Russia & Ukraine War: 1000 ದಿನ ಪೂರೈಸಿದ ಉಕ್ರೇನ್ & ರಷ್ಯಾ ಬಡಿದಾಟ!

ರಷ್ಯಾ & ಉಕ್ರೇನ್ ನಡುವೆ ಘೋರ ಯುದ್ಧ ಶುರುವಾಗಿ 1000 ದಿನ ಮುಗಿದು ಹೋಗಿದ್ದು, ಯುದ್ಧದ ಕರಾಳ ಮುಖ ಮತ್ತೊಮ್ಮೆ ಜಗತ್ತಿನ ಎದುರು ಅನಾವರಣ ಆಗಿದೆ. 2022 ರಲ್ಲಿ ಈ ಯುದ್ಧ ಶುರುವಾಗಿ ಜಗತ್ತಿನ ನೆಮ್ಮದಿ ಕೆಡಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಯುದ್ಧ ನಿಂತು ಹೋಗುತ್ತೆ ಎಂಬ ನಿರೀಕ್ಷೆಗಳೂ ಇದ್ದವು. ಹೀಗಿದ್ದರೂ ನೋಡ ನೋಡುತ್ತಲೇ 1000 ದಿನಗಳ ಮಹಾ ಯಾನ ಪೂರೈಸಿರುವ ರಷ್ಯಾ & ಉಕ್ರೇನ್ ವಾರ್ ಕಥೆ ಏನಾಗಿದೆ ಗೊತ್ತೆ?

ರಷ್ಯಾ ಒಂದು ಕಡೆ ಜಗತ್ತಿನ ನಂಬರ್-1 ಪಟ್ಟಕ್ಕೆ ಪೈಪೋಟಿ ನೀಡುತ್ತಲೇ ಬಂದಿದೆ. ಆದರೆ ರಷ್ಯಾ ದೇಶದ ಆ ಜನ್ಮ ವೈರಿ ಅಮೆರಿಕ ಮಾತ್ರ ಪದೇ ಪದೇ ಕಾಲು ಕೆರೆದುಕೊಂಡು ಜಗಳ ಮಾಡುತ್ತಾ ಬೆಂಕಿ ಹಚ್ಚುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ ಉಕ್ರೇನ್‌ನ ನ್ಯಾಟೋ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಅಮೆರಿಕ ತಯಾರಿ ನಡೆಸಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಈ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ರಷ್ಯಾ ತನ್ನ ಬಳಿ ಇರುವ ಹತ್ಯಾರಗಳನ್ನ ಹೊರಗೆ ತೆಗೆದು ನೇರವಾಗಿ ಯುದ್ಧಕ್ಕೆ ಆಹ್ವಾನ ನೀಡಿಯೇ ಬಿಟ್ಟಿತ್ತು!

Russia And Ukraine War Reaches Significant Milestone of 1000 Days

ಹಿಂಸೆಯ ಕೂಪವಾಗಿದೆ ಉಕ್ರೇನ್ ನೆಲ!

2022ರ ಫೆಬ್ರವರಿ ತಿಂಗಳಲ್ಲಿ, ರಷ್ಯಾ ಹೀಗೆ ಯುದ್ಧ ಘೋಷಣೆ ಮಾಡಿ ಉಕ್ರೇನ್ ವಿರುದ್ಧದ ಯುದ್ಧ ಆರಂಭ ಮಾಡಿತ್ತು. ಹೀಗೆ ನುಗ್ಗಿ ಬಂದ ರಷ್ಯಾ ಸೈನಿಕರ ಏಟು ತಡೆಯಲು ಆಗದ ಉಕ್ರೇನ್ ಮಾತ್ರ ನರಳಿ ಹೋಗಿದೆ. ಈಗಾಗಲೇ ರಷ್ಯಾ ಸೇನೆ ಭಾಗಶಃ ಉಕ್ರೇನ್ ದೇಶವನ್ನು, ಉಕ್ರೇನ್ ರಾಜಧಾನಿ ಸುತ್ತಮುತ್ತಲ ಜಾಗವನ್ನು ತನ್ನ ವಶಕ್ಕೆ ಪಡೆದಿದೆ. ಹಾಗೇ ಲಕ್ಷ, ಲಕ್ಷ ಸೈನಿಕರು ಈ ಕಿತ್ತಾಟದಲ್ಲಿ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗಲೇ 1000 ದಿನಗಳ ಪಯಣವನ್ನು ಮುಗಿಸಿದೆ ರಷ್ಯಾ & ಉಕ್ರೇನ್ ನಡುವಿನ ಘೋರ ಯುದ್ಧ.

ಯುದ್ಧ ನಿಲ್ಲಿಸುತ್ತಾರಾ ಡೊನಾಲ್ಡ್ ಟ್ರಂಪ್?

ರಷ್ಯಾ & ಉಕ್ರೇನ್ ಯುದ್ಧ ಸಾಕಷ್ಟು ಘೋರವಾಗಿರುವ ಸಮಯದಲ್ಲೇ, ಅಮೆರಿಕದಲ್ಲಿ ಈ ಸಮಯದಲ್ಲಿ ದೊಡ್ಡ ಬದಲಾವಣೆ ನಡೆಯುತ್ತಿದೆ. ಅದು ಏನಂದ್ರೆ, ಜೋ ಬೈಡನ್ ಆಡಳಿತ ನೋಡಿ ಬೇಸತ್ತು ಹೋಗಿದ್ದ ಅಮೆರಿಕದ ಮತದಾರರು ಈಗ ಡೊನಾಲ್ಡ್ ಟ್ರಂಪ್ ಅವರಿಗೆ ಚಾನ್ಸ್ ಕೊಟ್ಟಿದ್ದಾರೆ. ಯಾಕಂದ್ರೆ ಉಕ್ರೇನ್ & ರಷ್ಯಾ ಯುದ್ಧದಲ್ಲಿ ಅಮೆರಿಕ ಎಂಟ್ರಿ ಆಗಿರುವುದು ಅಮೆರಿಕದ ಮತದಾರರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಡೊನಾಲ್ಡ್ ಟ್ರಂಪ್ ಯುದ್ಧವನ್ನ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡುವ ಶಪಥ ಮಾಡಿದ್ದಾರೆ.

ಚುನಾವಣೆಗೆ ಮೊದಲು ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮತದಾರರಿಗೆ ನೀಡಿರುವ ಹಲವು ಭರವಸೆಗಳ ಪೈಕಿ, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಭರವಸೆ ಕೂಡ ಒಂದು. ಹೀಗಾಗಿ ಈ ಭರವಸೆ ಆದಷ್ಟು ಬೇಗ ಈಡೇರುತ್ತೆ ಎಂಬ ನಿರೀಕ್ಷೆಯಲ್ಲಿ ಜನರು ಕೂಡ ಇದ್ದಾರೆ. ಈಗಾಗಲೇ ಒಂದು ಬಾರಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ಡೊನಾಲ್ಡ್ ಟ್ರಂಪ್ ಅವರ ನಡುವೆ ಮಹತ್ವದ ಮಾತುಕತೆ ಕೂಡ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+