ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ?
ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಉಕ್ರೇನ್ ಸೇನೆ ರಷ್ಯಾ ರಾಜಧಾನಿ ಮೇಲೆ ಡ್ರೋನ್ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿರುವ ರಷ್ಯಾ, ತನ್ನ ರಾಜಧಾನಿಯ ಕಟ್ಟಡಗಳಿಗೆ ಉಕ್ರೇನ್ ಡ್ರೋನ್ ಹಾನಿ ಮಾಡಿವೆ ಎಂದು ಆರೋಪ ಮಾಡಿದೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ಮತ್ತಷ್ಟು ಕಾವು ಪಡೆದಿದೆ.
ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‌ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಸಾಕಷ್ಟು ಸಹಾಯ ಮಾಡುತ್ತಿವೆ. ಅದರಲ್ಲೂ ಉಕ್ರೇನ್‌ಗೆ ಅತ್ಯಾಧುನಿಕ ಡ್ರೋನ್‌ಗಳನ್ನೇ ನೀಡಲಾಗಿದೆ. ಹೀಗೆ ತನ್ನ ಬಳಿ ಇರುವ ಆಧುನಿಕ ಡ್ರೋನ್‌ಗಳನ್ನ ಬಳಸಿ ಉಕ್ರೇನ್ ಈ ರೀತಿ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೆ ರಷ್ಯಾ ರಾಜಧಾನಿ ಮಾಸ್ಕೋ ಆಗಸದಲ್ಲಿ ಡ್ರೋನ್‌ಗಳು ಹಾರುತ್ತಿರುವ ದೃಶ್ಯ ವೈರಲ್ ಆಗಿದೆ. ಹೀಗೆ ಮಾಸ್ಕೋ ಆಗಸಕ್ಕೆ ನುಗ್ಗಿರುವ ಡ್ರೋನ್‌ಗಳು, 2 ಕಟ್ಟಡಗಳ ಮೇಲೆ ಭೀಕರ ದಾಳಿ ಮಾಡಿವೆ ಎಂದಿದೆ ರಷ್ಯಾ. ನಿನ್ನೆ, ಮೊನ್ನೆಯಷ್ಟೇ ಈ ಎರಡೂ ದೇಶಗಳ ನಡುವೆ ಮಹತ್ವದ ಯುದ್ಧ ಒಪ್ಪಂದಗಳು ಮುರಿದು ಬಿದ್ದಿದ್ದವು.

ಕ್ರಿಮಿಯಾ ಮೇಲೂ ನಿಲ್ಲದ ದಾಳಿ?
ರಷ್ಯಾ ರಾಜಧಾನಿ ಮಾಸ್ಕೋ ಸೇರಿದಂತೆ ಉಕ್ರೇನ್‌ನಿಂದ ವಶಕ್ಕೆ ಪಡೆದ ಕ್ರಿಮಿಯಾ ಮೇಲೆ ಕೂಡ ದಾಳಿ ನಡೆದಿದೆ ಅಂತಿದೆ ರಷ್ಯಾ. ಬರೋಬ್ಬರಿ ಹತ್ತು ವರ್ಷದಿಂದ ಕ್ರಿಮಿಯಾ ಭಾಗ ರಷ್ಯಾ ವಶದಲ್ಲೇ ಇದೆ. ಈಗ ರಷ್ಯಾ ವಿರುದ್ಧ ರೊಚ್ಚಿಗೆದ್ದಿರುವ ಉಕ್ರೇನ್ ಈ ರೀತಿಯಾಗಿ ತನ್ನಲ್ಲಿರುವ ಪ್ರಬಲ ಅಸ್ತ್ರಗಳನ್ನು ಬಳಸಿ ಭೀಕರ ದಾಳಿ ನಡೆಸುತ್ತಿದೆ ಎನ್ನಲಾಗಿದೆ. ಇನ್ನು ಉಕ್ರೇನ್ ದಾಳಿ ಪರಿಣಾಮ ಸಾವು & ನೋವಿನ ಬಗ್ಗೆ ವರದಿ ಹೊರಬಿದ್ದಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ರಷ್ಯಾ ಕೂಡ ಮತ್ತಷ್ಟು ಪ್ರಬಲ ದಾಳಿ ನಡೆಸುವ ಸಾಧ್ಯತೆ ಇದೆ. ಆದ್ರೆ ಈ ಎಲ್ಲಾ ಬೆಳವಣಿಗೆಗಳು ಎರಡೂ ದೇಶದ ಸಾಮಾನ್ಯ ಜನರ ನಿದ್ದೆಗೆಡಿಸಿದೆ.
ಉಕ್ರೇನ್ ಕರಾವಳಿ ಮೇಲೆ ಡೆಡ್ಲಿ ಅಟ್ಯಾಕ್!
ಕಳೆದ ಕೆಲ ದಿನಗಳಿಂದ ಕಪ್ಪು ಸಮುದ್ರದ ಮೂಲಕ ಉಕ್ರೇನ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಬಂದರು ಒಡೆಸಾ ಮೇಲೆ ರಣಭೀಕರ ದಾಳಿ ನಡೆಸಲಾಗ್ತಿದೆ. ರಷ್ಯಾ ಇದೇ ನಗರವನ್ನ ಟಾರ್ಗೆಟ್ ಮಾಡಿದ್ದು, ಉಕ್ರೇನ್‌ನಿಂದ ಕಪ್ಪು ಸಮುದ್ರದ ಮಾರ್ಗವಾಗಿ ಹಡುಗುಗಳ ಮೂಲಕ ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ಸೇರಿ, ಏಷ್ಯಾಗೆ ಆಹಾರ ಧಾನ್ಯ ಸಾಗಾಟ ಇಲ್ಲಿಂದಲೇ ನಡೆಯುತ್ತದೆ. ಆದರೆ ಎರಡೂ ದೇಶಗಳ ನಡುವೆ ಒಪ್ಪಂದ ರದ್ದುಗೊಂಡ ಬೆನ್ನಲ್ಲೇ ರಷ್ಯಾ ಈ ರೀತಿಯ ದಾಳಿ ಆರಂಭಿಸಿದೆ. ಉಕ್ರೇನ್‌ನ ಪ್ರತಿಯೊಂದು ಪೋರ್ಟ್ ಪುಡಿ ಪುಡಿ ಮಾಡಿದೆ ರಷ್ಯಾ.

