Ukraine War: ಉಕ್ರೇನ್ ಮೇಲೆ ಬಾಂಬ್ ಹಾಕಿದ ರಷ್ಯಾ ಸೇನೆ, ಎಲ್ಲಾ ಉಡೀಸ್!
ರಷ್ಯಾ & ಉಕ್ರೇನ್ ಯುದ್ಧ ಭಯಾನಕ ರೂಪ ಪಡೆಯುವ ಜೊತೆಗೆ ಆತಂಕ ಹೆಚ್ಚಿಸುತ್ತಿದೆ. ಯಾಕಂದ್ರೆ ಈ ಯುದ್ಧದಲ್ಲಿ ಎರಡೂ ದೇಶಗಳು ನ್ಯೂಕ್ಲಿಯರ್ ಅಂದ್ರೆ ಪರಮಾಣು ಅಸ್ತ್ರದ ಬಳಕೆ ಮಾಡಿದರೆ ಪರಿಸ್ಥಿತಿ ಏನು? ಎಂಬ ಭಯ ಕೂಡ ಕಾಡುತ್ತಿದೆ. ಪರಿಸ್ಥಿತಿ ಹೀಗೆ ಇದ್ದಾಗ ಇಂದು ರಷ್ಯಾ ಏನು ಎಡವಟ್ಟು ಮಾಡಿದೆ ಗೊತ್ತಾ? ಉಕ್ರೇನ್ ಮಾತ್ರವಲ್ಲದೆ ಇದೀಗ ಇಡೀ ಯುರೋಪ್ ಖಂಡವೇ ರಷ್ಯಾ ನಡೆಸುತ್ತಿರುವ ದಾಳಿಗೆ ಹೆದರಿರುವುದು ಏಕೆ? ಮುಂದೆ ಓದಿ.
ನಿಮಗೆಲ್ಲಾ ಗೊತ್ತಿರುವಂತೆ ರಷ್ಯಾ ಸೇನೆಯ ಶಕ್ತಿಯನ್ನು ನಾವು ಬಿಡಿಸಿ ಹೇಳಬೇಕಿಲ್ಲ. ರಷ್ಯಾ ಸೇನೆ ಬಲಕ್ಕೆ ಹೋಲಿಕೆ ಮಾಡಿದರೆ ಉಕ್ರೇನ್ ಮಿಲಟಿರಿ ತಾಕತ್ ಏನಕ್ಕೂ ಸಾಲುವುದು ಇಲ್ಲ ಬಿಡಿ. ಯಾಕಂದ್ರೆ ಖುದ್ದು ಅಮೆರಿಕಗೆ ಸವಾಲು ಎಸೆಯುವ ರಷ್ಯಾ ಸೇನೆ ಎದುರು ಉಕ್ರೇನ್ ಯಾವ ಲೆಕ್ಕ ಹೇಳಿ? ಸುಮಾರು ಮುಕ್ಕಾಲು ಶತಮಾನದಿಂದ ರಷ್ಯಾ ಸೇನೆ ಇಷ್ಟೇ ಬಲಿಷ್ಠ, ದೈತ್ಯವಾಗಿ ಬೆಳೆದು ನಿಂತಿದೆ. ಹೀಗಿದ್ದರೂ ರಷ್ಯಾ ಎದುರು ಶರಣಾಗುವ ಬದಲು ಉಕ್ರೇನ್ ಮಾತ್ರ ಹೋರಾಟ ಮಾಡುವ ಹುಚ್ಚು ಧೈರ್ಯ ತೋರಿಸುತ್ತಿದೆ. ಅದಕ್ಕೆ ತಕ್ಕ ಉತ್ತರ ಈಗ ಸಿಕ್ಕಿದ್ದು, ಉಕ್ರೇನ್ ಮೇಲೆ ರಷ್ಯಾ ಬಾಂಬ್ ಹಾಕಲು ಶುರು ಮಾಡಿದೆ.

ಉಕ್ರೇನ್ ವಿರುದ್ಧ ರಷ್ಯಾ ಬಾಂಬ್ ಅಟ್ಯಾಕ್!
ರಷ್ಯಾ ಸೇನೆಯಿಂದ ಉಕ್ರೇನ್ ದಕ್ಷಿಣ ಭಾಗದ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ, ಕೀವ್ ಅಂದ್ರೆ ಉಕ್ರೇನ್ ರಾಜಧಾನಿ ಮೇಲೆ ಭೀಕರವಾಗಿ ಬಾಂಬ್ ದಾಳಿ ನಡೆಸಲಾಗಿದೆ. ಹೀಗಾಗಿ, ಉಕ್ರೇನ್ ಮಿಲಿಟರಿಗೆ ರಷ್ಯಾ ಸಾಕಷ್ಟು ಘೋರವಾದ ಪೆಟ್ಟನ್ನೇ ನೀಡಿದೆ. ರಷ್ಯಾ ಸೇನೆಯಿಂದ ಈ ರೀತಿ ಬಾಂಬ್ ದಾಳಿ ನಡೆದ ನಂತರ ಉಕ್ರೇನ್ ಜನರು ಮತ್ತಷ್ಟು ಭಯಗೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಯಾವ ರೀತಿಯ ದಾಳಿಗಳು ನಡೆಯಬಹುದು? ಎಂಬ ಭಯ ಕೂಡ ಆವರಿಸಿದೆ.












Click it and Unblock the Notifications