Ukraine & Russia: ಜಗತ್ತನ್ನೇ ನಾಶ ಮಾಡುವ ಬಾಂಬ್ ಹಾಕಲು ಸಜ್ಜಾದ ರಷ್ಯಾ ಮಿಲಿಟರಿ?

ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧ ನಡೆಯಬಾರದು ಅಂತಾ ಅದೆಷ್ಟೇ ಪ್ರಯತ್ನಗಳನ್ನ ಮಾಡಿದರೂ ಪ್ರಯೋಜನ ಆಗುತ್ತಿಲ್ಲ. ಕ್ಷಣಕ್ಷಣಕ್ಕೂ ಮನುಷ್ಯರು ಮತ್ತೊಂದು ಮಹಾಯುದ್ಧ ನಡೆಸಲು ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಉಗ್ರವಾಗುತ್ತಿದ್ದು, ಶೀಘ್ರದಲ್ಲೇ ಇಡೀ ಜಗತ್ತನ್ನೇ ನಾಶ ಮಾಡುವ ಬಾಂಬ್ ಹಾಕುವುದಕ್ಕೆ ರಷ್ಯಾ ಮಿಲಿಟರಿ ಸಜ್ಜಾಗಿರುವ ಸೂಚನೆ ಸಿಗುತ್ತಿದೆ! ಹಾಗಾದ್ರೆ ರಷ್ಯಾ ಬಳಿ ಇರುವ ಆ ಭಯಾನಕ ಬಾಂಬ್ ಯಾವುದು ಗೊತ್ತೆ? ಜಗತ್ತಿನಲ್ಲಿ ಯಾವುದೇ ದೇಶದ ಬಳಿ ಇರದ ಆ ಅಸ್ತ್ರ ಯಾವುದು?

ಉಕ್ರೇನ್ ಈಗ ಸುಮ್ಮನೆ ಇರದೆ ಇರುವೆ ಬಿಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಉಕ್ರೇನ್ ಸೇನೆ ಇದೀಗ ನೇರವಾಗಿ ರಷ್ಯಾ ಮೇಲೆ ದಾಳಿ ಮಾಡುತ್ತಿದೆ. ಅದರಲ್ಲೂ ರಷ್ಯಾ ನೆಲಕ್ಕೆ ನುಗ್ಗಿರುವ ಉಕ್ರೇನ್ ಮಿಲಿಟರಿ ಘೋರವಾಗಿ ಅಟ್ಯಾಕ್ ಮಾಡುತ್ತಿದೆ. ರಷ್ಯಾ ನೆಲದಲ್ಲಿ ಉಕ್ರೇನ್ ರಕ್ತಸಿಕ್ತ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ರಷ್ಯಾ ಕೂಡ ಗಡಿ ಭಾಗದಲ್ಲಿರುವ ಜಿಲ್ಲೆ & ಪ್ರದೇಶ ಕಳೆದುಕೊಂಡಿದೆ. ಹೀಗೆ ಮುಂದೆ, ಮುಂದೆ ನುಗ್ಗಿ ಬರುತ್ತಿರುವ ಉಕ್ರೇನ್ ಸೇನೆಯನ್ನ ಈಗ ತಡೆಯಲು ರಷ್ಯಾ ಸೈನಿಕರ ಕೈಯಲ್ಲೂ ಆಗುತ್ತಿಲ್ಲ. ಹೀಗಿದ್ದಾಗಲೇ ಹೊಸ ಭಯ ಆವರಿಸಿದೆ.

Russia Announced High Alert In Border For This Reason

1.21 ಲಕ್ಷ ಜನರು ಎಸ್ಕೇಪ್!

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ 2 ವರ್ಷ ಮುಗಿದು ಹೋಗಿದೆ. ಹೀಗೆ ಯುದ್ಧದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ಉಕ್ರೇನ್ ಈಗ ಕಂಬ್ಯಾಕ್ ಮಾಡಿ ರಷ್ಯಾ ನೆಲಕ್ಕೆ ತನ್ನ ಮಿಲಿಟರಿ ನುಗ್ಗಿಸಿದೆ. ಹೀಗೆ ಮುಂದೆ ಮುಂದೆ ನುಗ್ಗಿ ಬರುತ್ತಿರುವ ಉಕ್ರೇನ್ ಸೈನಿಕರು ರಷ್ಯಾದ ಹಲವು ಗಡಿ ಜಿಲ್ಲೆಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಉಕ್ರೇನ್‌ ಜೊತೆ ಗಡಿಯನ್ನು ಹಂಚಿಕೊಂಡ ಕರ್ಸ್ಕ್‌ ಪ್ರಾಂತ್ಯದ 9 ಜಿಲ್ಲೆಗಳಲ್ಲಿ 1.21 ಲಕ್ಷ ಜನರನ್ನ ಈಗ ರಷ್ಯಾ ಸ್ಥಳಾಂತರ ಮಾಡಿದೆ. ಇದೇ ಕ್ರಮ ಈಗ ಭಯ ಹುಟ್ಟಿಸಿದೆ.

ಪರಮಾಣು ಯುದ್ಧಕ್ಕೆ ರಷ್ಯಾ ಸಿದ್ಧತೆ?

ಈಗಿರುವ ಅನುಮಾನದ ಪ್ರಕಾರ ರಷ್ಯಾ ಸೇನೆ ಪರಮಾಣು ಯುದ್ಧಕ್ಕೆ ಸಜ್ಜಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ಬಾಂಬ್ ದಾಳಿ ಮಾಡಬಹುದಾಗಿದೆ ಎಂದು ಆರೋಪ ಮಾಡಲಾಗಿದೆ. ಅದರಲ್ಲೂ ಉಕ್ರೇನ್ ಸೇನೆ ಕಳೆದ ಎರಡು ವಾರದಿಂದ, ರಷ್ಯಾ ಗಡಿಯ ಒಳಗೆ ವೇಗವಾಗಿ ನುಗ್ಗುತ್ತಿದೆ. ಹೀಗಾಗಿ ಯಾವ ಕ್ಷಣದಲ್ಲಿ ಎಂತಹ ಪರಿಸ್ಥಿತಿ ಎದುರಾಗುತ್ತೋ ಅನ್ನೋ ಭಯದಲ್ಲಿ ಜನರು ನರಳುತ್ತಿದ್ದಾರೆ. ಯಾಕಂದ್ರೆ ರಷ್ಯಾ ತನ್ನ ಬಳಿ ಸಾವಿರಾರು ಪರಮಾಣು ಬಾಂಬ್ ಇಟ್ಟುಕೊಂಡಿದೆ. ಅಕಸ್ಮಾತ್ ರಷ್ಯಾ ಅವುಗಳನ್ನು ಬಳಸಿದರೆ ಇಡೀ ಭೂಮಿಯ ಮೇಲೆ ಅದರ ಪರಿಣಾಮ ಉಂಟಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+