ರಷ್ಯಾ & ಉಕ್ರೇನ್ ನಡುವೆ ಮತ್ತೊಂದು ದೇಶ!
ಭೀಕರ ಯುದ್ಧಕ್ಕೆ ರಷ್ಯಾ ಈಗಾಗಲೇ ಅದೆಷ್ಟು ತಯಾರಿ ನಡೆಸಿದೆ ಅಂದ್ರೆ, ಬೆಲಾರಸ್ ಗಡಿ ಭಾಗದಲ್ಲಿ ತನ್ನ ಪರಮಾಣು ಅಸ್ತ್ರಗಳನ್ನ ಸಿದ್ಧವಾಗಿ ನಿಲ್ಲಿಸಿದೆ ರಷ್ಯಾ. ಈ ಕಾರಣಕ್ಕೆ ಈಗ ಯುರೋಪ್ ಒಕ್ಕೂಟಕ್ಕೆ ಆತಂಕ ಬಂದಿದೆ. ಅದ್ರಲ್ಲೂ ರಷ್ಯಾ ಶತ್ರುಗಳು ನಡುಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪೋಲ್ಯಾಂಡ್ ಕೂಡ ತಿರುಗಿಬಿದ್ದಿದ್ದು, ತನ್ನ ಗಡಿಯ ಸಮೀಪದಲ್ಲೇ ಇರುವ ಬೆಲಾರಸ್ ಗಡಿಗೆ ಸೇನೆ ಕಳುಹಿಸುತ್ತಿದೆ ಎನ್ನಲಾಗಿದೆ. ಆದರೆ ಇದರಿಂದ ಬೆಲಾರಸ್ ಭಯಗೊಂಡಿದ್ದು, ರಷ್ಯಾ ಖಡಕ್ ರಿಯಾಕ್ಷನ್ ಕೊಟ್ಟಿದೆ. ಅಕಸ್ಮಾತ್ ಬೆಲಾರಸ್‌ನ ತಂಟೆಗೆ ಹೋದರೆ ನಮ್ಮಿಂದ ಉತ್ತರ ಸಿಗಲಿದೆ ಎಂದಿದೆ ರಷ್ಯಾ.
ಹೀಗೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಡೆಡ್ಲಿಯಾಗುತ್ತಿದೆ. ಅದರಲ್ಲೂ ರಷ್ಯಾ ತನ್ನ ಶತ್ರು ವಿರುದ್ಧ ವಿನಾಶಕಾರಿ ಅಸ್ತ್ರಗಳನ್ನು ಹೊರತೆಗೆದು ದಾಳಿ ನಡೆಸುತ್ತಿದ್ದು, ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಈ ಸ್ಥಿತಿಯಲ್ಲಿ ನ್ಯಾಟೋ ಮೂಲಕ ಪಾಶ್ಚಿಮಾತ್ಯ ಪಡೆ ಪರೋಕ್ಷವಾಗಿ ಮಧ್ಯಪ್ರವೇಶ ಮಾಡುತ್ತಿದೆ ಎಂಬ ಆರೋಪವಿದೆ. ಅದರಲ್ಲೂ ಉಕ್ರೇನ್‌ಗೆ ವಿನಾಶಕಾರಿ ಅಸ್ತ್ರಗಳನ್ನು ನೀಡಿ, ರಷ್ಯಾ ವಿರುದ್ಧ ಪರೋಕ್ಷ ಯುದ್ಧ ಸಾರಿದೆ ಎನ್ನುವ ಆರೋಪ ಪುಟಿನ್ ಹಾಗೂ ರಷ್ಯಾ ನಾಯಕರದ್ದು.












Click it and Unblock the Notifications