ವಯಸ್ಸು 70, ಆದರೂ ರಷ್ಯಾ ಅಧ್ಯಕ್ಷ ಪುಟಿನ್ ಗಟ್ಟಿಮುಟ್ಟು!

ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಆರೋಗ್ಯ ಹದಗೆಟ್ಟಿದೆ, ಕೆಲವೇ ದಿನದಲ್ಲಿ ಸಾಯ್ತಾರೆ, ಬದುಕೋದೆ ಇಲ್ಲ ಅಂತಹ ರೋಗ ಪುಟಿನ್‌ಗೆ ಬಂದಿದೆ. ಹೀಗೆ ಒಂದಾ.. ಎರಡಾ.. ರಷ್ಯಾ ಅಧ್ಯಕ್ಷ ಪುಟಿನ್ ಆರೋಗ್ಯದ ಬಗ್ಗೆ ದಿನಕ್ಕೊಂದು ರೂಮರ್ಸ್ ಹುಟ್ಟಿಕೊಳ್ಳುತ್ತಿದೆ. ಆದರೆ ಅದಕ್ಕೆಲ್ಲಾ ಉತ್ತರ ನಿನ್ನೆ ಸಿಕ್ಕಿದೆ. ರಷ್ಯಾದ 'ವಿಜಯ ದಿವಸ'ದಲ್ಲಿ ಪುಟಿನ್ ತಮ್ಮ ತಾಕತ್ತು ತೋರಿಸಿದ್ದಾರೆ.

ಹೌದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Putin) ಆರೋಗ್ಯದ ಬಗ್ಗೆ ದಿನಕ್ಕೊಂದು ಮಾತು ಕೇಳಿಬರುತ್ತಿವೆ. ಆದರೆ ಕಳೆದ ತಿಂಗಳು ಗಂಭೀರ ಸಂದೇಶ ಹೊರಬಿದ್ದು, ಪುಟಿನ್ ಕಣ್ಣು ಕುರುಡಾಗಿದೆ ಎಂಬ ಸ್ಫೋಟಕ ಮಾಹಿತಿ ಹರಿದಾಡುತ್ತಿತ್ತು. ವ್ಲಾದಿಮಿರ್ ಪುಟಿನ್ ಕೈ-ಕಾಲು ಸ್ವಾಧೀನ ಕಳೆದುಕೊಂಡಿವೆ ಎಂಬ ವದಂತಿ ಹರಡಿತ್ತು. ಆದರೆ ಈಗ ಪುಟಿನ್ ತಾನು ಎಷ್ಟು ಗಟ್ಟಿಮುಟ್ಟಾಗಿ ಇದ್ದೀನಿ ಅನ್ನೋದನ್ನ ತೋರಿಸಿದ್ದಾರೆ. ಈ ವಯಸ್ಸಲ್ಲೂ ರಷ್ಯಾ ಅಧ್ಯಕ್ಷರು ಕೊಟ್ಟ ವಾರ್ನಿಂಗ್ ಹೇಗಿತ್ತು ಗೊತ್ತಾ? ಮುಂದೆ ಓದಿ.

Putin speech gone viral

ಅಮೆರಿಕ & ಪಟಾಲಂಗೆ ಪುಟಿನ್ ಪಂಚ್!

ನಿನ್ನೆ ರಷ್ಯಾ ವಿಕ್ಟರಿ ಡೇ ಅಂದ್ರೆ 'ವಿಜಯ ದಿವಸ'ದಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ಪುಟಿನ್, ಅಮೆರಿಕ & ಪಟಾಲಂಗೆ ವಾರ್ನಿಂಗ್ ಕೊಟ್ಟಿದ್ದರು. ಈ ಸಂದರ್ಭದಲ್ಲಿ ರಷ್ಯಾ ತಾಕತ್ತು ಎಂತಹದ್ದು ಎಂಬುದನ್ನೂ ಒತ್ತಿ ಹೇಳಿದ್ದಾರೆ ಪುಟಿನ್. 'ಪಶ್ಚಿಮದ ದೇಶಗಳು ಯುದ್ಧ ಹಾಗೂ ದಂಗೆ ಪ್ರಚೋದಿಸುತ್ತವೆ. ತಮ್ಮದೇ ನಿಯಮ ಜಾರಿಗೆ ತರಲು ಸಾಂಪ್ರದಾಯಿಕ ಮೌಲ್ಯ ನಾಶ ಮಾಡುತ್ತವೆ. ವಾಸ್ತವವಾಗಿ ದರೋಡೆ, ಹಿಂಸಾಚಾರದ ವ್ಯವಸ್ಥೆ ಇದು ' ಎಂದು ನೇರವಾಗಿ ಅಮೆರಿಕದ ಯುದ್ಧದಾಹಿ ನೀತಿ ಖಂಡಿಸಿದ್ದರು. ಪುಟಿನ್ ಮಾತು ಹಾಗೂ ಅವರ ಎನರ್ಜಿ ಬಗ್ಗೆ ಜಗತ್ತಿನಾದ್ಯಂತ ಟಾಕ್ ಶುರುವಾಗಿದೆ.

