Russia & Ukraine: ರೊಚ್ಚಿಗೆದ್ದ ಉಕ್ರೇನ್ ಅಧ್ಯಕ್ಷ, ಅಮೆರಿಕ ಮಾತು ಕೇಳಿದ ನ್ಯಾಟೋ ರಾಷ್ಟ್ರಗಳಿಗೆ ನಡುಕ!
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು ಅನ್ನೋ ಒನ್‌ಲೈನ್ ಅಜೆಂಡಾ ಇಟ್ಟುಕೊಂಡಿರುವ ಇಡೀ ಜಗತ್ತು, ಶಾಂತಿ ಮಾತುಕತೆ ನಡೆಸಿ ಯುದ್ಧದ ಕಥೆ ಮುಗಿಸಲು ಪ್ರಯತ್ನ ಮಾಡುತ್ತಿದೆ. ಆದರೆ ರಷ್ಯಾ ಯುದ್ಧ ನಿಲ್ಲಿಸುವ ಮಾತಿಗೆ ಇನ್ನೂ ಪೂರ್ತಿ ಒಪ್ಪಿಗೆ ಸೂಚಿಸಿಲ್ಲ, ಇನ್ನೊಂದು ಕಡೆ ಉಕ್ರೇನ್ ಕೂಡ ಸೈಲೆಂಟ್ ಆಗಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ, ಪರಿಸ್ಥಿತಿ ಕೂಡ ಕೈಮೀರುತ್ತಿದೆ. ಇದೇ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ಹೊಸ ಬತ್ತಿ ಇಟ್ಟು ನಸುನಗೆ ಬೀರಿದ್ದಾರೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಯಲ್ಲಿ ಮಾತುಕತೆ ನಡೆದಿದ್ದೇ ತಡ ಉಕ್ರೇನ್ ರೊಚ್ಚಿಗೆದ್ದು ಕೂತಿದೆ. ನಾವು ಇಲ್ಲದೆ ಯಾವುದೇ ರೀತಿ ಮಾತುಕತೆ ನಡೆಯಬಾರದು ಅನ್ನೋ ಡಿಮ್ಯಾಂಡ್ ಇಡಲಾಗಿದೆ. ಅದರಲ್ಲೂ ರಷ್ಯಾ ಸೇನೆ ವಶಕ್ಕೆ ಪಡೆದಿರುವ ಉಕ್ರೇನ್ ಜಾಗಗಳನ್ನು ಮರಳಿ ನೀಡುವ ಕುರಿತು ದೊಡ್ಡ ಚರ್ಚೆ ಈಗ ನಡೆಯುತ್ತಿದೆ. ಆದರೆ ರಷ್ಯಾ ಮಾತ್ರ ಈ ಒತ್ತಡಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ಯುದ್ಧ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಭಯ ಆವರಿಸಿದೆ.

ಉಕ್ರೇನ್ ಅಧ್ಯಕ್ಷ ಸೈಲೆಂಟ್ ಆಗಬೇಕು!
ರಷ್ಯಾ ದಾಳಿ ಮಾಡುತ್ತಿರುವ ರೀತಿ ನೋಡಿದರೆ, ಇನ್ನು ಕೆಲವೇ ದಿನಗಳಲ್ಲಿ ಇಡೀ ಉಕ್ರೇನ್ ರಷ್ಯಾ ಹಿಡಿತಕ್ಕೆ ಸಿಲುಕುವ ಅಪಾಯ ಕಾಡುತ್ತಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಈ ವಿಚಾರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಯುದ್ಧ ನಿಲ್ಲಬೇಕು ಅನ್ನೋದಾದರೆ ಈಗ ಉಕ್ರೇನ್ ಅಧ್ಯಕ್ಷ ಸೈಲೆಂಟ್ ಆಗಬೇಕು ಎನ್ನುವ ಸಲಹೆ ನೀಡಲಾಗುತ್ತಿದೆ. ಆದರೂ, ಉಕ್ರೇನ್ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಹಾಗೇ ರಷ್ಯಾ ತನ್ನಲ್ಲಿ ಇರುವ ಡ್ರೋನ್ & ಮಿಸೈಲ್ ಮೂಲಕ ದಾಳಿಯನ್ನು ಮಾಡುತ್ತಲೇ ಇದೆ.
ಅಮೆರಿಕ ಕೊಡುವ ಸಹಾಯವೂ ಬಂದ್!
ಉಕ್ರೇನ್‌ಗೆ ಕಾಡುತ್ತಿರುವ ನೋವು ಒಂದೊಂದಲ್ಲ, ಯಾಕಂದ್ರೆ ಈಗಾಗಲೇ ಆರ್ಥಿಕವಾಗಿಯು ಬೀದಿಗೆ ಬಿದ್ದಿರುವ ಉಕ್ರೇನ್‌ಗೆ ಅಮೆರಿಕ ನೀಡುತ್ತಿದ್ದ ಅನುದಾನ ಕೂಡ ಬಂದ್ ಆಗಿಬಿಟ್ಟಿದೆ. ರಷ್ಯಾ & ಉಕ್ರೇನ್ ಜಗಳದಲ್ಲಿ ಮಧ್ಯ ಬಂದ ಅಮೆರಿಕಗೆ ದೊಡ್ಡ ದೊಡ್ಡ ಸಮಸ್ಯೆಯೇ ಕಾಡ್ತಿದೆ. ಒಂದು ಕಡೆ ಆರ್ಥಿಕವಾಗಿ ಅಮೆರಿಕ ನರಳುತ್ತಿರುವ ಸಮಯದಲ್ಲಿ ಉಕ್ರೇನ್‌ನ ನೆರವಿಗೆ ಬರಬೇಕು ಎಂಬ ಅನಿವಾರ್ಯತೆ ಇತ್ತು.
ಆದರೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧಿಕಾರ ಹಿಡಿದಿದ್ದೇ ತಡ, ಯಾವುದೇ ಅನುದಾನ ಕೊಡಲ್ಲ ಎಂದು ಮೊದಲ ಆಘಾತ ನೀಡಿದ್ದರು. ಹೀಗೆ ಎಲ್ಲಾ ಕೈಮೀರಿ ಹೋಗಿರುವಾಗಲೇ ರಷ್ಯಾ ಸೇನೆ ಉಕ್ರೇನ್‌ಗೆ ಮತ್ತೊಂದು ಆಘಾತ ನೀಡಿದೆ. ಸದ್ಯ ತನ್ನ ಬಳಿ ಇರುವ ಅತ್ಯಾಧುನಿಕ ಮಿಸೈಲ್ ಮೂಲಕ ಇನ್ನಷ್ಟು ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಆದಷ್ಟು ಬೇಗ ಈ ಯುದ್ಧ ನಿಲ್ಲಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಹಾಗೇ ಇನ್ನೊಂದು ಕಡೆ, ನ್ಯಾಟೋ ಒಕ್ಕೂಟದ ದೇಶಗಳ ವಿರುದ್ಧವೇ ಅಮೆರಿಕ ಮಾತನಾಡುತ್ತಿದ್ದು ಅಲ್ಲೂ ಆತಂಕ ಶುರುವಾಗಿದೆ.












Click it and Unblock the Notifications