Russia and Ukraine War: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನಿಂಗ್‌ಗೆ ರಷ್ಯಾ ಗಡಗಡ!
Russia and Ukraine War: ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು. ಇದೀಗ ರಷ್ಯಾಗೆ ಚಳಿ ಬಿಡಿಸುವುದಕ್ಕೆ ಮುಂದಾಗಿದ್ದಾರೆ. ಹೌದು ನಾನು ಅಧಿಕಾರಕ್ಕೆ ಬಂದ ಮೇಲೆ ವಿಶ್ವದ ವಿವಿಧ ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಅವರು ಚುನಾವಣೆ ಪ್ರಚಾರದ ಸಮಯದಲ್ಲೇ ಭರವಸೆ ಕೊಟ್ಟಿದ್ದರು. ಅದರಂತೆ ಅವರು ಅಧಿಕಾರಕ್ಕೆ ಬರುವ ಅಥವಾ ಪ್ರಮಾಣವಚನ ಸ್ವೀಕರಿಸುವುದಕ್ಕೆ ಮೂರು ದಿನಗಳು ಇರುವಂತೆಯೇ ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವೆ ಕದನ ವಿರಾಮ ಘೋಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅವರ ಕಣ್ಣು ರಷ್ಯಾ ಹಾಗೂ ಉಕ್ರೇನ್ ಮೇಲೆ ಬಿದ್ದಿದೆ. ಈ ಎರಡು ದೇಶಗಳ ನಡುವಿನ ಯುದ್ಧದಿಂದ ಸಾವಿರಾರು ಜನ ಮೃತಪಟ್ಟಿದ್ದಾರೆ. ಎರಡೂ ದೇಶಗಳಲ್ಲೂ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಅಲ್ಲದೆ ಈ ದೇಶಗಳ ಯುದ್ಧ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಗೆ ಭಾರೀ ಪೆಟ್ಟುಕೊಟ್ಟಿದೆ.
ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಯುದ್ಧ ನಿಲ್ಲಿಸುವ ಮಹತ್ವದ ನಿರ್ಧಾರವನ್ನು ಡೊನಾಲ್ಡ್ ಟ್ರಂಪ್ ಅವರು ಮಾಡಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ರಷ್ಯಾ ಯುದ್ಧವನ್ನು ನಿಲ್ಲಿಸಬೇಕು ಎಂದು ಟ್ರಂಪ್ ಸೂಚನೆ ಕೊಡುತ್ತಲ್ಲೇ ಇದ್ದಾರೆ. ರಷ್ಯಾ ಯುದ್ಧ ನಿಲ್ಲಿಸಬೇಕು ಅಂತ ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಟ್ರಂಪ್ ಕಾಲ್ ಮಾಡಿ ಸೂಚನೆ ಕೊಟ್ಟಿದ್ದರು. ಆದರೆ ದೊಡ್ಡಣ್ಣನ ಆದೇಶಕ್ಕೆ ರಷ್ಯಾ ಕ್ಯಾರೇ ಎಂದಿಲ್ಲ. ಇದು ಟ್ರಂಪ್ ಕೋಪ ಜಾಸ್ತಿ ಆಗುವುದಕ್ಕೆ ಕಾರಣವಾಗಿದೆ. ರಷ್ಯಾ ಮೊಂಡಾಟವನ್ನು ಗಂಭೀರವಾಗಿಯೇ ತೆಗೆದುಕೊಂಡಿರುವ ಡೊನಾಲ್ಡ್ ಟ್ರಂಪ್ ಅವರು ರಷ್ಯಾಗೆ ಶಾಕ್ ಕೊಟ್ಟಿದ್ದಾರೆ.

