Greenland: ರಷ್ಯಾ ಫುಲ್ ಅಲರ್ಟ್, ಗ್ರೀನ್‌ಲ್ಯಾಂಡ್ & ಅಮೆರಿಕದ ಮೇಲೆ ಕಣ್ಣಿಟ್ಟ ಪುಟಿನ್ ಪಡೆ?
ಅಮೆರಿಕ & ಗ್ರೀನ್‌ಲ್ಯಾಂಡ್ ನಡುವೆ ದೊಡ್ಡ ಫೈಟಿಂಗ್ ಶುರುವಾಗಿದೆ. ಯಾವಾಗ ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ ಆದರೋ ಆಗಲೇ ಹೊಸ ತಲ್ಲಣ ಎದ್ದಿತ್ತು. ಹೀಗೆ ಟ್ರಂಪ್ ಅವರು ಅಧ್ಯಕ್ಷರಾಗಿ ಗೆದ್ದ ನಂತರ ಗ್ರೀನ್‌ಲ್ಯಾಂಡ್ ಮೇಲೆ ಕಣ್ಣು ಹಾಕಿದ್ದರು. ಅಲ್ಲದೆ ಗ್ರೀನ್‌ಲ್ಯಾಂಡ್ ಖರೀದಿ ಮಾಡುವ ಬಗ್ಗೆ ಕೂಡ ಮಾತನಾಡಿದ್ದರು. ಈ ರೀತಿ ಟ್ರಂಪ್ ನೀಡಿದ್ದ ಹೇಳಿಕೆ ತಲ್ಲಣ ಸೃಷ್ಟಿ ಮಾಡುವ ಜೊತೆಗೆ ರಷ್ಯಾ ಕೂಡ ರೊಚ್ಚಿಗೆದ್ದು ಕೂತಿದೆ!
ರಷ್ಯಾ & ಗ್ರೀನ್‌ಲ್ಯಾಂಡ್ ನಡುವೆ ಕೆಲವೇ ಕಿಲೋ ಮೀಟರ್ ಅಂತರ ಇದ್ದು, ಗ್ರೀನ್‌ಲ್ಯಾಂಡ್ ನೆಲದಲ್ಲಿ ನಿಂತು ರಷ್ಯಾ ಮೇಲೆ ದಾಳಿ ಮಾಡುವುದು ಸುಲಭ. ಅಮೆರಿಕ & ರಷ್ಯಾ ಪರಮ ಶತ್ರುಗಳು. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ದ್ವೀಪರಾಷ್ಟ್ರ ಖರೀದಿಗೆ ಕಾದು ಕೂತಿದ್ದಾರೆ. ಹೀಗಿದ್ದಾಗಲೇ ರಷ್ಯಾ ಕೂಡ ಅಲರ್ಟ್ ಆಗಿದೆ. ಗ್ರೀನ್‌ಲ್ಯಾಂಡ್ & ರಷ್ಯಾ ರಾಜಧಾನಿ ಮಾಸ್ಕೋ ನಡುವೆ ಕೇವಲ 3,937 ಕಿಲೋ ಮೀಟರ್ ಅಂತರ ಇದ್ದು, ಹೀಗಾಗಿ ಶತ್ರುಗಳು ತಮ್ಮ ಗಡಿಯಲ್ಲಿ ಬಂದು ಕೂರುವ ಮೊದಲು ಅಲರ್ಟ್ ಆಗಲು ರಷ್ಯಾ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಗ್ರೀನ್‌ಲ್ಯಾಂಡ್ ಬಗ್ಗೆ ರಷ್ಯಾ ಅಲರ್ಟ್!
2019 ರಲ್ಲಿ ಟ್ರಂಪ್ ಮೊದಲಿಗೆ ಗ್ರೀನ್ ಲ್ಯಾಂಡ್ ಖರೀದಿಸುವ ಯೋಜನೆ ಮುಂದಿಟ್ಟಾಗ, ಗ್ರೀನ್ ಲ್ಯಾಂಡ್‌ನ ಆಡಳಿತ ನಿರ್ವಹಿಸುವ ಡೆನ್ಮಾರ್ಕ್ ಇದು ಕನಸಲ್ಲೂ ಸಾಧ್ಯ ಇಲ್ಲ ಎಂದು ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿತ್ತು. ಹೀಗಿದ್ದಾಗ ಮತ್ತೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದಿರುವ ಡೊನಾಲ್ಡ್ ಟ್ರಂಪ್ ಇನ್ನಷ್ಟು ರೊಚ್ಚಿಗೆದ್ದು, ಗ್ರೀನ್‌ಲ್ಯಾಂಡ್ ನಮಗೆ ಬೇಕೆ ಬೇಕು ಅನ್ನೋ ರೀತಿ ಮಾತನಾಡುತ್ತಿದ್ದಾರೆ. ಹೀಗೆ ಟ್ರಂಪ್ ನೀಡಿರುವ ಹೇಳಿಕೆ ನಂತರ ರಷ್ಯಾ ಕೂಡ ಅಲರ್ಟ್ ಆಗಿ ಪ್ರತಿಯೊಂದು ಕ್ಷಣವನ್ನೂ ಹತ್ತಿರದಿಂದ ಗಮನಿಸುತ್ತಿದೆ.
ಪನಾಮ ಆಯ್ತು ಗ್ರೀನ್‌ಲ್ಯಾಂಡ್ ಕಿರಿಕ್ ಶುರು!
ಹೌದು, ಇತ್ತೀಚೆಗೆ ಪನಾಮ ಕಾಲುವೆ ವಿಚಾರದಲ್ಲಿ ಕಿರಿಕ್ ನಡೆದು, ಡೊನಾಲ್ಡ್ ಟ್ರಂಪ್ ಅವರು ಪನಾಮ ದೇಶದ ಕಾಲುವೆಯ ಅಧಿಕಾರವನ್ನ ಅಮೆರಿಕಗೆ ವಹಿಸಿಕೊಡಿ ಎನ್ನುವಂತೆ ಕೇಳಿದ್ದರು. ಹೀಗಾಗಿ ಪನಾಮ ದೇಶದ ನಾಯಕರು ಟ್ರಂಪ್ ಅವರಿಗೆ ಖಡಕ್ ತಿರುಗೇಟು ನೀಡಿದ್ದರು. ಇದೇ ಸಮಯದಲ್ಲಿ ಗ್ರೀನ್‌ಲ್ಯಾಂಡ್ ವಿಚಾರದಲ್ಲೂ ಕಿರಿಕ್ ಶುರು ಮಾಡಿರುವುದು, ರಷ್ಯಾ ಗಮನ ಸೆಳೆದಿದೆ.
ರಷ್ಯಾ ತನ್ನ ಶತ್ರು ಅಮೆರಿಕದ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಿದೆ ಎಂಬ ಮಾಹಿತಿ ಇದೀಗ ತಲ್ಲಣ ಎಬ್ಬಿಸಿದೆ. ರಷ್ಯಾ & ಉಕ್ರೇನ್ ಯುದ್ಧದ ಸಮಯದಲ್ಲೇ ಈ ರೀತಿ ಬೆಳವಣಿಗೆ ಹಲ್‌ಚಲ್ ಎಬ್ಬಿಸಿದೆ. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಮೆರಿಕ & ರಷ್ಯಾ ಮಧ್ಯೆ ಸಂಬಂಧ ಸುಧಾರಿಸುವ ನಿರೀಕ್ಷೆ ಇತ್ತು. ಆದ್ರೆ ಇದೀಗ ಅದು ಕೂಡ ಬುಡಮೇಲು ಆಗುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications