ರಷ್ಯಾ ವಿರುದ್ಧ ಭೀಕರ ದಾಳಿಗೆ ವೆಪನ್ಸ್ ಕೊಟ್ಟ ಅಮೆರಿಕ?
ಮಾಸ್ಕೋ: ರಷ್ಯಾ & ಉಕ್ರೇನ್ ಯುದ್ಧ ಭೀಕರ ಸ್ವರೂಪ ಪಡೆಯುತ್ತಿರುವ ಪರಿಸ್ಥಿತಿಯಲ್ಲೇ ರಷ್ಯಾ ಗಡಿಯಲ್ಲಿ ಭೀಕರ ದಾಳಿ ನಡೆದಿದೆ. ಉಕ್ರೇನ್ ಗಡಿಯ ರಷ್ಯಾದ ಹಳ್ಳಿಗೆ ನುಗ್ಗಿದ್ದ 70ಕ್ಕೂ ಹೆಚ್ಚು ದಾಳಿಕೋರರನ್ನು ಹತ್ಯೆ ಮಾಡಿದ್ದಾಗಿ ರಷ್ಯಾ ಹೇಳಿಕೊಂಡಿದೆ. ಬೆಲ್ಗೊರಾಡ್ ಬಳಿ ಈ ದಾಳಿ ನಡೆದಿದ್ದು, ಅಮೆರಿಕ ಉಕ್ರೇನ್‌ಗೆ ಗಿಫ್ಟ್ ಕೊಟ್ಟಿದೆ ಎಂದು ಆರೋಪಿಸಲಾಗಿರುವ ಶಸ್ತ್ರಾಸ್ತ್ರ ಕೂಡ ಸ್ಥಳದಲ್ಲಿ ಸಿಕ್ಕಿವೆಯಂತೆ.
ಈಗಾಗಲೇ ರಷ್ಯಾ & ಉಕ್ರೇನ್ ಯುದ್ಧ 455ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟುದಿನ ಪರೋಕ್ಷವಾಗಿ ಉಕ್ರೇನ್ ಪರ ನಿಂತಿದ್ದ ಅಮೆರಿಕ ಈಗ ನೇರವಾಗಿ ಮುನ್ನುಗ್ಗುವ ಸಾಹಸ ಮಾಡುತ್ತಿದೆ. ಉಕ್ರೇನ್‌ಗೆ ಭಾರಿ ಪ್ರಮಾಣದ ಅಸ್ತ್ರ ಪೂರೈಕೆ ಮಾಡಿದ ಆರೋಪವೂ ಅಮೆರಿಕದ ವಿರುದ್ಧ ಇದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಈ ಸಂದರ್ಭದಲ್ಲೇ, ಅಮೆರಿಕದಲ್ಲಿ ತಯಾರಾಗಿವೆ ಎನ್ನಲಾದ ಶಸ್ತ್ರಾಸ್ತ್ರ & ಮಿಲಿಟರಿ ವಾಹನ ಬಳಸಿ ರಷ್ಯಾ ಗಡಿಗೆ 70ಕ್ಕೂ ಹೆಚ್ಚು ಉಕ್ರೇನ್ ದಾಳಿಕೋರರು ನುಗ್ಗಿದ್ರು ಎಂದು ಆರೋಪಿಸಲಾಗಿದೆ. ದಾಳಿ ಮಾಡಿದವರ ಪೈಕಿ 70 ಜನರ ಹೆಣ ಎತ್ತಿದ್ದೀವಿ ಅಂತಿದೆ ರಷ್ಯಾ.

