ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಲು ಕತಾರ್‌ ಆಗ್ರಹ

|
Google Oneindia Kannada News

ನವದೆಹಲಿ, ಜೂ. 6: ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ವಕ್ತಾರರಾದ ನುಪೂರ್‌ ಶರ್ಮಾ ಹಾಗೂ ನವೀನ್‌ ಕುಮಾರ್‌ ಜಿಂದಾಲ್‌ ಅವರ ವಿವಾದಾತ್ಮಕ ಹೇಳಿಕೆಗಳನ್ನು ಕತಾರ್ ಖಂಡಿಸಿದೆ ಮತ್ತು ಈ ಟೀಕೆಗಳನ್ನು ತಕ್ಷಣವೇ ಖಂಡಿಸಿ ಮತ್ತು ವಿಶ್ವದ ಎಲ್ಲಾ ಮುಸ್ಲಿಮರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಭಾರತ ಸರ್ಕಾರಕ್ಕೆ ಕರೆ ನೀಡಿದೆ.

ಕತಾರ್‌ ವಿದೇಶಾಂಗ ವ್ಯವಹಾರಗಳ ಸಚಿವ ಸುಲ್ತಾನ್ ಬಿನ್ ಸಾದ್ ಅಲ್-ಮುರೈಖಿ (MoFA) ಭಾನುವಾರ ಭಾರತೀಯ ರಾಯಭಾರಿ ಡಾ. ದೀಪಕ್ ಮಿತ್ತಲ್ ಅವರನ್ನು ಕರೆಸಿ ಅಧಿಕೃತ ಪ್ರತಿಭಟನಾ ಟಿಪ್ಪಣಿಯನ್ನು ಹಸ್ತಾಂತರಿಸಿದರು.

ಪ್ರವಾದಿ ಅವಹೇಳನ ಮಾಡಿದವರ ಜೈಲಿಗಟ್ಟಿ; ಮಾಯಾವತಿಪ್ರವಾದಿ ಅವಹೇಳನ ಮಾಡಿದವರ ಜೈಲಿಗಟ್ಟಿ; ಮಾಯಾವತಿ

ಮತ್ತೊಬ್ಬ ಬಿಜೆಪಿ ವಕ್ತಾರ ನವೀನ್ ಜಿಂದಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ಮಾಡಿದ ಕಾಮೆಂಟ್‌ಗಳ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಬಿಜೆಪಿ ಕಚೇರಿ ತಿಳಿಸಿದೆ. ಕತಾರ್ ಭಾರತದಲ್ಲಿ ಬಿಜೆಪಿ ಪಕ್ಷವು ಹೊರಡಿಸಿದ ಹೇಳಿಕೆಯನ್ನು ಸ್ವಾಗತಿಸುತ್ತದೆ. ಇದರಲ್ಲಿ ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರನ್ನು ಕೆರಳಿಸುವ ಟೀಕೆಗಳಿಂದ ವಕ್ತಾರರನ್ನು ಪಕ್ಷದಲ್ಲಿ ಕರ್ತವ್ಯಗಳನ್ನು ನಿರ್ವಹಿಸುವುದರಿಂದ ಅಮಾನತುಗೊಳಿಸುವುದಾಗಿ ಘೋಷಿಸಿತು.

ಪ್ರಪಂಚದಾದ್ಯಂತ 2 ಶತಕೋಟಿ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಮಾರ್ಗದರ್ಶನವನ್ನು ಅನುಸರಿಸುತ್ತಾರೆ. ಅವರ ಸಂದೇಶವು ಶಾಂತಿ, ತಿಳಿವಳಿಕೆ ಮತ್ತು ಸಹಿಷ್ಣುತೆಯ ಸಂದೇಶವಾಗಿದೆ ಮತ್ತು ಎಲ್ಲಾ ಮುಸ್ಲಿಮರು ಬೆಳಕಿನ ದಾರಿದೀಪವಾಗಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತದ ನಾಗರಿಕತೆಗಳ ಅಭಿವೃದ್ಧಿಯಲ್ಲಿ ಇಸ್ಲಾಂನ ಪ್ರಮುಖ ಪಾತ್ರ ಇದೆ. ಈ ಅವಮಾನಕರ ಹೇಳಿಕೆಗಳು ಧಾರ್ಮಿಕ ದ್ವೇಷದ ಪ್ರಚೋದನೆಗೆ ಕಾರಣವಾಗುತ್ತವೆ. ಪ್ರಪಂಚದಾದ್ಯಂತ 2 ಶತಕೋಟಿಗಿಂತಲೂ ಹೆಚ್ಚು ಮುಸ್ಲಿಮರನ್ನು ಇದು ಬಾಧಿಸುತ್ತದೆ ಎಂದು ಕತಾರ್ ಹೇಳಿದೆ.

ಎಲ್ಲಾ ಧರ್ಮಗಳು ಮತ್ತು ರಾಷ್ಟ್ರೀಯತೆಗಳಿಗೆ ಸಹಿಷ್ಣುತೆ, ಸಹಬಾಳ್ವೆ ಮತ್ತು ಗೌರವದ ಮೌಲ್ಯಗಳಿಗೆ ಕತಾರ್ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸತ್ತದೆ. ಅಲ್ಲಿ ಈ ಮೌಲ್ಯಗಳು ಕತಾರ್‌ನ ಜಾಗತಿಕ ಸ್ನೇಹ ಮತ್ತು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸ್ಥಾಪನೆಗೆ ಕೊಡುಗೆ ನೀಡುವ ನಿರಂತರ ಕೆಲಸವನ್ನು ಮಾಡುತ್ತದೆ.

