ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ 60 ಸಾವಿರ ಟನ್ ಧಾನ್ಯ ಸರ್ವನಾಶ!
ಕೀವ್: ಉಕ್ರೇನ್ ವಿರುದ್ಧ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಕಳೆದ ಕೆಲವು ದಿನದಿಂದ ನಿರಂತರವಾಗಿ ಡ್ರೋನ್ & ಕ್ಷಿಪಣಿ ದಾಳಿ ನಡೆಸುತ್ತಿರುವ ರಷ್ಯಾ ಸೇನೆ, ಉಕ್ರೇನ್‌ಗೆ ಆಘಾತ ನೀಡಿದೆ. ಅದರಲ್ಲೂ ಮೂಲಸೌಕರ್ಯ ವ್ಯವಸ್ಥೆ ಹಾಗೂ ಆಹಾರ ಪದಾರ್ಥಗಳು ಕೂಡ ರಷ್ಯಾ ದಾಳಿಯಲ್ಲಿ ಮಣ್ಣುಪಾಲಾಗಿದೆ. ಈ ಮೂಲಕ ಮೊದಲೇ ಸಂಕಷ್ಟದಲ್ಲಿದ್ದ ಉಕ್ರೇನ್ ಜನರಿಗೆ ದಾರಿಯೇ ಕಾಣದಂತಾಗಿದೆ.
ಉಕ್ರೇನ್ ವಿರುದ್ಧ ದಾಳಿಗೆ ರಷ್ಯಾ ಡ್ರೋನ್‌ಗಳನ್ನು ಭಾರಿ ಪ್ರಮಾಣದಲ್ಲಿ ಬಳಕೆ ಮಾಡ್ತಿದೆ. ಹೀಗೆ ರಷ್ಯಾ ಸೇನೆ ಉಡಾಯಿಸಿದ್ದ 12 ಇರಾನಿ ಡ್ರೋನ್ ಮತ್ತು ಎರಡು ಕಲಿಬ್ ಕ್ಷಿಪಣಿಗಳನ್ನು ಉಕ್ರೇನ್ ಹೊಡೆದುರುಳಿಸಿದೆ. ಆದರೂ ಎಕ್-22, ಓನಿಕ್ಸ್ ಕ್ಷಿಪಣಿಗಳನ್ನ ಹೊಡೆದುರುಳಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗೆ ಹಾರಿಸಿದ ಕ್ಷಿಪಣಿ ಅಪ್ಪಳಿಸಿ ಕಟ್ಟಡಗಳು ಪೀಸ್ ಪೀಸ್ ಆಗಿವೆ. ಅವಶೇಷಗಳಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದು, 21ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೀಗೆ ನಿರಂತರ ದಾಳಿಯ ಪರಿಣಾಮ ಉಕ್ರೇನ್‌ನ ಬಂದರು ನಗರಿ ಒಡೆಸಾ ಛಿದ್ರ ಛಿದ್ರವಾಗಿದೆ.

ರೊಚ್ಚಿಗೆದ್ದ ಯುರೋಪ್ ಒಕ್ಕೂಟ!
ರಷ್ಯಾ ಈಗ ಉಕ್ರೇನ್ ವಿರುದ್ಧ ನಡೆಸುತ್ತಿರುವ ದಾಳಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಯುರೋಪ್ ಒಕ್ಕೂಟ ಗರಂ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯುರೋಪ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಜೋಸೆಪ್ ಬೋರೆಲ್, ಆಹಾರ ಧಾನ್ಯಗಳ ಸಂಗ್ರಹದ ಗೋದಾಮು ಗುರಿಯಾಗಿಸಿ ನಡೆಸಿರುವ ದಾಳಿಯನ್ನು ಖಂಡಿಸಿದ್ದಾರೆ. ರಷ್ಯಾ, ಧಾನ್ಯ ಸಾಗಣೆ ಒಪ್ಪಂದವನ್ನಷ್ಟೇ ಕಡಿದುಕೊಂಡಿಲ್ಲ ಇದರ ಜೊತೆಗೆ ಆಹಾರ ಧಾನ್ಯವನ್ನ ಸುಟ್ಟುಹಾಕುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಮೊದಲೇ ಹಳಸಿದ್ದ ಯುರೋಪ್ ಒಕ್ಕೂಟ ಹಾಗೂ ರಷ್ಯಾ ನಡುವಿನ ಸಂಬಂಧ ಮತ್ತಷ್ಟು ಕೆಟ್ಟು ಹೋಗಿದೆ.
