ಪುಟ್ಟ ಪ್ರಿನ್ಸೆಸ್ ಗೆ ಸ್ವಾಗತ, ಬ್ರಿಟನ್ ರಾಜಮನೆತನದಲ್ಲಿ ಹರ್ಷ
ಲಂಡನ್,ಮೇ.3: ಬ್ರಿಟನ್ ರಾಜಮನೆತನದಲ್ಲಿ ಮತ್ತೊಮ್ಮೆ ಹರ್ಷದ ವಾತಾವರಣ ಕಂಡು ಬಂದಿದೆ. ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ ಮಿಡ್ಲೆಟನ್ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ರಾಯಲ್ ಪ್ರಿನ್ಸೆಸ್ ಗೆ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.
ಪ್ರಿನ್ಸ್ ವಿಲಿಯಮ್ ಪತ್ನಿ ಕೇಟ್(33) ಶನಿವಾರ ಲಂಡನ್ ನ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 8.34(BST)ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ 3 ಗಂಟೆಯೊಳಗೆ ಕೇಟ್ ಗೆ ಹೆರಿಗೆಯಾಗಿದೆ.ಪ್ರಿನ್ಸ್ ಮತ್ತು ಕೇಟ್ ಅವರ ಹೆಣ್ಣು ಮಗು 8 ಪೌಂಡ್ 3 ಔನ್ಸ್ (3.7ಕೆಜಿ) ತೂಕ ಹೊಂದಿದೆ.
The baby weighs 8lbs 3oz. The Duke of Cambridge was present for the birth.
— Kensington Palace (@KensingtonRoyal) May 2, 2015 
ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ 2011ರ ಏಪ್ರಿಲ್ ತಿಂಗಳಿನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 2013ರ ಜುಲೈನಲ್ಲಿ ಇದೇ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಕೇಟ್ ಗಂಡು ಮಗು(ಪ್ರಿನ್ಸ್ ಜಾರ್ಜ್)ವಿಗೆ ಜನ್ಮ ನೀಡಿದ್ದರು. ರಾಯಲ್ ಫ್ಯಾಮಿಲಿಯ ಹೊಸ ಸದಸ್ಯೆಗೆ ಇನ್ನೂ ಹೆಸರಿಟ್ಟಿಲ್ಲ. ಯಾವ ಹೆಸರು ಸೂಕ್ತ ಎಂಬುದರ ಬಗ್ಗೆ ಕೂಡಾ ಭಾರಿ ಚರ್ಚೆ ನಡೆದಿದೆ.
ಗಾಳಿ ಸುದ್ದಿಗಳ ಬಗ್ಗೆ ಪ್ರಿನ್ಸ್ ಚಾರ್ಲ್ಸ್ ಹೇಳಿಕೆ:
There is no truth to the rumour that the baby will be presented on the balcony, whilst playing the Circle of Life. Sorry. #royalbaby
— Prince Charles (@Charles_HRH) May 2, 2015 











Click it and Unblock the Notifications