ಪುಟಿನ್ ಬಗ್ಗೆ ಅಮೆರಿಕದಿಂದ ಸುಳ್ಳು?

ಪುಟಿನ್ ಆರೋಗ್ಯದ ಬಗ್ಗೆ ಅಮೆರಿಕ ಸುಳ್ಳುಸುದ್ದಿಗಳನ್ನ ಹಬ್ಬಿಸುತ್ತೆ ಎಂಬ ಆರೋಪ ಮೊದಲಿನಿಂದಲೂ ಇದೆ. ಅಮೆರಿಕದ ವಿರುದ್ಧದ ಈ ಆರೋಪ ಸುಳ್ಳೋ, ನಿಜವೋ ಗೊತ್ತಿಲ್ಲ. ಆದ್ರೆ ಪುಟಿನ್ ಆರೋಗ್ಯದ ವಿಚಾರದಲ್ಲಿ ರೂಮರ್ಸ್ ಎದ್ದಿರುವುದು ನಿಜ ಅನ್ನೋದು ನಿನ್ನೆ ಜಗತ್ತಿಗೇ ಗೊತ್ತಾಗಿದೆ. ಪುಟಿನ್ ಅದೆಷ್ಟು ಎನರ್ಜಿಯಿಂದ ರಷ್ಯಾ ಜನರನ್ನು ಉದ್ದೇಶಿಸಿ ಮಾತನಾಡಿದರು ಅಂದ್ರೆ, ಘಟಾನುಘಟಿ ದೇಶಗಳು ಕೂಡ ಪುಟಿನ್ ಮಾತಿನಿಂದ ಬೆಚ್ಚಿಬಿದ್ದಿವೆ.

Putin speech gone viral

ಪರಮಾಣು ಬಾಂಬ್ ಹಾಕೋದು ಪಕ್ಕಾ?

ರಷ್ಯಾದ ಐತಿಹಾಸಿಕ ಗೆಲುವಿನ ಬಗ್ಗೆ ಸ್ಮರಣೆ ಮಾಡುತ್ತಾ ಪುಟಿನ್ ಭಾಷಣ ಮಾಡುವಾಗ ಆ ಒಂದು ಮಾತು ಖಡಕ್ ಆಗಿ ಹೇಳಿದ್ದಾರೆ. ಅದೇನಂದ್ರೆ 'ನಾಗರಿಕತೆ ಮತ್ತೊಮ್ಮೆ ನಿರ್ಣಾಯಕ ತಿರುವಿನಲ್ಲಿದೆ' ಎಂದಿದ್ದಾರೆ. ಇದು ಹಲವು ಊಹಾಪೋಹಕ್ಕೆ ಪುಷ್ಟಿ ನೀಡುವ ಜೊತೆಗೆ, ಜಪಾನ್ ಮೇಲೆ ಅಮೆರಿಕ ಹಾಕಿದ್ದ ಭೀಕರ ಅಣುಬಾಂಬ್ ದಾಳಿಯನ್ನ ಮತ್ತೊಮ್ಮೆ ನೆನಪಿಸುವಂತಿದೆ. 2ನೇ ಮಹಾಯುದ್ಧದ ಬಳಿಕ ಮತ್ತೊಮ್ಮೆ ಅಂತಹ ಭೀಕರ ನ್ಯೂಕ್ಲಿಯರ್ ದಾಳಿ ಭಯ ಶುರುವಾಗಿದೆ. ನಾಗರಿಕೆಯ ವಿಚಾರ ಪ್ರಸ್ತಾಪ ಮಾಡಿದ್ದು ಯಾಕೆ ಪುಟಿನ್ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

Putin speech gone viral

ಯಾರೇ ಫೇಮಸ್ ಆಗಿದ್ದರೂ ಅವರ ಬಗ್ಗೆ & ಅವರ ಆರೋಗ್ಯದ ಬಗ್ಗೆ ಇಂತಹ ಊಹಾಪೋಹ ಹರಿದಾಡುವುದು ಮಾಮೂಲು. ಇದೀಗ ರಷ್ಯಾ ಅಧ್ಯಕ್ಷರ ವಿಚಾರದಲ್ಲೂ ಅದೇ ಆಗಿದೆ. ಪುಟಿನ್ ಆರೋಗ್ಯದ ಬಗ್ಗೆ ಹರಿದಾಡಿದ ಸುದ್ದಿಗಳು ಸುಳ್ಳು ಅನ್ನೋದು ಪಕ್ಕಾ ಆಗಿದೆ. ಈ ಮೂಲಕ ಪುಟಿನ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇನ್ನೊಂದು ಕಡೆ ಪಾಶ್ಚಿಮಾತ್ಯ ದೇಶಗಳು ಪುಟಿನ್ ಮಾತು ಕೇಳಿ ಬೆಚ್ಚಿಬಿದ್ದಿವೆ. ಮುಂದೆ ಇದೇ ವಿಚಾರ ವಿಶ್ವಯುದ್ಧಕ್ಕೆ ನಾಂದಿ ಹಾಡುತ್ತಾ? ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+