ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚುಮೆಚ್ಚಿನ ಮಾಸ ಪತ್ರಿಕೆ 1 ಪೌಂಡಿಗೆ ಮಾರಾಟ

By Mahesh
|
Google Oneindia Kannada News

ಬೆಂಗಳೂರು, ಫೆ.19: ದಿವಾಳಿ ಅಂಚಿಗೆ ಬಂದಿದ್ದ ಪ್ರಪಂಚದ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ ಎಂಬ ಖ್ಯಾತಿ ಗಳಿಸಿದ್ದ ರೀಡರ್ಸ್ ಡೈಜೆಸ್ಟ್ ಹಲವು ವರ್ಷ ಗಳ ನಂತರ ಕೊನೆಗೂ ಮಾರಾಟವಾಗಿದೆ. ಕೇವಲ ಒಂದು ಪೌಂಡಿಗೆ ಮೈಕ್ ಲೂಕ್ ವೆಲ್ ಎಂಬುವವರಿಗೆ ರೀಡರ್ಸ್ ಡೈಜಸ್ಟ್ ಮಾರಾಟವಾಗಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.

ಹೂಡಿಕೆದಾರ ಮೈಕ್ ಲೂಕ್ ವೆಲ್ ಅವರು ಈ ಮುಂಚೆ HIT ಎಂಟರ್ ಟೈನ್ಮೆಂಟ್ ಹಾಗೂ WPP ಮೇಲೆ ಭಾರಿ ಬಂಡವಾಳ ಹಾಕಿದ್ದರು. ಜಾನ್ ಮೌಲ್ಟನ್ ಅವರ ಈಕ್ವಿಟಿ ಕಂಪನಿ ಬೆಟರ್ ಕ್ಯಾಪಿಟಲ್ ಸಂಸ್ಥೆ ರೀಡರ್ಸ್ ಡೈಜಸ್ಟ್ ಪತ್ರಿಕೆ ಹಕ್ಕುಗಳನ್ನು ಲೂಕ್ ವೆಲ್ ಅವರ ಕೈಗಿತ್ತಿದ್ದಾರೆ. ಒಂದು ಕಾಲದಲ್ಲಿ ಪ್ರಪಂಚದ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ ಎಂಬ ಖ್ಯಾತಿ ಗಳಿಸಿದ್ದ ರೀಡರ್ಸ್ ಡೈಜಸ್ಟ್ ಕಂಪನಿ ದಿವಾಳಿಯಾಗುವುದನ್ನು ತಪ್ಪಿಸಲು ಲಕ್ಷಾಂತರ ಪೌಂಡ್ ಸುರಿದಿದ್ದು ವ್ಯರ್ಥವಾಗಿತ್ತು.

Reader's Digest sold for just 1 Pound

ರೀಡರ್ಸ್ ಡೈಜಸ್ಟ್ ರೀ ಲುಕ್ : 1922ರಲ್ಲಿ ಡಿ ವಿಟ್ ಹಾಗೂ ಲಿಲಾ ಬೆಲ್ ವ್ಯಾಲೇಸ್ ಅವರಿಂದ ರೀಡರ್ಸ್ ಡೈಜಸ್ಟ್ ಪತ್ರಿಕೆ ಹುಟ್ಟುಕೊಂಡಿತ್ತು. 1960 ರ ಹೊತ್ತಿಗೆ ಜಾಗತಿಕ ಪ್ರಸಾರ ಸುಮಾರು 23 ದಶಲಕ್ಷ ಹಾಗೂ 40 ಸಂಚಿಕೆಗಳು ವಿಶ್ವದೆಲ್ಲೆಡೆ ಕಾಣುವಂತಾಯಿತು.

ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ ( RDA ) ಒಂದು ಪ್ರಖ್ಯಾತ ಪ್ರಕಟಣಾ ಸಂಸ್ಥೆಯಾಗಿ 44 ದೇಶಗಳಲ್ಲಿ ತನ್ನ ಕಚೇರಿ ಹೊಂದಿತ್ತು. ಡೈಜೆಸ್ಟ್ ಮಳಿಗೆಗಳ ಮೂಲಕ ಕಂಪನಿಯು ಪುಸ್ತಕ, ಮ್ಯಾಗಜೀನ್, ಮ್ಯೂಸಿಕ್ ಮತ್ತು ವಿಡಿಯೋಗಳ ಮಾರಾಟ ಮಾಡಲಾಗುತ್ತಿತ್ತು. ಒಟ್ಟಾರೆ 78 ದೇಶಗಳಲ್ಲಿ ಪತ್ರಿಕೆ ಅತ್ಯಧಿಕ ಪ್ರಸಾರ ಕಂಡು ಒಂದು ಕಾಲದಲ್ಲಿ 130 ದಶಲಕ್ಷ ಗ್ರಾಹಕ ಬಲ ಹೊಂದಿತ್ತು. ರೀಡರ್ಸ್ ಡೈಜಸ್ಟ್ ಮಾಸಪತ್ರಿಕೆ ಸೇರಿದಂತೆ ಕಂಪನಿ ಒಟ್ಟು 94 ಪ್ರಕಟಣೆಗಳನ್ನು ಹೊರತರುತ್ತದೆ. ವರ್ಷವೊಂದಕ್ಕೆ ಸುಮಾರು 40 ದಶಲಕ್ಷ ಪುಸ್ತಕ, ಪುರವಣಿ, ವಿಡಿಯೋ ಮಾರಾಟ ಆಗುತ್ತದೆ.

English summary
Reader's Digest, a popular magazine, has been sold for just one pound by Better Capital to a venture capitalist. According to The Guardian, the magazine was sold to Mike Luckwell whose earlier big investments included HIT Entertainment and WPP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X