 ಕತಾರ್‌ನ ಸ್ಪಷ್ಟ ಖಂಡನೆ ವ್ಯಕ್ತ

ಕತಾರ್‌ನ ಸ್ಪಷ್ಟ ಖಂಡನೆ ವ್ಯಕ್ತ

ಏತನ್ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರ ಸಲಹೆಗಾರ ಡಾ ಮಜೇದ್ ಮೊಹಮ್ಮದ್ ಅಲ್-ಅನ್ಸಾರಿ, ನಿನ್ನೆ ಕತಾರ್‌ ಭಾರತೀಯ ರಾಯಭಾರಿ ಡಾ. ಮಿತ್ತಲ್ ಅವರನ್ನು ಕರೆಸಿ ಅಧಿಕೃತ ಪ್ರತಿಭಟನಾ ಟಿಪ್ಪಣಿಯನ್ನು ಕತಾರ್‌ನ ಸ್ಪಷ್ಟ ಖಂಡನೆಯನ್ನು ವ್ಯಕ್ತಪಡಿಸಿದೆ ಎಂದು ಹೇಳಿದರು. ಕತಾರ್ ನ್ಯೂಸ್ ಏಜೆನ್ಸಿಯೊಂದಿಗೆ ಮಾತನಾಡಿದ ಅಲ್-ಅನ್ಸಾರಿ, ಕತಾರ್ ಈ ಹೇಳಿಕೆಗಳನ್ನು ತಕ್ಷಣವೇ ಖಂಡಿಸಬೇಕು ಮತ್ತು ವಿಶ್ವದ ಎಲ್ಲಾ ಮುಸ್ಲಿಮರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕತಾರ್ ಭಾರತ ಸರ್ಕಾರಕ್ಕೆ ಕರೆ ನೀಡಿದೆ. ಅಲ್ಲದೆ, ಇಸ್ಲಾಂ ಮತ್ತು ಮುಸ್ಲಿಮರು ನಾಗರಿಕ ಅಭಿವೃದ್ಧಿಗೆ ಸ್ಪಷ್ಟ ಕೊಡುಗೆ ನೀಡಿದ್ದಾರೆ ಎಂದರು.

 ಭಾವನೆಗಳ ಉದ್ದೇಶಪೂರ್ವಕವಾಗಿ ಪ್ರಚೋಧನೆ

ಭಾವನೆಗಳ ಉದ್ದೇಶಪೂರ್ವಕವಾಗಿ ಪ್ರಚೋಧನೆ

ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರು ನಿಸ್ಸಂದೇಹವಾಗಿ ಪ್ರವಾದಿ ಮುಹಮ್ಮದ್ ಪೈಗಂಬರ್‌ ಅವರ ಸ್ಥಾನ ಮತ್ತು ಅವರ ಆರಾಧನೆಯ ಬಗ್ಗೆ ಅಜ್ಞಾನಿಯಾಗಿದ್ದಾರೆ ಮತ್ತು ಪ್ರವಾದಿ ಮೇಲೆ ದಾಳಿ ಮಾಡುವುದು ಎಲ್ಲರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತದೆ ಎಂದು ಡಾ ಅಲ್-ಅನ್ಸಾರಿ ಒತ್ತಿ ಹೇಳಿದರು.

 ಮಾನವ ಹಕ್ಕುಗಳ ರಕ್ಷಣೆಗೆ ಗಂಭೀರ ಅಪಾಯ

ಮಾನವ ಹಕ್ಕುಗಳ ರಕ್ಷಣೆಗೆ ಗಂಭೀರ ಅಪಾಯ

ಅನ್ಸಾರಿ, ಸ್ಟೇಟ್ ಆಫ್ ಕತಾರ್ ಭಾರತದಲ್ಲಿ ಬಿಜೆಪಿ ಪಕ್ಷವು ಹೊರಡಿಸಿದ ಹೇಳಿಕೆಯನ್ನು ಸ್ವಾಗತಿಸಿದೆ. ಈ ಬಗೆಯ ಹೇಳಿಕೆಯಿಂದ ಮಾನವ ಹಕ್ಕುಗಳ ರಕ್ಷಣೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಮತ್ತು ಹಿಂಸಾಚಾರ ಮತ್ತು ದ್ವೇಷದ ರೂಢಿಯನ್ನು ಸೃಷ್ಟಿಸುವ ಮತ್ತಷ್ಟು ಪೂರ್ವಾಗ್ರಹ ಮತ್ತು ತೆಗಳುವಿಕೆಗೆ ಕಾರಣವಾಗಬಹುದು ಎಂದು ಹೇಳಿದೆ.

 ಪ್ರವಾದಿ ಮುಹಮ್ಮದ್ ಪೈಗಂಬರ್‌ ಕುರಿತು ಅವಹೇಳನ

ಪ್ರವಾದಿ ಮುಹಮ್ಮದ್ ಪೈಗಂಬರ್‌ ಕುರಿತು ಅವಹೇಳನ

ಭಾರತೀಯ ಜನತಾ ಪಕ್ಷ (ಬಿಜೆಪಿ) ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್‌ ಕುರಿತು ಮಾಡಿದ ಅವಹೇಳನಕಾರಿ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಪಕ್ಷದ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. ಮತ್ತೊಬ್ಬ ಬಿಜೆಪಿ ವಕ್ತಾರ ನವೀನ್ ಜಿಂದಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ಮಾಡಿದ ಕಾಮೆಂಟ್‌ಗಳ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಬಿಜೆಪಿ ಕಚೇರಿ ತಿಳಿಸಿದೆ. ಪಕ್ಷವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಎಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಯಾವುದೇ ಧರ್ಮದ ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ.

English summary
Qatar condemned the controversial statements of BJP spokespersons Nupur Sharma and Naveen Kumar Jindal against Prophet Muhammad and called on the Government of India to immediately condemn these comments and publicly apologize to all Muslims in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X