Ukraine War: ಜಗತ್ತು ನಾಶ ಮಾಡಲು ಸಿದ್ಧತೆ ನಡೆಸಿದ ಮಹಾಯುದ್ಧ? ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಬೇಕು!
ರಷ್ಯಾ ಸೇನೆ ತನ್ನ ಬಳಿ ಇರುವ ಎಲ್ಲಾ ಪ್ರಮುಖ ಅಸ್ತ್ರಗಳನ್ನು ಈಗ ಉಕ್ರೇನ್ ವಿರುದ್ಧವೇ ಪ್ರಯೋಗ ಮಾಡುವ ಪಣತೊಟ್ಟು ನಿಂತಂತೆ ಕಾಣುತ್ತಿದೆ. ಉಕ್ರೇನ್ ವಿರುದ್ಧ ಈಗ ರಷ್ಯಾದ ಸೇನೆ ನಡೆಸುತ್ತಿರುವ ಭೀಕರ ದಾಳಿಯ ರೂಪ ನೋಡಿದರೆ ಇನ್ನೇನು ಪರಮಾಣು ಬಾಂಬ್‌ನ ಬಳಕೆ ಕೂಡ ಗ್ಯಾರಂಟಿ ಎಂಬ ಭಯ ಕಾಡುತ್ತಿದೆ. ಇಷ್ಟೆಲ್ಲಾ ಭಯದ ನಡುವೆ ಉಕ್ರೇನ್‌ನ ಸೇನೆ ಕೂಡ ರಷ್ಯಾಗೆ ತಿರುಗೇಟು ನೀಡುವ ಭರದಲ್ಲಿ ದಾಳಿ ಮಾಡುತ್ತಿದೆ. ಹೀಗೆ, ಇಬ್ಬರೂ ಸೇರಿ ಇಡೀ ಜಗತ್ತನ್ನು ಸರ್ವನಾಶ ಮಾಡಲು ಸಜ್ಜಾಗಿದ್ದಾರಾ?
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಮೊದಲು ಹಾನಿಗೆ ಒಳಗಾಗಿದ್ದು ಯುರೋಪ್ ದೇಶಗಳು. ಯುರೋಪ್ ಅಂದ್ರೆ ಅಭಿವೃದ್ಧಿ, ಯುರೋಪ್ ದೇಶಕ್ಕೆ ಹೋಗಿ ಸೆಟಲ್ ಆಗಿಬಿಟ್ಟರೆ ನೆಮ್ಮದಿಯಾಗಿ ಇದ್ದು ಬಿಡಬಹುದು ಅನ್ನೋ ಮಾತು ಇತ್ತು. ಆದರೆ, ಈಗ ಅದೇ ಯುರೋಪ್ ಹಾಳು ಕೊಂಪೆಯಾಗಿದ್ದು & ಯುರೋಪ್ ದೇಶಗಳಲ್ಲಿ ಸಾವಿರಾರು ಸಮಸ್ಯೆಗಳು ಕಾಡುತ್ತಿವೆ. ರಷ್ಯಾ & ಉಕ್ರೇನ್ ಯುದ್ಧ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದು, ಈಗಾಗಲೇ ಯುರೋಪ್‌ನ ಹಲವು ದೇಶಗಳು ನರಳಾಡಿ ಹೋಗಿವೆ. ಇಂತಹ ಸಮಯದಲ್ಲೇ ಮತ್ತೊಮ್ಮೆ ರಷ್ಯಾ ಸೇನೆ, ಉಕ್ರೇನ್ ವಿರುದ್ಧ ಭೀಕರ ಕಾರ್ಯಾಚರಣೆ ಶುರು ಮಾಡಿದೆ.

ಉಕ್ರೇನ್ ಉಡೀಸ್ ಮಾಡಲು ಪ್ಲಾನ್?
2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧವು 3 ವರ್ಷ ಪೂರೈಸಿದ್ದು, ಇದು ಸಂಚಲನ ಸೃಷ್ಟಿ ಮಾಡುತ್ತಿರುವ ಈ ಸಮಯದಲ್ಲೇ ಮತ್ತೆ ರಷ್ಯಾ ಮತ್ತು ಉಕ್ರೇನ್ ಸೇನೆ ಒಬ್ಬರ ಮೇಲೆ ಮತ್ತೊಬ್ಬರು ಭೀಕರ ದಾಳಿ ನಡೆಸುತ್ತಿದ್ದಾರೆ. ಗಡಿ ಭಾಗದಲ್ಲಿ ಹೆಚ್ಚಾಗುತ್ತಿರುವ ಈ ರೀತಿಯ ದಾಳಿ ಕಂಡು ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಇಷ್ಟು ಮಾತ್ರವಲ್ಲ ಈಗ ಉಕ್ರೇನ್ ರಾಜಧಾನಿ ಕೂಡ ಭಯದ ನೆರಳಲ್ಲಿ ನರಳುವ ಸ್ಥಿತಿ ಇದೆ. ಕೀವ್ ಮೇಲೆ ಈಗಾಗಲೇ ರಷ್ಯಾ ಡೆಡ್ಲಿ ಅಟ್ಯಾಕ್ ಮಾಡಿದ್ದು, ಇದೀಗ ಮತ್ತೊಂದು ಪ್ಲಾನ್ ಮಾಡಿದೆ. ಇಂತಹ ಸಮಯದಲ್ಲೇ ಉಕ್ರೇನ್ ಕೂಡ ಆಘಾತ ನೀಡುತ್ತಿದೆ...












Click it and Unblock the Notifications