ರಷ್ಯಾ ದಾಳಿಯ ಉದ್ದೇಶ ಏನು?
ಕಪ್ಪು ಸಮುದ್ರದ ಮೂಲಕ ಉಕ್ರೇನ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಂದರು ಒಡೆಸಾ ಮೇಲೆ ರಣಭೀಕರ ದಾಳಿ ನಡೆಸಲಾಗಿದೆ. ರಷ್ಯಾ ಇದೇ ನಗರವನ್ನು ಟಾರ್ಗೆಟ್ ಮಾಡಲು ಪ್ರಮುಖ ಕಾರಣ ಇದೆ. ಉಕ್ರೇನ್‌ನಿಂದ ಕಪ್ಪು ಸಮುದ್ರದ ಮಾರ್ಗವಾಗಿ ಹಡುಗುಗಳ ಮೂಲಕ ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ಸೇರಿದಂತೆ, ಏಷ್ಯಾ ದೇಶಗಳಿಗೆ ಆಹಾರ ಧಾನ್ಯಗಳ ಸಾಗಾಟಕ್ಕೆ ನೀಡಿದ್ದ ಅನುಮತಿ ರದ್ದಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಇಂತಹ ಕಠಿಣ ನಿಲುವು ತೆಗೆದುಕೊಂಡಿದೆ. ಈ ನಿರ್ಧಾರದ ಬೆನ್ನಲ್ಲೇ ಉಕ್ರೇನ್‌ನ ಪ್ರತಿಯೊಂದು ಪೋರ್ಟ್‌ಗಳನ್ನ ಪುಡಿ ಪುಡಿ ಮಾಡಿದೆ ರಷ್ಯಾ. ಹೀಗೆ ರಷ್ಯಾ ನಡೆಸುತ್ತಿರುವ ಭೀಕರ ದಾಳಿ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಹೀಗೆ ರಷ್ಯಾ ಮತ್ತು ಉಕ್ರೇನ್ ತಿಕ್ಕಾಟದಲ್ಲಿ ಸಾಮಾನ್ಯ ಜನ ಪರದಾಡುತ್ತಿದ್ದಾರೆ. ಯುದ್ಧ ಶುರುವಾದ ನಂತರ ಆಹಾರದ ಅಭಾವ ಎದುರಾಗಿರುವ ಸಂದರ್ಭದಲ್ಲೇ ಕಿರಿಕ್ ಇನ್ನಷ್ಟು ಜೋರಾಗಿದೆ. ಅದರಲ್ಲೂ ಬಂದರು ನಗರಗಳ ಮೇಲೆ ತೀವ್ರವಾಗಿ ದಾಳಿ ನಡೆಯುತ್ತಿರುವ ಕಾರಣ ಉಕ್ರೇನ್‌ಗೆ ಸರಬರಾಜು ಮಾಡುತ್ತಿದ್ದ ವಸ್ತುಗಳು ಕೂಡ ನಿಂತು ಹೋಗಿವೆ. ಈಗ ಅಮೆರಿಕ ಮತ್ತು ನ್ಯಾಟೋ ಒಕ್ಕೂಟ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನ ಇಡೀ ಜಗತ್ತೇ ಕಾದು ನೋಡುತ್ತಿದೆ.
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡ್ತಿದೆ. ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್‌ರ ಆಪ್ತರೇ ಈ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕಗೆ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಕಾರಣಕ್ಕೆ ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಲೆಕ್ಕಾಚಾರ ನೋಡಿದರೆ ಈವರೆಗೆ ಅಮೆರಿಕ ಸುಮಾರು 3ರಿಂದ 4 ಲಕ್ಷ ಕೋಟಿ ರೂಪಾಯಿ ನೆರವನ್ನು ಉಕ್ರೇನ್‌ಗೆ ಕಲ್ಪಿಸಿದೆ.












Click it and Unblock the Notifications