ರಷ್ಯಾದಲ್ಲಿ 'ಸ್ಪುಟ್ನಿಕ್ ಲೈಟ್' ಕೊರೊನಾ ಲಸಿಕೆ ಬಿಡುಗಡೆ
ಮಾಸ್ಕೋ, ಜೂನ್ 25: ರಷ್ಯಾದಲ್ಲಿ 'ಸ್ಪುಟ್ನಿಕ್ ಲೈಟ್' ಕೊರೊನಾ ಲಸಿಕೆ ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಷ್ಯಾವು ಸ್ಪುಟ್ನಿಕ್ ಲೈಟ್ ಎನ್ನುವ ಕೋವಿಡ್ ಲಸಿಕೆಯ ಅವತರಿಣಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ, ಇದು ಸ್ಪುಟ್ನಿಕ್ V ಲಸಿಕೆಯ ಪರಿಷ್ಕೃತ ಲಸಿಕೆಯಾಗಿದೆ ಎಂದು ಕೊಮ್ಮರ್‌ಸಾಂಟ್ ದೈನಿಕ ಪತ್ರಿಕೆ ವರದಿ ಮಾಡಿದೆ.
ರಷ್ಯಾದಲ್ಲಿ ಈ ಮೊದಲು ಬಿಡುಗಡೆ ಮಾಡಿರುವ ಸ್ಪುಟ್ನಿಕ್ V ಲಸಿಕೆಯ ಮೊದಲ ಡೋಸ್‌ನ ಪರಿಷ್ಕೃತ ಲಸಿಕೆ ಇದಾಗಿದ್ದು, 21 ದಿನಗಳ ಅಂತರದಲ್ಲಿ ಲಸಿಕೆ ನೀಡಲಾಗುತ್ತದೆ.

ಸುಮಾರು ಆರು ತಿಂಗಳುಗಳ ಹಿಂದೆ ಸ್ಪುಟ್ನಿಕ್ V ಲಸಿಕೆ ಹಾಕಿಸಿಕೊಂಡವರಿಗೆ ಸ್ಪುಟ್ನಿಕ್ ಲೈಟ್ ಲಸಿಕೆ ಬೂಸ್ಟರ್ ರೀತಿಯಲ್ಲಿ ಕೆಲಸ ಮಾಡಲಿದೆ.
ಸ್ಪುಟ್ನಿಕ್ V ಮೊದಲ ಡೋಸ್‌ನ ಉತ್ಪಾದನೆಯನ್ನು ಭಾರಿ ಪ್ರಮಾಣದಲ್ಲಿ ಮಾಡಲಾಗಿತ್ತು. ಆದರೆ ಆವಿಯಾಗುವ ಸ್ವಭಾವ ಲಸಿಕೆಯದ್ದಾದರಿಂದ ಎರಡನೇ ಡೋಸ್ ಅನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲಾಗಿತ್ತು.
ಸ್ಪುಟ್ನಿಕ್ V ಡೋಸ್ ಪಡೆದುಕೊಂಡವರಿಗೆ ಎರಡನೇ ಡೋಸ್‌ನ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ಇದೀಗ ಸ್ಪುಟ್ನಿಕ್ ಲೈಟ್ ಲಸಿಕೆ ಅಭಿವೃದ್ಧಿಪಡಿಸಲಾಗಿದೆ.
ರಷ್ಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಡೆಲ್ಟಾ ರೂಪಾಂತರಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಲಸಿಕೆ ಅಭಿಯಾನವನ್ನು ತ್ವರಿತಗೊಳಿಸುವ ಒತ್ತಡದಲ್ಲಿದೆ. ಹೀಗಾಗಿ ಸ್ಪುಟ್ನಿಕ್ ಲೈಟ್ ಇಡೀ ದೇಶಕ್ಕೇ ವರದಾನವಾಗಿ ದೊರೆತಿದೆ. ಹೊಸದಾಗಿ ಸ್ಪುಟ್ನಿಕ್ ಲೈಟ್ ಪಡೆದುಕೊಂಡವರಿಗೆ ಇನ್ನೊಂದು ಡೋಸ್‌ನ ಅಗತ್ಯವಿರುವುದಿಲ್ಲ. ಭಾರತದಲ್ಲಿ ಈಗಾಗಲೇ ಮೂರು ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲಾಗಿದ್ದು, ಅದರಲ್ಲಿ ಸ್ಪುಟ್ನಿಕ್ V ಕೂಡಾ ಒಂದಾಗಿದೆ, ಕೋವ್ಯಾಕ್ಸಿನ್, ಕೋವಿಶೀಲ್ಡ್‌ಗೆ ಅನುಮತಿ ನೀಡಲಾಗಿದೆ.












Click it and Unblock the Notifications