ಉಪ್ಪು ತಿಂದ ಮನೆಗೆ ದ್ರೋಹ ಮಾಡಿದ ಸೇನೆ: 8 ಸಾವಿರ ಕೋಟಿ ರೂಪಾಯಿ ಕೊಟ್ಟರೂ ಮೋಸ!

ಮಾಸ್ಕೋ: ಯಾವುದೇ ಸೇನೆಯ ಕೆಲಸವೇನು ಹೇಳಿ? ತನ್ನ ಪ್ರಾಣತ್ಯಾಗ ಮಾಡಿಯಾದರೂ ದೇಶ ರಕ್ಷಣೆ ಮಾಡುವುದು. ಆದ್ರೆ ಇಲ್ಲೊಂದು ಸೇನೆ ಮಾತ್ರ ತನ್ನ ದೇಶದ ದುಡ್ಡು ತಿಂದು ತನ್ನ ದೇಶಕ್ಕೇ ದ್ರೋಹ ಮಾಡಿದೆ. ಮೋಸಕ್ಕೆ ತಕ್ಕಪಾಠ ಕಲಿಸಲು ಅಧ್ಯಕ್ಷ ಪಣತೊಟ್ಟಿದ್ದು ಮೊದಲೇ ಹೊತ್ತಿ ಉರಿಯುತ್ತಿರುವ ಪರಿಸ್ಥಿತಿಗೆ ತುಪ್ಪ ಸುರಿದಂತಾಗಿದೆ.

ರಷ್ಯಾ ಜಗತ್ತಲ್ಲೇ ಬಲಿಷ್ಠ ಸೇನೆ ಹೊಂದಿದ್ದು ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಟಾಪ್ 5 ಆಗಿದೆ. ಆದ್ರೂ ತನ್ನ ಖಾಸಗಿ ಸೇನೆ ಬಂಡಾಯ ಎದ್ದಾಗ ಅದನ್ನ ನಿಭಾಯಿಸಲು ರಷ್ಯಾ ಕೈಯಲ್ಲಿ ಆಗಲೇ ಇಲ್ಲ. ಈ ವಿಚಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೂ ವೇದಿಕೆಯನ್ನ ಒದಗಿಸಿದೆ. ಹೀಗೆ ಚರ್ಚೆಗಳು ನಡೆಯುವಾಗಲೇ ರಷ್ಯಾ ಅಧ್ಯಕ್ಷ ಪುಟಿನ್ ಸ್ಫೋಟಕ ವಿಚಾರ ತಿಳಿಸಿದ್ದು, ಉಪ್ಪು ತಿಂದ ಮನೆಗೆ ರಷ್ಯಾ ಖಾಸಗಿ ಸೇನೆ ಹೇಗೆ ದ್ರೋಹ ಮಾಡಿದೆ ಅನ್ನೋ ಕಟುಸತ್ಯ ಸಂಚಲನ ಸೃಷ್ಟಿಸಿದೆ. ಹೀಗೆ ಕಳೆದ ವರ್ಷ ರಷ್ಯಾದ ಸರ್ಕಾರ ಖಾಸಗಿ ಸೇನೆಗಾಗಿ ಕೊಟ್ಟಿದ್ದ ಹಣ ಎಷ್ಟು ಗೊತ್ತಾ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

Putin says Russia paid 1 billion dollar to Wagner group

8 ಸಾವಿರ ಕೋಟಿ ರೂ. ಕೊಟ್ಟರೂ ಮೋಸ!

ಹೌದು, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾದ ಬಳಿಕ ಪುಟಿನ್ ಸರ್ಕಾರವೇ ಖಾಸಗಿ ಸೇನೆಯ ಬೇಕು ಬೇಡಗಳನ್ನ ನೋಡಿಕೊಂಡಿದೆ. ಅಲ್ಲದೆ ಕೇವಲ ಒಂದು ವರ್ಷಕ್ಕೆ ಸುಮಾರು 8 ಸಾವಿರ ಕೋಟಿ ರೂಪಾಯಿ ಅಂದ್ರೆ, 1 ಬಿಲಿಯನ್ ಅಮೆರಿಕ ಡಾಲರ್‌ನಷ್ಟು ಹಣ ಕೊಟ್ಟಿದೆ. ಆದರೂ ತನ್ನ ದೇಶದ ವಿರುದ್ಧವೇ ರಷ್ಯಾ ವ್ಯಾಗ್ನರ್ ಗುಂಪು ಅಲಿಯಾಸ್ ರಷ್ಯಾ ಖಾಸಗಿ ಸೇನೆ ದಂಗೆ ಎದ್ದಿತ್ತು. ಈ ಬಗ್ಗೆ ಮಾತನಾಡಿರುವ ರಷ್ಯಾ ಅಧ್ಯಕ್ಷ ಪುಟಿನ್, ಖಾಸಗಿ ಸೇನೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಪುಟಿನ್ ಹೇಳಿದ್ದ ಮಾತುಗಳ ಲೆಕ್ಕಾಚಾರ ನೋಡಿದ್ರೆ, ಸಮಯ ಬಂದಾಗ ರಷ್ಯಾ ಖಾಸಗಿ ಸೇನೆ ಖತಂ ಆಗೋದು ಪಕ್ಕಾ.

