Military Budget: ರಷ್ಯಾ ರಕ್ಷಣಾ ಬಜೆಟ್ ₹8.27 ಲಕ್ಷ ಕೋಟಿ!

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೈಕೊಡವಿ ನಿಂತಿದ್ದಾರೆ. ರಷ್ಯಾ ಶತ್ರು ಉಕ್ರೇನ್ ವಿರುದ್ಧ ಯುದ್ಧ ಗೆಲ್ಲಬೇಕೆಂಬ ಗುರಿ ಜೊತೆಗೆ ಮುನ್ನಡೆಯುತ್ತಿದ್ದಾರೆ. ಆದ್ರೆ ಈ ಹೊತ್ತಲ್ಲೇ ತನ್ನ ರಕ್ಷಣಾ ಬಜೆಟ್ ಅನ್ನೇ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ರಷ್ಯಾ ಸರ್ಕಾರ ಮುಂದಾಗಿದೆ. ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ಹಿನ್ನೆಲೆ ರಷ್ಯಾ ಈ ವರ್ಷ ರಕ್ಷಣಾ ಸಚಿವಾಲಯಕ್ಕೆ ₹8.27 ಲಕ್ಷ ಕೋಟಿ ರೂಪಾಯಿ ಹಣ ವಿನಿಯೋಗಿಸುವ ಸಿದ್ಧವಾಗಿದೆ.

ಕಳೆದ ವರ್ಷ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ್ದಾಗ ಕೆಲವೇ ದಿನದಲ್ಲಿ ಈ ಯುದ್ಧ ಮುಗಿದು ಹೋಗುತ್ತೆ ಅಂದುಕೊಂಡಿತ್ತು ಜಗತ್ತು. ಆದರೆ ಯುದ್ಧ ಶುರುವಾಗಿ ಇಂದಿಗೆ 528 ದಿನ ಮುಗಿದಿದೆ. ರಷ್ಯಾ ಕೂಡ ಯುದ್ಧವನ್ನು ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್‌ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್‌ರನ್ನೂ ಕೆರಳಿಸುತ್ತಿದೆ. ಹೀಗೆ ರಷ್ಯಾ & ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ಇದೀಗ ರಷ್ಯಾ ತನ್ನ ರಕ್ಷಣಾ ಬಜೆಟ್ ಗಾತ್ರವನ್ನೇ ಹೆಚ್ಚಿಸಿ ಜಗತ್ತಿಗೆ ಮತ್ತೊಂದು ಆಘಾತ ನೀಡಿದೆ. ಇದರಿಂದ ಮುಂದೆ ಇನ್ನೇನು ಅವಾಂತರ ಸೃಷ್ಟಿಯಾಗುತ್ತೋ ಎಂಬ ಚರ್ಚೆಯು ಇದೀಗ ಶುರುವಾಗಿದೆ.

Russia may increase military budget amid war against Ukraine

ರಕ್ಷಣಾ ವೆಚ್ಚ ಏರಿಕೆ ಆಗಿದ್ದೇಕೆ?

ಇನ್ನು ರಷ್ಯಾ ಸರ್ಕಾರದ ರಕ್ಷಣಾ ಬಜೆಟ್‌ನ ಇತಿಹಾಸ ಒಮ್ಮೆ ತಿರುವಿ ನೋಡುವುದಾದರೆ, 2011 ಮತ್ತು 2022ರ ನಡುವೆ ರಷ್ಯಾ ತನ್ನ ಬಜೆಟ್‌ನಲ್ಲಿ ನಿಗದಿಪಡಿಸಿದ ಹಣದಲ್ಲಿ ಕನಿಷ್ಠ ಶೇ 13.9 ಮತ್ತು ಗರಿಷ್ಠ ಶೇಕಡಾ 23ರಷ್ಟು ಹಣವನ್ನ ಮಾತ್ರ ವಿನಿಯೋಗ ಮಾಡಿತ್ತು. ಆದರೆ ಗಂಭೀರ ವಿಚಾರ ಏನೆಂದರೆ ಈ ವರ್ಷದ ರಕ್ಷಣಾ ಬಜೆಟ್‌ನಲ್ಲಿ ಮೀಸಲಿರಿಸಿದ ಹಣದಲ್ಲಿ ಶೇ 57.4ರಷ್ಟನ್ನು ಈಗಾಗಲೇ ಬಳಸಿದೆ ಎನ್ನಲಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಮುಂದೆ ಈ ಯುದ್ಧ ಇನ್ನಷ್ಟು ಭೀಕರ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಭಾಗಶಃ ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ನಡೆಸಿದೆ.

