Russia & Ukraine: ಉಕ್ರೇನ್ ವಿರುದ್ಧ ಹೈಪರ್‌ಸಾನಿಕ್ ಕ್ಷಿಪಣಿ ಬಳಸಿ ದಾಳಿ ಮಾಡುವ ಎಚ್ಚರಿಕೆ ನೀಡಿದ ಪುಟಿನ್!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಭೀಕರ ದಾಳಿ ಮುನ್ನೆಚ್ಚರಿಕೆ ನೀಡಿದ್ದಾರೆ ಅಮೆರಿಕ ಜೊತೆಗೆ ಸೇರಿ ಯಾವಾಗ ಉಕ್ರೇನ್ ಆಟ ಆಡಲು ಶುರು ಮಾಡಿತ್ತೋ, ರಷ್ಯಾ ಈ ವಿಚಾರಗಳನ್ನ ಮುಂದೆ ಇಟ್ಟುಕೊಂಡು ಆಕ್ರೋಶ ಹೊರ ಹಾಕಿತ್ತು. ಅಲ್ಲದೆ ಭವಿಷ್ಯದಲ್ಲಿ ಈ ಘಟನೆಗಳು ಉಕ್ರೇನ್‌ಗೆ ಸಮಸ್ಯೆ ಮಾಡುವುದು ಗ್ಯಾರಂಟಿ ಎಂಬ ಎಚ್ಚರಿಕೆ ಕೂಡ ನೀಡಿತ್ತು. ಆಗ ತಾನು ನೀಡಿದ್ದ ಎಚ್ಚರಿಕೆಯಂತೆ ರಷ್ಯಾ ನಡೆದುಕೊಳ್ಳುತ್ತಿದ್ದು, ಉಕ್ರೇನ್ ವಿರುದ್ಧ ಭಾರಿ ಅಪಾಯಕಾರಿ ಅಸ್ತ್ರಗಳನ್ನೇ ಬಳಸಲು ಮುಂದಾಗಿದೆ.
ರಷ್ಯಾ ಸೇನೆ ಜಗತ್ತಿನ ಟಾಪ್ ಮಿಲಿಟರಿಗಳ ಪೈಕಿ ಒಂದಾಗಿದ್ದು, ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ನೆಲೆ ನಿಂತಿದೆ. ಹೀಗಾಗಿ ತನ್ನ ಶತ್ರುಗಳಿಗೆ ವಾರ್ನಿಂಗ್ ಕೊಟ್ಟು, ದಾಳಿ ಮಾಡುವಷ್ಟು ಶಕ್ತಿ ಕೂಡ ಹೊಂದಿದೆ. ಈಗಾಗಲೇ ಉಕ್ರೇನ್ ವಿರುದ್ಧ ಯುದ್ಧ ಶುರು ಮಾಡಿ ಹತ್ತಿರ ಹತ್ತಿರ 3 ವರ್ಷಗಳ ಕಾಲ ಹೋರಾಡಿದೆ. ಇಂತಹ ಸಮಯದಲ್ಲೇ, ತನ್ನ ಬಳಿ ಇರುವ ಕ್ಷಿಪಣಿಗಳನ್ನು ಕೂಡ ಬಳಸಿ ದಾಳಿ ಮಾಡಲು ಮುಂದೆ ಬಂದಿದೆ ರಷ್ಯಾ. ಇದೇ ವಿಚಾರ ಈಗ ಭಯವನ್ನ ಕೂಡ ಹುಟ್ಟು ಹಾಕುತ್ತಿದೆ.

ಭಯಾನಕ ಮಿಸೈಲ್ ಬಳಸಿ ದಾಳಿ?
