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಬರೋಬ್ಬರಿ 3 ವರ್ಷ ಪೂರೈಸಿದೆ. ಸಂಚಲನ ಸೃಷ್ಟಿ ಮಾಡುತ್ತಿರುವ ಈ ಸಮಯದಲ್ಲೇ, ಮತ್ತೆ ರಷ್ಯಾ & ಉಕ್ರೇನ್ ಸೇನೆಗಳು ಒಬ್ಬರ ಮೇಲೆ ಮತ್ತೊಬ್ಬರು ಭೀಕರವಾದ ದಾಳಿ ನಡೆಸುತ್ತಿದ್ದಾರೆ. ಅದೇ ರೀತಿ ಇದೀಗ ಏಂಜೇಲ್ಸ್ ನೆಲೆ ಮೇಲೆ ಉಕ್ರೇನ್ ನಡೆಸಿರುವ ದಾಳಿ ದೊಡ್ಡ ಪ್ರಮಾದವಾಗಿದೆ, ಮುಂದೆ ಇದಕ್ಕೆ ತಕ್ಕ ಬೆಲೆ ತೆರಲು ಉಕ್ರೇನ್ ರೆಡಿಯಾಗಬೇಕು ಎಂಬ ಎಚ್ಚರಿಕೆ ಸಂದೇಶ ರಷ್ಯಾದಿಂದ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+