ರಾತ್ರೋರಾತ್ರಿ ನುಗ್ಗಿ ಹೆಣವಾದ ದಾಳಿಕೋರರು?
ಬೆಲ್ಗೊರಾಡ್ ರಷ್ಯಾಗೆ ಸೇರಿದ ಪ್ರಾಂತ್ಯ, ಇದು ಉಕ್ರೇನ್ ಗಡಿಯಲ್ಲೇ ಇದೆ. ಹಾಗೇ ಉಕ್ರೇನ್‌ನ ಪ್ರಮುಖ ಸಿಟಿ ಕಾರ್ಕೀವ್ ನಗರದಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿ ಇದೆ. ಇಂಥ ಜಾಗಕ್ಕೆ ನುಗ್ಗಿದ 70ಕ್ಕೂ ಹೆಚ್ಚು ದಾಳಿಕೋರರು, ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ರಷ್ಯಾ ಸೇನೆ ತಕ್ಕ ಉತ್ತರ ನೀಡಿದ್ದು, ತನ್ನ ಗಡಿ ಒಳಗೆ ಬಂದ ಅಷ್ಟೂ ಜನರ ಹೆಣ ಬೀಳಿಸಿದೆಯಂತೆ. ಇನ್ನು ಅಮೆರಿಕ ಸೇನೆ ಬಳಸುವ ಮಿಲಿಟರಿ ವಾಹನಗಳು ಕೂಡ ಇಲ್ಲಿ ಸಿಕ್ಕಿವೆ ಎಂದು ರಷ್ಯಾ ಆರೋಪ ಮಾಡಿದೆ. ಇದು ರಷ್ಯಾ & ಅಮೆರಿಕ ನಡುವೆ ಕಿಚ್ಚು ಹೊತ್ತಿಸಿದೆ.
ರಷ್ಯಾ ಮೇಲೆ ದಾಳಿ ನಡೆದಿದ್ದು ನಿಜವಾ?
ಅಮೆರಿಕ & ನ್ಯಾಟೋ ಪಡೆಗಳ ಬೆಂಬಲದಿಂದಾಗಿ ರಷ್ಯಾ ವಿರುದ್ಧ ಉಕ್ರೇನ್ ವಿನಾಶಕಾರಿ ರೀತಿಯಲ್ಲಿ ವರ್ತನೆ ತೋರುತ್ತಿರುವ ಆರೋಪ ಇದೆ. ಬಖ್‌ಮತ್ ನಗರದ ಮೇಲೆ ರಷ್ಯಾ ಮತ್ತೊಮ್ಮೆ ಹಿಡಿತ ಸಾಧಿಸಿದ ಬಳಿಕ ಇಂಥ ಭೀಕರ ಘಟನೆ ನಡೆದಿರುವುದು ವಿಶೇಷ. ಈವರೆಗೂ ಉಕ್ರೇನ್ ಸೇನೆ ರಷ್ಯಾ ಗಡಿಯ ಒಳಗೆ ನುಗ್ಗುವ ಸಾಹಸ ಮಾಡಿರಲಿಲ್ಲ. ಆದರೆ ಇದೀಗ ದಿಢೀರ್ ಅಂತಾ ಹೇಗೆ ಉಕ್ರೇನ್ ದಾಳಿಕೋರರು ರಷ್ಯಾ ಗಡಿಯ ಒಳಗೆ ನುಗ್ಗಿ ದಾಳಿಗೆ ಮುಂದಾಗಿದ್ರು? ಎಂಬುದು ಜಗತ್ತಿಗೇ ಅರ್ಥವಾಗುತ್ತಿಲ್ಲ. ಹಾಗೇ ಇದು ಎಷ್ಟು ಸುಳ್ಳು? ಎಷ್ಟು ನಿಜ? ಎಂಬ ಪ್ರಶ್ನೆಯೂ ಮೂಡಿದೆ.

ಬ್ರಿಟನ್, ನ್ಯಾಟೋ ಕಡೆಯಿಂದ ನೆರವು?
ಉಕ್ರೇನ್ ಈ ಯುದ್ಧದಲ್ಲಿ ಗೆದ್ದರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ದೊಡ್ಡ ಗೆಲುವು ಸಿಗಲಿದೆ. ಪ್ರಮುಖವಾಗಿ ಇದು ಯುರೋಪ್ ಖಂಡದಲ್ಲಿ ಹೊಸ ಅಲೆ ಸೃಷ್ಟಿಸಿ, ಅಮೆರಿಕದ ಹಿಡಿತವನ್ನು ಬಿಗಿ ಮಾಡುವ ಸಂಭವವು ಕೂಡ ಹೆಚ್ಚಾಗಿದೆ. ಇದೇ ಕಾರಣಕ್ಕೆ ಉಕ್ರೇನ್ ನೆರವಿಗೆ ಅಮೆರಿಕ ಮಾತ್ರವಲ್ಲ ಬ್ರಿಟನ್ ಹಾಗೂ ಯುರೋಪ್ ಒಕ್ಕೂಟ ನಿಂತಿದೆ. ಅದರಲ್ಲೂ ನ್ಯಾಟೋ ಪಡೆಗಳು ಉಕ್ರೇನ್ ಗಡಿಯಲ್ಲಿ ರಹಸ್ಯವಾಗಿ ವಿನಾಶಕಾರಿ ಅಸ್ತ್ರಗಳನ್ನ ನೀಡಿ ಹೋಗುತ್ತಿರುವ ಆರೋಪ ಕೂಡ ಇದೆ.

ಭೀಕರ ಯುದ್ಧ + ಆರ್ಥಿಕ ಮಹಾ ಕುಸಿತ!
ಕೊರೊನಾ ಕಂಟಕದ ಬಳಿಕ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ, ಇದರ ನಡುವೆ ಯುದ್ಧ ಬೇರೆ ಶುರುವಾಗಿ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಯುರೋಪ್ ಖಂಡ ಆರ್ಥಿಕ ಕುಸಿತ ಎದುರಿಸುತ್ತಿದೆ. ಇನ್ನು ಅಮೆರಿಕದ ಪಾಡು ಕೇಳಬೇಕಿಲ್ಲ. ಈ ಕಷ್ಟದಲ್ಲೇ ಬ್ಯಾಂಕ್‌ಗಳು ಕೂಡ ಅಮೆರಿಕದಲ್ಲಿ ಬಾಗಿಲು ಹಾಕಿಕೊಂಡು ಹೋಗುತ್ತಿವೆ. ಇದೇ ಕಾರಣಕ್ಕೆ ಹೇಗಾದರೂ ಮಾಡಿ ರಷ್ಯಾ ಸೋಲಿಸಿ, ಆದಷ್ಟು ಬೇಗ ಯುದ್ಧ ಮುಗಿಸುವ ಐಡಿಯಾ ಅಮೆರಿಕದ್ದು. ಆದ್ರೆ ಏನ್ ಮಾಡೋದು ರಷ್ಯಾ ಸೋಲುತ್ತಿಲ್ಲ.












Click it and Unblock the Notifications