ರಷ್ಯಾ ಅಧ್ಯಕ್ಷ ಪುಟಿನ್ ಇದೀಗ ಗರಂ ಆಗಿದ್ದು, ತಮ್ಮ ವಿರುದ್ಧ ಮಸಲತ್ತು ಮಾಡುತ್ತಿರುವ ಉಕ್ರೇನ್ ಸೇನೆಗೆ ತಕ್ಕ ಉತ್ತರ ನೀಡಲು ತಮ್ಮ ಬತ್ತಳಿಕೆಯಲ್ಲಿ ಇರುವ ಭಯಾನಕ ಕ್ಷಿಪಣಿಗಳನ್ನ ಬಳಕೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ಈ ರೀತಿ ಕ್ಷಿಪಣಿಗಳನ್ನ ಬಳಸಿ ದಾಳಿ ಮಾಡಲು ಉತ್ತೇಜನ ನೀಡಿವೆ ಎಂಬ ಆರೋಪ ರಷ್ಯಾ ಅಧ್ಯಕ್ಷ ಪುಟಿನ್ ಅವರದ್ದು. ಇದೇ ಕಾರಣಕ್ಕೆ ಇದೀಗ ಗರಂ ಆಗಿರುವ ರಷ್ಯಾ ಅಧ್ಯಕ್ಷರು, ತಮ್ಮನ್ನ ಮುಟ್ಟುತ್ತಿರುವ ಉಕ್ರೇನ್‌ಗೆ ಪಾಠ ಕಲಿಸಲು ಮುಂದಾಗಿದ್ದಾರೆ.
ಕ್ಷಿಪಣಿ ಬಳಕೆ ಮಾಡಿದರೆ ಕಥೆ ಏನು?
ರಷ್ಯಾ ಬಳಿ ಸಾವಿರಾರು ಕ್ಷಿಪಣಿಗಳು ಇದ್ದು, ಈ ಮಿಸೈಲ್‌ಗಳ ಪೈಕಿ ನ್ಯೂಕ್ಲಿಯರ್ ಅಂದ್ರೆ ಪರಮಾಣು ಅಸ್ತ್ರಗಳನ್ನು ಹೊತ್ತೊಯ್ದು ದಾಳಿ ಮಾಡಬಲ್ಲ ಕ್ಷಿಪಣಿಗಳೇ ಹೆಚ್ಚಾಗಿವೆ. ಈ ಕಾರಣಕ್ಕೆ ಇದೀಗ ಭಯದ ವಾತಾವರಣ ನಿರ್ಮಾಣ ಆಗಿದೆ. ಅಕಸ್ಮಾತ್ ಏನಾದರೂ ಈಗ ರಷ್ಯಾ ಪರಮಾಣು ಬಾಂಬ್ ಬಳಕೆ ಮಾಡಿದರೆ ಮುಂದೆ ಕಥೆ ಏನು? ಎಂಬ ಪ್ರಶ್ನೆ ಮೂಡಿದೆ.
ಒಟ್ನಲ್ಲಿ, ರಷ್ಯಾ & ಉಕ್ರೇನ್ ನಡುವಿನ ದ್ವೇಷ ಹೆಚ್ಚಾದಷ್ಟು ಇದೀಗ 3ನೇ ಮಹಾಯುದ್ಧದ ಭಯ ಕೂಡ ಹೆಚ್ಚಾಗುತ್ತಿದೆ. ಇದಿಷ್ಟೇ ಅಲ್ಲ ಮುಂದೆ ಈ ಯುದ್ಧ ಏನಾದರೂ ಬೇರೆ ಬೇರೆ ಕಡೆಗೆ ಹರಡಿಕೊಂಡರೆ ಕಥೆ ಏನು? ಅನ್ನೋದು ಕೂಡ ಜಗತ್ತನ್ನು ಕಾಡುತ್ತಿದೆ. ಹೀಗಾಗಿಯೇ ಆದಷ್ಟು ಬೇಗ ರಷ್ಯಾ & ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಬೇಕು ಅನ್ನೋ ಒತ್ತಾಯವೂ ಇದೀಗ ಕೇಳಿ ಬಂದಿದೆ.












Click it and Unblock the Notifications