ರಷ್ಯಾ ಅಧ್ಯಕ್ಷ ಪುಟಿನ್ ಈಗ ಎಲ್ಲಿದ್ದಾರೆ?

ಅಂದಹಾಗೆ ರಷ್ಯಾ ಪರಿಸ್ಥಿತಿ ಮುಳ್ಳಿನ ಮೇಲೆ ಬಿದ್ದಿರುವ ಬಟ್ಟೆಯಾಗಿದೆ. ಜೋರಾಗಿ ಎಳೆದರೂ ಕಷ್ಟ, ಸುಮ್ಮನೆ ಬಿಟ್ಟರೂ ಪರದಾಟ. ಆದ್ರೆ ರಷ್ಯಾ ಖಾಸಗಿ ಸೇನೆ ಮತ್ತು ಸರ್ಕಾರಿ ಸೇನಾ ಪಡೆ ಮಧ್ಯೆ ನಡೆದ ಭೀಕರ ಕಾಳಗ ಉಕ್ರೇನ್‌ಗೆ ವರವಾಗಿ ಪರಿಣಮಿಸಿದೆ. ರಷ್ಯಾ & ಉಕ್ರೇನ್ ಮಧ್ಯೆ ಭೀಕರ ಯುದ್ಧ (Russia Ukraine War) ನಡೆಯುವ ಸಂದರ್ಭದಲ್ಲೇ ಒಂದು ಕಾಲದಲ್ಲಿ ಪುಟಿನ್ ಆಪ್ತನಾಗಿದ್ದ ಯೆವ್ಗೆನಿ ಪ್ರಿಗೊಝಿನ್ ಬೆನ್ನಿಗೆ ಚೂರಿ ಹಾಕಿದ್ದಾನೆ. ಹೀಗಾಗಿ ಪುಟಿನ್ ರಷ್ಯಾದ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದರೆ ಪರಿಸ್ಥಿತಿ ನೋಡಿದರೆ ಸದ್ಯಕ್ಕೆ ರಷ್ಯಾ ಒಳಗೆ ಹೊತ್ತಿರುವ ಬೆಂಕಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈ ಕಾರಣಕ್ಕೆ ಪುಟಿನ್ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಶತ್ರುಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

Putin says Russia paid 1 billion dollar to Wagner group

ಉಕ್ರೇನ್ ವಿರುದ್ಧವೂ ಭಾರಿ ಹಿನ್ನಡೆ

ರಷ್ಯಾ ಒಂದೂವರೆ ವರ್ಷದ ಹಿಂದೆ ಉಕ್ರೇನ್ ವಿರುದ್ಧ ಯುದ್ಧ ಸಾರಿತ್ತು. ಅಲ್ಲಿಂದ ಈ ತನಕವು ಒಂದಲ್ಲ ಒಂದು ಸಮಸ್ಯೆ ವ್ಲಾದಿಮಿರ್ ಪುಟಿನ್‌ಗೆ ಕಾಡುತ್ತಿದೆ. ಈಗಲೂ ಅಷ್ಟೇ ರಷ್ಯಾ ಖಾಸಗಿ ಸೇನೆ ಆಂತರಿಕ ಕಿತ್ತಾಟ ಪುಟಿನ್‌ಗೆ ತಲೆನೋವು ತರಿಸಿದೆ. ಆದರೆ ಇದೇ ಸಂದರ್ಭ ಬಳಸಿಕೊಂಡ ಉಕ್ರೇನ್ ಸೈನಿಕರು ಕ್ರಾಸ್ನೋಹೋರಿವ್ಕಾ ಸಮೀಪದ ಹಳ್ಳಿಗಳನ್ನು ವಶಕ್ಕೆ ಪಡೆದಿದ್ದಾರಂತೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 2014ರಲ್ಲಿ ದಾಳಿ ಮಾಡಿದ್ದ ರಷ್ಯಾ ಪಡೆಗಳು, ಕ್ರಿಮಿಯಾ ಸೇರಿದಂತೆ ಈ ಪ್ರದೇಶದ ಹಲವು ಭಾಗಗಳನ್ನ ವಶಕ್ಕೆ ಪಡೆದಿದ್ದವು. ಈ ಕಿತ್ತಾಟ ನೋಡುತ್ತಿದ್ದರೆ, ಇನ್ನಷ್ಟು ದಿನ ರಷ್ಯಾ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ಹೀಗಾಗಿ ರಷ್ಯಾ ಸೇನೆ ಫುಲ್ ಅಲರ್ಟ್ ಆಗಿದ್ದು, ಪರಮಾಣು ಯುದ್ಧದ ಭೀತಿ ಕೂಡ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+