ದೊಡ್ಡ ವಾರ್ನಿಂಗ್: ರಷ್ಯಾ ಕಂಗಾಲಾಗುವಂತಹ ಸೂಚನೆಯೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಟ್ಟಿದ್ದಾರೆ. ಈ ಕೂಡಲೇ ಉಕ್ರೇನ್ ವಿರುದ್ಧ ಯುದ್ಧವನ್ನು ನಿಲ್ಲಿಸಬೇಕು. ಇಲ್ಲದೆ ಇದ್ದರೆ ರಷ್ಯಾದ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಯುದ್ಧವನ್ನು ಈ ಕೂಡಲೇ ನಿಲ್ಲಿಸಬೇಕು. ಇಲ್ಲ ಎಂದಾದರೆ ರಷ್ಯಾದ ಮೇಲೆ ಹೆಚ್ಚು ತೆರಿಗೆ ಹಾಗೂ ಇನ್ನಷ್ಟು ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಪ್ರಾರಂಭಿಸಿದ ಬೆನ್ನಲ್ಲೇ ರಷ್ಯಾದ ಮೇಲೆ ಅಮೆರಿಕ ಸೇರಿದಂತೆ ಹಲವು ದೇಶಗಳು ಈಗಾಗಲೇ ಗಂಭೀರ ನಿರ್ಬಂಧಗಳನ್ನು ಹೇರಿವೆ. ಅಂದರೆ ರಷ್ಯಾದ ಉತ್ಪನ್ನಗಳ ಮಾರಾಟಕ್ಕೆ ಜಾಸ್ತಿ ಬೆಲೆ, ರಷ್ಯಾ ವಸ್ತುಗಳನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ಹೆಚ್ಚು ತೆರಿಗೆ ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಇದೀಗ ಯುದ್ಧವನ್ನು ನಿಲ್ಲಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ರಷ್ಯಾಗೆ ಫಿಕ್ಸ್ ಅಂತ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ರಷ್ಯಾಗೆ ಬೆಂಬಲಿಸುವ ರಾಷ್ಟ್ರಗಳಿಗೂ ವಾರ್ನಿಂಗ್: ಇನ್ನು ಇದೀಗ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾಗೆ ಮಾತ್ರ ಎಚ್ಚರಿಕೆ ಕೊಟ್ಟಿಲ್ಲ. ರಷ್ಯಾಗೆ ಬೆಂಬಲ ಸೂಚಿಸುವ ದೇಶಗಳಿಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಆಘಾತಕಾರಿ ವಿಷಯವೆಂದರೆ ರಷ್ಯಾದೊಂದಿಗೆ ಭಾರತ ಭಾರೀ ವ್ಯವಹಾರ ನಡೆಸಿದೆ. ಉಕ್ರೇನ್ - ರಷ್ಯಾ ಯುದ್ಧದ ವಿಷಯದಲ್ಲಿ ಭಾರತ ತಟಸ್ಥ ನಿಲುವನ್ನು ಹೊಂದಿದೆ. ಅಂದರೆ ಭಾರತ ಯಾರ ಪರವೂ ಅಲ್ಲ. ನಮಗೆ ಈ ಯುದ್ಧವನ್ನು ನಿಲ್ಲಿಸುವುದಕ್ಕೆ ಈಗ ಬೇರೆ ಯಾವುದೇ ಆಪ್ಷನ್‌ಗಳು ಕಾಣಿಸುತ್ತಿಲ್ಲ.
ರಷ್ಯಾದವರಿಗೆ ಕಷ್ಟ ಕೊಡಲಾರೆ: ರಷ್ಯಾನ್ನರಿಗೆ ಕಷ್ಟ ಕೊಡುವುದಕ್ಕೆ ನಾನು ಇಷ್ಟಪಡಲ್ಲ. ನಾನು ಅಲ್ಲಿನ ಜನರನ್ನು ಪ್ರೀತಿಸುತ್ತೇನೆ. ಅಲ್ಲದೆ ರಷ್ಯಾದೊಂದಿಗೆ ಹಾಗೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಒಳ್ಳೆಯ ಸಂಬಂಧವನ್ನು ಮುಂದುವರಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.












Click it and Unblock the Notifications