Iran: ಇಸ್ರೇಲ್ ವಿರುದ್ಧ ‘ಉಪಗ್ರಹ’ ಶಾಕ್ ಕೊಡಲು ಮುಂದಾದ ಇರಾನ್?
ಇಸ್ರೇಲ್ & ಇರಾನ್ ನಡುವೆ ಕಾದಾಟ ಹೆಚ್ಚಾಗುತ್ತಿದ್ದು, ಇಬ್ಬರೂ ಒಬ್ಬರನ್ನ ಮತ್ತೊಬ್ಬರು ಸರ್ವನಾಶ ಮಾಡಲು ಸಜ್ಜಾಗಿದ್ದಾರೆ. ಒಂದು ಕಡೆ ಇರಾನ್ ಬಳಿ ಭೀಕರ ಪರಮಾಣು ಬಾಂಬ್ ರಾಶಿಯೇ ಬಿದ್ದಿದೆ ಎಂಬ ಗಂಭೀರ ಆರೋಪಗಳು ಇವೆ. ಹಾಗೇ ಇನ್ನೊಂದು ಕಡೆ ಇಸ್ರೇಲ್ ಬೆನ್ನ ಹಿಂದೆ ನಿಂತಿರುವ ಅಮೆರಿಕ ಪರಮಾಣು ಬಾಂಬ್‌ಗಳ ವಿಚಾರದಲ್ಲಿ ಅಪ್ಪನಂತೆ. ಈ ಇಬ್ಬರ ತಿಕ್ಕಾಟ ಇಡೀ ಜಗತ್ತಿನ ನಿದ್ದೆಗೆಡಿಸಿರುವ ಸಮಯದಲ್ಲೇ ಮತ್ತೊಂದು ಸ್ಫೋಟಕ ಸಂಗತಿ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಏನದು ಇರಾನ್ ಮಾಡಿರುವ ಪ್ಲಾನ್?
ಇರಾನ್ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳನ್ನು ಶತ್ರುಗಳಿಗೆ ತೋರಿಸಿ ಭಯ ಪಡಿಸುತ್ತಾ, ತನ್ನ ತಂಟೆಗೆ ಬರದಂತೆ ವಾರ್ನಿಂಗ್ ಕೊಡುತ್ತಿದೆ. ಇಸ್ರೇಲ್ & ಅಮೆರಿಕ ಜೊತೆಗೆ ಈ ಕುರಿತು ದೊಡ್ಡ ಫೈಟಿಂಗ್ ಮಾಡುತ್ತಿರುವ ಇರಾನ್, ತನ್ನ ಸೇಫ್ಟಿಗೆ ಇದೀಗ ಹೊಸ ಅಸ್ತ್ರವನ್ನ ಕೂಡ ರೆಡಿ ಮಾಡಿಕೊಂಡಿದೆ. ಏನಂದ್ರೆ ತನ್ನದೇ ಒಂದು ಹೊಸ ಉಪಗ್ರಹದ ಉಡಾವಣೆ ಮಾಡುವ ಮೂಲಕ, ಶತ್ರುಗಳಿಗೆ ಇನ್ನೊಂದು ರೀತಿಯ ಶಾಕ್ ಕೊಡೋದಕ್ಕೆ ಇದೀಗ ಇರಾನ್‌ನ ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ, ಇದೀಗ ಇರಾನ್ ದೇಶಕ್ಕೆ ಸಹಾಯ ಮಾಡುತ್ತಿರುವ ದೇಶ ಯಾವುದು? ಇದರಿಂದ ಇಸ್ರೇಲ್ & ಅಮೆರಿಕ ಮೇಲೆ ಏನು ಏನು ಪರಿಣಾಮ ಆಗಬಹುದು?

ರಷ್ಯಾ ಮೂಲಕ ಇರಾನ್ ಉಪಗ್ರಹ...
ಇದೀಗ ಸಿಗುತ್ತಿರುವ ಮಾಹಿತಿಗಳ ಪ್ರಕಾರ ಇರಾನ್ ಗುಟ್ಟಾಗಿ ತನ್ನ ಉಪಗ್ರಹ ಒಂದನ್ನ ರಷ್ಯಾ ದೇಶಕ್ಕೆ ರವಾನೆ ಮಾಡಿದೆಯಂತೆ. ಅಲ್ಲದೆ ರಷ್ಯಾದ ರಾಕೆಟ್ ಬಳಕೆ ಮಾಡಿ ಈ ಉಪಗ್ರಹದ ಉಡಾವಣೆ ನಡೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಸಕಲ ಸಿದ್ಧತೆ ಸಾಗಿದ್ದು, ಮುಂದೆ ಇದು ಇಸ್ರೇಲ್ ದೇಶಕ್ಕೆ ನೇರವಾಗಿ ಸಮಸ್ಯೆ ತರುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬಂದಿದೆ.
ಮತ್ತೊಂದು ಕಡೆ ಅಮೆರಿಕಗೆ ಕೂಡ ಇದರಿಂದ ಸಮಸ್ಯೆ ಗ್ಯಾರಂಟಿ ಎಂಬ ಚರ್ಚೆಗಳು ಈಗ ಆರಂಭವಾಗಿವೆ. ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ & ನಾಲ್ಕು ದೇಶಗಳ ನಡುವೆ ಕಿರಿಕ್ ಶುರು ಆಗಿರುವ ಸಮಯದಲ್ಲೇ ಮತ್ತೊಂದು ಭೀಕರ ಆರೋಪ ಕೇಳಿಬಂದಿದೆ. ಈಗಾಗಲೇ ಎರಡು ಉಪಗ್ರಹವನ್ನ ರಷ್ಯಾ ಸಹಾಯದಿಂದ ಇರಾನ್ ಉಡಾವಣೆ ಮಾಡಿದ್ದು, ಮತ್ತಷ್ಟು ಉಪಗ್ರಹ ಇದೇ ರೀತಿ ಉಡಾವಣೆ ಮಾಡಲು ಇದೀಗ ಇರಾನ್ ಸಜ್ಜಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇರಾನ್ ಪರಮಾಣು ಬಾಂಬ್ ಪ್ರಯೋಗ?
ಒಟ್ನಲ್ಲಿ ಮಧ್ಯಪ್ರಾಚ್ಯ ಇದೀಗ ಕಾದ ಕೆಂಡವಾಗಿ ಹೋಗಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ ಎನ್ನಬಹುದು. ಇಂತಹ ಸಮಯದಲ್ಲೇ ಇರಾನ್ ವಿರುದ್ಧ ಮತ್ತೊಂದು ಆರೋಪ ಓಡಾಡ್ತ ಇದ್ದು ಈ ಬಗ್ಗೆ ಅಧಿಕೃತ ಮಾಹಿತಿಗಳು ಹೊರ ಬಿದ್ದಿಲ್ಲ. ಹಾಗೇ ಇನ್ನೊಂದು ಕಡೆ ಇರಾನ್ ಪರಮಾಣು ಬಾಂಬ್ ಪ್ರಯೋಗ ನಡೆಸಿದೆ, ಈ ಮೂಲಕ ಇಸ್ರೇಲ್ ವಿರುದ್ಧ ಬಳಕೆಗೆ ಪ್ಲಾನ್ ಮಾಡಿದೆ ಎಂಬ ಆರೋಪ ಕೂಡ ಕೇಳಿಬಂದಿತ್ತು.












Click it and Unblock the Notifications