1000 ದಿನಗಳನ್ನು ಪೂರೈಸುತ್ತಿದೆ ರಷ್ಯಾ & ಉಕ್ರೇನ್ ಮಹಾಯುದ್ಧ!

ರಷ್ಯಾ & ಉಕ್ರೇನ್ ನಡುವೆ ಫೈಟಿಂಗ್ ಶುರುವಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 1000 ದಿನಗಳೇ ಕಂಪ್ಲೀಟ್ ಆಗಲಿದೆ. ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡ ನಂತರ, ಒಂದೆರಡು ದಿನಗಳಲ್ಲಿ ಈ ಯುದ್ಧ ನಿಲ್ಲಲಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಯುದ್ಧ ನೋಡ ನೋಡುತ್ತಲೇ ಬರೋಬ್ಬರಿ 1000 ದಿನಗಳನ್ನ ಪೂರೈಸಲು ಮುಂದೆ ನುಗ್ತಿದೆ. ಹಾಗಾದರೆ ಈ ಸಾವಿರ ದಿನಗಳಲ್ಲಿ ಯಾರಿಗೆ ಹೆಚ್ಚು ನಷ್ಟವಾಗಿದೆ? ರಷ್ಯಾದ ಪರಿಸ್ಥಿತಿ ಹೇಗಿದೆ? ಮಾಹಿತಿ ತಿಳಿಯೋಣ ಬನ್ನಿ.

ಯುದ್ಧವೊಂದು ಸಾವಿರ ದಿನ ನಡೆದರೆ ಪರಿಸ್ಥಿತಿ ಹೇಗೆಲ್ಲಾ ಇರಬೇಡ ಹೇಳಿ? ಯಾಕಂದ್ರೆ ಒಂದು ಪ್ರದೇಶದಲ್ಲಿ ಯುದ್ಧ ನಡೆಯುತ್ತೆ ಅಂದ್ರೆ ಅಲ್ಲಿ ಮಾನವೀಯತೆಗೆ ಬೆಲೆ ಇರೋದಿಲ್ಲ. ಬರೀ ರಕ್ತ.. ರಕ್ತ.. ರಕ್ತ.. ಹೀಗೆ ರಕ್ತದಾಹ ಹೆಚ್ಚಾಗುತ್ತಲೇ ಇರುತ್ತದೆ. ಈ ಮಾತು ಉಕ್ರೇನ್ & ರಷ್ಯಾ ಯುದ್ಧದ ವಿಚಾರದಲ್ಲಿ ಕೂಡ ಬದಲಾಗಿಲ್ಲ. ಎರಡೂ ದೇಶಗಳು ಕಿತ್ತಾಡುತ್ತಾ ಈಗ ಬರೋಬ್ಬರಿ 1000 ದಿನಗಳನ್ನ ಯಶಸ್ವಿಯಾಗಿ ದೂಡಿದ್ದಾರೆ. ಆದರೆ ಇಲ್ಲಿ ಅತಿಹೆಚ್ಚು ನಷ್ಟ ಆಗಿರುವುದು ಉಕ್ರೇನ್ ಪಾಲಿಗೆ!

Russia And Ukraine War Will Be Complete 1000 Days In November 2024

ಯುದ್ಧ ನಿಂತರೂ ಉಕ್ರೇನ್ ಸರಿಯಾಗಲ್ಲ!

ಉಕ್ರೇನ್ ಈಗ ಯಾವ ಮಟ್ಟಿಗೆ ಹಾಳಾಗಿ ಹೋಗಿದೆ ಅಂದ್ರೆ, ಅಲ್ಲಿ ದಿಢೀರ್ ಅಂತಾ ಯುದ್ಧ ನಿಲ್ಲಿಸಿದರೂ, ಉಕ್ರೇನ್ ಮತ್ತೆ ಮೊದಲಿನ ಪರಿಸ್ಥಿತಿಗೆ ಬರಲು ಇನ್ನೂ ಹತ್ತಾರು ವರ್ಷ ಬೇಕು ಅಂತಾ ಹೇಳಬಹುದು. ಯಾಕಂದ್ರೆ ಯುದ್ಧದ ಕೆನ್ನಾಲಿಗೆಗೆ ಸಿಲುಕಿ ನರಳುತ್ತಿರುವ ಉಕ್ರೇನ್ ದೇಶದಲ್ಲಿ ರಸ್ತೆ, ಕಟ್ಟಡ ಸೇರಿದಂತೆ ಎಲ್ಲಾ ಮೂಲ ಸೌಕರ್ಯವೂ ಹಾಳಾಗಿ ಹೋಗಿದೆ. ಈ ಲೆಕ್ಕಾಚಾರದಲ್ಲಿ ಯುದ್ಧ ನಿಂತ ನಂತರ ಅಸಲಿ ಆತಂಕ ಶುರುವಾಗಲಿದೆ.

10 ವರ್ಷದ ಯುದ್ಧಕ್ಕೆ ಸಿದ್ಧತೆ?

ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಮತ್ತೊಂದು ಗಂಭೀರ ಆರೋಪ ಕೂಡ ಇದ್ದು, ಈ ಆರೋಪದ ಪ್ರಕಾರ ರಷ್ಯಾ ಇದೀಗ ಉಕ್ರೇನ್ ವಿರುದ್ಧ ಬರೋಬ್ಬರಿ 10 ವರ್ಷಗಳ ಕಾಲ ಸುದೀರ್ಘ ಯುದ್ಧಕ್ಕೆ ಸಜ್ಜಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಈ ರೀತಿ ಯುದ್ಧ ಇನ್ನಷ್ಟು ಘೋರವಾಗಲಿದ್ದು, ಮುಂದಿನ ದಿನಗಳಲ್ಲಿ ಉಕ್ರೇನ್ ಸಂಪೂರ್ಣ ಬೀದಿಗೆ ಬೀಳುವ ಭಯ ಕೂಡ ಕಾಡುತ್ತಿದೆ. ಅಲ್ಲದೆ ಅಮೆರಿಕ & ನ್ಯಾಟೋ ಒಕ್ಕೂಟದ ದೇಶಗಳಿಂದ ಉಕ್ರೇನ್ ಇದೀಗ ಹೆಚ್ಚನ ಸಹಾಯ ಬಯಸುತ್ತಿದೆ.

ಒಟ್ನಲ್ಲಿ 2022 ರಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ವಾರ್ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿನಾಶದ ಮುನ್ಸೂಚನೆ ಈ ಮೂಲಕ ಸಿಗುತ್ತಿದೆ. ಇದರಿಂದ ಬಚಾವ್ ಆಗಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು & ಯುದ್ಧ ನಿಲ್ಲಿಸಬೇಕು ಎಂಬುದು ಉಕ್ರೇನ್ ಆಗ್ರಹವಾಗಿದೆ. ಆದರೆ ಅದು ಕೂಡ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಉಕ್ರೇನ್ ದೇಶವನ್ನ ಇದೀಗ ಆ ದೇವರೇ ಕಾಪಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+