Ukraine War: ರಷ್ಯಾ ಕೊಟ್ಟ ಆಘಾತಕ್ಕೆ ಉಕ್ರೇನ್ ಶೇಕ್- ಮತ್ತೊಂದು ಹಳ್ಳಿಯೂ ಮಿಸ್!

ಉಕ್ರೇನ್ ಕೈಯಲ್ಲಿ ಯುದ್ಧ ಮಾಡಲು ಆಗದಿದ್ದರೂ, ರಷ್ಯಾ ವಿರುದ್ಧ ಬಡಿದಾಡುವ ಸಾಹಸ ಮಾಡುತ್ತಲೇ ಇದೆ. ರಷ್ಯಾ & ಉಕ್ರೇನ್ ಯುದ್ಧ ಈಗಾಗಲೇ ಹಲವು ವರ್ಷ ಮುಗಿಸಿದ್ದರೂ, ಹಿಂಸೆ ನಿಲ್ಲುತ್ತಿಲ್ಲ. ಒಂದು ಕಡೆ ಉಕ್ರೇನ್ ತನ್ನ ಬಹುತೇಕ ಪ್ರದೇಶವನ್ನು ಕಳೆದುಕೊಂಡು ನರಳುತ್ತಿದೆ. ಹಾಗೇ ರಷ್ಯಾ ಕೂಡ ಕೆಲವೇ ಕೆಲವು ಹಳ್ಳಿಗಳನ್ನು ಕಳೆದುಕೊಂಡಿತ್ತು. ಈ ಪೈಕಿ ಇದೀಗ ಉಕ್ರೇನ್ ಕೈಯಿಂದ ಮತ್ತೆ ಹಳ್ಳಿ ಒಂದನ್ನು ವಾಪಸ್ ಕಿತ್ತುಕೊಂಡಿರುವ ಬಗ್ಗೆ ರಷ್ಯಾ ತಿಳಿಸಿದೆ.

ರಷ್ಯಾ & ಉಕ್ರೇನ್ ಯುದ್ಧ ಆಧುನಿಕ ಕಾಲದ ಅತ್ಯಂತ ದೊಡ್ಡ ವಿಪತ್ತು ಅಂತಾ ಹೇಳಬಹುದು. ನಿಮಗೆಲ್ಲಾ ಗೊತ್ತಿರುವಂತೆ 2022 ಫೆಬ್ರವರಿ ತಿಂಗಳಲ್ಲಿ ಆರಂಭವಾದ ರಷ್ಯಾ & ಉಕ್ರೇನ್ ಯುದ್ಧ ಇನ್ನೂ ನಿಂತಿಲ್ಲ. ಈ ಮೂಲಕ 2025ರ ಫೆಬ್ರವರಿ ತಿಂಗಳಿಗೆ 3 ವರ್ಷ ಪೂರೈಸಿದೆ ಈ ಯುದ್ಧ. ಈ ಸಮಯದಲ್ಲೇ ಯುದ್ಧ ನಿಲ್ಲಿಸಲು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಟ್ಟಿದ್ದರೂ ಪ್ರಯೋಜನ ಆಗಿಲ್ಲ. ಮತ್ತೊಂದು ಕಡೆ ಇಬ್ಬರ ನಡುವೆ ನಡೆಯುತ್ತಿರುವ ಈ ತಿಕ್ಕಾಟ ಇನ್ನಷ್ಟು ಹೆಚ್ಚಾಗಿದೆ. ಅದರಲ್ಲೂ ಇದೀಗ ರಷ್ಯಾ ಕೊಟ್ಟ ಆಘಾತಕ್ಕೆ ಉಕ್ರೇನ್ ಶೇಕ್ ಆಗಿದ್ದು, ಮತ್ತೊಂದು ಹಳ್ಳಿಯೂ ಉಕ್ರೇನ್ ಸೇನೆಯ ಕೈಯಿಂದ ಮಿಸ್ ಆಗಿ ಹೋಗಿದೆ.

Russia Claims Retaking of Village in Kursk Region from Ukrainian Forces

ರಷ್ಯಾ ಸೇನೆಯಿಂದ ಉಕ್ರೇನ್‌ಗೆ ಮರ್ಮಾಘಾತ!

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಎಷ್ಟೇ ಹೇಳಿದರೂ ಬುದ್ಧಿ ಬರುವಂತೆ ಕಾಣ್ತಿಲ್ಲ. ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಜೋರಾದ ಸಮಯದಲ್ಲೇ, ಉಕ್ರೇನ್ ಸೇನೆ ಇದೀಗ ರಷ್ಯಾ ವಿರುದ್ಧ ಪ್ರತಿದಾಳಿ ಶುರು ಮಾಡಲು ಅಮೆರಿಕ ಮೊರೆ ಹೋಗಿದೆ. ಅದಿರುಗಳನ್ನು ಅಂದರೆ, ಉಕ್ರೇನ್ ತನ್ನ ಬಳಿ ಇರುವ ಸಂಪನ್ಮೂಲ ಅಮೆರಿಕಗೆ ಮಾರುವ ಮೂಲಕ ರಷ್ಯಾಗೆ ಸೆಡ್ಡು ಹೊಡೆಯುವ ಪ್ಲಾನ್ ಹಾಕಿದೆ. ಆದರೆ ಇದೇ ಸಮಯದಲ್ಲಿ ಮರ್ಮಾಘಾತ ನೀಡಿದ ರಷ್ಯಾ ಸೇನೆ, ಉಕ್ರೇನ್ ಕೈಯಿಂದ ಮತ್ತೊಂದು ಹಳ್ಳಿ ಕಿತ್ತುಕೊಂಡು ಇನ್ನಷ್ಟು ಮುಂದೆ ನುಗ್ಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+