Russia & Ukraine: ರಷ್ಯಾ ಸೇನೆಯಿಂದ ಉಕ್ರೇನ್‌ಗೆ ಶಾಕ್ ಮೇಲೆ ಶಾಕ್, ಶತ್ರು ದೇಶದ ಒಳಗೆ ನುಗ್ಗುತ್ತಿದೆ ರಷ್ಯಾ!
ರಷ್ಯಾ ಮಿಲಿಟರಿ ದಾಳಿಗೆ ಉಕ್ರೇನ್ ಸೇನೆ ಪುಡಿ ಪುಡಿ ಆಗಿ ಹೋಗುತ್ತಿದ್ದು, ಉಕ್ರೇನ್ ಸೇನೆ ಓಡಿ ಹೋಗುತ್ತಿದೆ. ಈಗಾಗಲೇ ಹಲವು ಪ್ರಮುಖ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿರುವ & ಉಕ್ರೇನ್ ಮೇಲೆ ಬಿಗಿ ಹಿಡಿತ ಹೊಂದಿರುವ ರಷ್ಯಾ ಮಿಲಿಟರಿ, ತನ್ನ ಗಮನವನ್ನು ಇದೀಗ ಬೇರೆ ಬೇರೆ ನಗರಗಳ ಮೇಲೆ ನೆಟ್ಟಿದೆ. ಹೀಗಾಗಿಯೇ, ಉಕ್ರೇನ್ ದೇಶದ ಪ್ರಮುಖ ನಗರಗಳ ಮೇಲೆ ದಾಳಿ ಮಾಡಲು ಶುರು ಮಾಡಿದೆ ರಷ್ಯಾದ ಬಲಿಷ್ಠ ಮಿಲಿಟರಿ.
ರಷ್ಯಾ ಮಿಲಿಟರಿ ವಿಚಾರದಲ್ಲಿ ಸಾಕಷ್ಟು ಬಲಶಾಲಿ ಆಗಿದ್ದು, ಯಾವುದೇ ಅಡೆತಡೆ ಬಂದು ಎದುರಾದರೂ ಎದುರಿಸಿ ನಿಲ್ಲುವ ತಾಕತ್ ಹೊಂದಿದೆ. ಆದರೆ ಈ ವಿಚಾರದಲ್ಲಿ ಉಕ್ರೇನ್‌ನ ಸೇನೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಕೊಡುವ ಅನುದಾನ ನಂಬಿ ಹೋರಾಟ ನಡೆಸುತ್ತಿದೆ. ಇದೇ ಕಾರಣಕ್ಕೆ ಇದೀಗ ದೊಡ್ಡ ತಿಕ್ಕಾಟ ಶುರುವಾಗಿದ್ದು, ರಷ್ಯಾ ಕೊಡುತ್ತಿರುವ ಒಂದೊಂದು ಏಟಿಗೂ ನಲುಗಿ ಹೋಗುತ್ತಿದೆ ಉಕ್ರೇನ್. ಇಂತಹ ಸಮಯದಲ್ಲೇ ರಷ್ಯಾ ಸೇನೆ ಇದೀಗ ಉಕ್ರೇನ್ ದೇಶದ ಬಹುಮುಖ್ಯ ನಗರದ ಕಡೆಗೆ ನುಗ್ಗುತ್ತಿದೆ!

ಉಕ್ರೇನ್ ದೊಡ್ಡ ನಗರಗಳು ಉಡೀಸ್?
ಪೋಕ್ರೋವ್‌ಸ್ಕ್ ಉಕ್ರೇನ್‌ನ ದೊಡ್ಡ ನಗರವಾಗಿದ್ದು, ಇದೇ ನಗರದ ಮೇಲೆ ರಷ್ಯಾ ಮಿಲಿಟರಿ ಕಣ್ಣು ಬಿದ್ದಿದೆ. ಹೀಗಿದ್ದಾಗ ರಷ್ಯಾ ಸೈನಿಕರು ಪೋಕ್ರೋವ್‌ಸ್ಕ್ ನಗರದ ಕಡೆಗೆ ನುಗ್ಗುತ್ತಿದ್ದಾರೆ. ಈ ಮೂಲಕ ಇದೀಗ ಯುರೋಪ್ ಖಂಡದ ಪ್ರಮುಖ ದೇಶವಾದ ಉಕ್ರೇನ್ ಪಾಡು ಶತ್ರುವಿಗೂ ಬೇಡ ಎನ್ನುವಂತೆ ಆಗಿದೆ.
ರಷ್ಯಾಗೆ ಇದೀಗ ಡಬಲ್ ಎನರ್ಜಿ ಬಂದಂತೆ ಕಾಣುತ್ತಿದೆ, ಯಾಕಂದ್ರೆ ಒಂದು ಕಡೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಪಕ್ಷ ಸೋತು ಹೋಗಿ ಡೊನಾಲ್ಡ್ ಟ್ರಂಪ್‌ಗೆ ಗೆಲುವು ಸಿಕ್ಕಿದೆ. ಮತ್ತೊಂದು ಕಡೆ ಉಕ್ರೇನ್ ಸೇನೆ ನಿಧಾನವಾಗಿ ಸೋತು ಓಡಿ ಹೋಗ್ತಿದೆ. ಅಲ್ಲದೆ ರಷ್ಯಾ ಸೇನೆಯ ದಾಳಿಗೆ ಉಕ್ರೇನ್ ಮಿಲಿಟರಿ ಬೆಚ್ಚಿ ಬಿದ್ದಿದೆ.
ಸೋಲು ಒಪ್ಪಿಕೊಳ್ಳುತ್ತಾ ಉಕ್ರೇನ್?
ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧಿಕಾರ ವಹಿಸಿಕೊಂಡ ತಕ್ಷಣ ಉಕ್ರೇನ್‌ಗೆ ಈಗ ಸಿಗುತ್ತಿರುವ ಅಮೆರಿಕದ ಯುದ್ಧ ಅನುದಾನ ಸಂಪೂರ್ಣ ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಚುನಾವಣೆ ಸಮಯದಲ್ಲಿ ಉಕ್ರೇನ್ ವಿರೋಧಿ ನೀತಿಯನ್ನ ಪ್ರಚಾರ ಮಾಡಿದ್ದರು. ಹೀಗಾಗಿ ಉಕ್ರೇನ್ ಸೇನೆ ಇದೀಗ ಟ್ರಂಪ್ ಅಧಿಕಾರಕ್ಕೆ ಬರುವ ಮೊದಲೇ ಓಡಿ ಹೋಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಿದ್ದಾಗ ರಷ್ಯಾ ಸೇನೆಯ ಯೋಧರು ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ಭೀಕರ ದಾಳಿ ನಡೆಸುತ್ತಿದ್ದಾರೆ.












Click it and Unblock the Notifications