ಯುದ್ಧ ಸಂಧಾನಕ್ಕೆ ಸಿದ್ಧವಾಗಿದೆ ವೇದಿಕೆ

ರಷ್ಯಾ & ಉಕ್ರೇನ್ ಜಗಳ ಮುಂದುವರಿದರೆ ಮತ್ತೊಂದು ಮಹಾಯುದ್ಧ ಗ್ಯಾರಂಟಿ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಜಗತ್ತು ಒಂದಾಗುತ್ತಿದೆ. ಅಲ್ಲದೆ ಶಾಂತಿ ಸಭೆಯಲ್ಲಿ ಭಾರತಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸೌದಿ ಅರೇಬಿಯಾದ ಜೆಡ್ಹಾದಲ್ಲಿ ನಡೆಯಲಿರುವ ಸಭೆಗೆ ಭಾರತಕ್ಕೆ ಆಮಂತ್ರಣ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗಾಚಿ ನಿನ್ನೆ ಮಾಹಿತಿ ನೀಡಿದ್ದಾರೆ.

Russia may increase military budget amid war against Ukraine

ನಾಳೆ ನಡೆಯಲಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂಧಾನ ಸಭೆಯಲ್ಲಿ ಭಾರತವೂ ಭಾಗವಹಿಸಲಿದೆ. ಈ ಬಗ್ಗೆ ನಿನ್ನೆ ಸ್ಪಷ್ಟನೆ ನೀಡಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗಾಚಿ, ಇದು ಮಾತುಕತೆ & ರಾಜತಾಂತ್ರಿಕತೆಯ ಮುಂದಿನ ದಾರಿ ಎಂಬ ನಮ್ಮ ದೀರ್ಘಕಾಲದ ನಿಲುವಿಗೆ ಅನುಗುಣವಾಗಿದೆ ಎಂದಿದ್ದರು. ನಾಳೆ, ನಾಡಿದ್ದು ಅಂದರೆ ಆಗಸ್ಟ್‌ 5 ಮತ್ತು 6ರಂದು ಸೌದಿ ಅರೇಬಿಯಾದಲ್ಲಿ ಈ ಮಹತ್ವದ ಸಭೆ ನಡೆಯಲಿದೆ.

ಶಾಂತಿ ಮಾತುಕತೆಗೆ ರಷ್ಯಾ ಬರುತ್ತಾ?

ಅಷ್ಟಕ್ಕೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಪ್ರಸ್ತಾಪದ ಹಿನ್ನೆಲೆ ವರ್ಷದ ಆರಂಭದಲ್ಲಿ ಸೌದಿ ಆರೇಬಿಯಾ ಸಂಧಾನಕ್ಕೆ ಚರ್ಚೆ ಆರಂಭಿಸಿತ್ತು. ಉಕ್ರೇನ್‌ ಸೇರಿ ಪ್ರಮುಖ ಅಭಿವೃದ್ಧಿಶೀಲ ಪಾಶ್ಚಿಮಾತ್ಯ ರಾಷ್ಟ್ರಗಳನ್ನ ಆಹ್ವಾನಿಸಿತ್ತು. ಈ ಮೂಲಕ ಯುದ್ಧ ನಿಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಆದ್ರೆ ಸಭೆ ಕರೆದ ಮಾತ್ರಕ್ಕೆ ದಿಢೀರ್ ಯುದ್ಧ ನಿಲ್ಲಲಿದೆ ಎಂಬ ನಂಬಿಕೆ ಇಲ್ಲ. ಏಕೆಂದರೆ ಈಗಾಗಲೇ ರಷ್ಯಾ ಕೂಡ ಹಲವಾರು ಬೇಡಿಕೆ ಮುಂದಿಟ್ಟಿದ್ದು, ಉಕ್ರೇನ್ & ರಷ್ಯಾ ನಡುವೆ ಸಂಧಾನ ನಡೆಸುವುದು ದೊಡ್ಡ ಸವಾಲಿನ ಕೆಲಸವಾಗಲಿದೆ. ಸದ್ಯ ಚೀನಾ ಕೂಡ ನಾಳೆಯ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆದರೆ ರಷ್ಯಾ ನಿಲುವು ಇನ್ನೂ ಸ್ಪಷ್ಟವಾಗಿಲ್ಲ. ರಷ್ಯಾ ಒಪ್ಪಿದರೆ ಮಾತ್ರ ಯುದ್ಧ ನಿಲ್ಲಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+