3ನೇ ಮಹಾಯುದ್ಧ ನಿಂತೋಯ್ತಾ? ಪುಟಿನ್ ಕಣ್ಣು ಕುರುಡಾಯ್ತಾ?

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Putin) ಅವರ ಆರೋಗ್ಯದ ಬಗ್ಗೆ ದಿನಕ್ಕೊಂದು ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಾರಿ ಗಂಭೀರ ಸಂದೇಶ ಹೊರಬಿದ್ದಿದ್ದು, ಪುಟಿನ್ ಕಣ್ಣು ಕುರುಡಾಗಿದೆ ಎಂಬ ಸ್ಫೋಟಕ ಮಾಹಿತಿ ಹರಿದಾಡುತ್ತಿದೆ. ಇಷ್ಟು ಮಾತ್ರವಲ್ಲ, ವ್ಲಾದಿಮಿರ್ ಪುಟಿನ್ ಕೈ-ಕಾಲು ಸ್ವಾಧೀನ ಕಳೆದುಕೊಂಡಿವೆ ಎಂಬ ಸುದ್ದಿ ಸಂಚಲನ ಸೃಷ್ಟಿಮಾಡಿದೆ.

ಅದ್ಯಾವಾಗ ರಷ್ಯಾ ಅಧ್ಯಕ್ಷರು (Russian President) ಉಕ್ರೇನ್‌ ವಿರುದ್ಧ ಯುದ್ಧ ಆರಂಭಿಸಿದರೋ, ಆ ಕ್ಷಣದಿಂದಲೇ ಪುಟಿನ್ ಆರೋಗ್ಯದ ಬಗ್ಗೆ ಗುಸುಗುಸು ಶುರುವಾಗಿತ್ತು. ಪುಟಿನ್‌ ಕ್ಯಾನ್ಸರ್‌ ಮತ್ತು ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಎಲ್ಲೆಲ್ಲೂ ಓಡಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸಾಕ್ಷಿಗಳು ಈವರೆಗೂ ಹೊರಬಿದ್ದಿರಲಿಲ್ಲ. ಇದೀಗ ಸಿಗುತ್ತಿರುವ ಮಾಹಿತಿ ಸಂಚಲನ ಸೃಷ್ಟಿಸಿದ್ದು, ಪುಟಿನ್ ಅವರ ಕಣ್ಣು ಸಂಪೂರ್ಣ ಮಂಜಾಗುತ್ತಿದೆ, ಹಾಗೇ ಕೈ-ಕಾಲು ಸ್ವಾಧೀನ ಕಳೆದುಕೊಂಡಿವೆ ಎನ್ನಲಾಗುತ್ತಿದೆ.

Putin Health gossips created tension in Russian presidents followers

3ನೇ ಮಹಾಯುದ್ಧ ನಿಂತೋಯ್ತಾ?

ಪುಟಿನ್ ವಿರುದ್ಧ ಪದೇಪದೆ ಆರೋಪಗಳನ್ನು ಮಾಡುವ ಅಮೆರಿಕ, 3ನೇ ಮಹಾಯುದ್ಧ ಆರಂಭವಾದರೆ ಅದು ವ್ಲಾದಿಮಿರ್ ಪುಟಿನ್ ಅವರಿಂದ ಮಾತ್ರ ಎಂದು ಆರೋಪಿಸುತ್ತಿತ್ತು. ಹೀಗಾಗಿ ಇದೀಗ ವ್ಲಾದಿಮಿರ್ ಪುಟಿನ್ ಆರೋಗ್ಯದಲ್ಲಿ ಏರುಪೇರಾಗಿರುವ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, 3ನೇ ಮಹಾಯುದ್ಧ ನಿಂತೋಯ್ತಾ? ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯುತ್ತಿದ್ದಾರೆ. ಭಾರಿ ಚರ್ಚೆ ಕೂಡ ಶುರುವಾಗಿದೆ. ಪುಟಿನ್‌ ದೃಷ್ಟಿ ಮಂಜಾಗಿದ್ದು, ನಾಲಗೆ ಸ್ತಬ್ಧವಾಗಿದೆ. ಪುಟಿನ್ ಅವರ ಆರೋಗ್ಯದ ಕುರಿತು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೆಲ್ಲಾ ಅಮೆರಿಕದ ಕುತಂತ್ರ?

ಮೇಲೆ ಹೇಳಿದ ಮಾತುಗಳು ಪುಟಿನ್ ವಿರೋಧಿಗಳದ್ದಾಗಿದ್ದರೆ, ಮತ್ತೊಂದೆಡೆ ಪುಟಿನ್ ಬೆಂಬಲಿಗರ ಚರ್ಚೆಯೇ ಬೇರೆಯದ್ದಾಗಿದೆ. ಅದೇನೆಂದರೆ ಪುಟಿನ್ ಆರೋಗ್ಯದ ಬಗ್ಗೆ ಅಮೆರಿಕ ಸುಳ್ಳುಸುದ್ದಿ ಹಬ್ಬಿಸುತ್ತಿದೆ ಎಂದು. ಈಗಾಗಲೇ ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಪರೋಕ್ಷವಾಗಿ ಬೆಂಬಲ ಸೂಚಿಸಿ, ರಷ್ಯಾ ಸೋಲಿಗೆ ಕಾಯುತ್ತಿವೆ. ಈ ಮೂಲಕ ತನ್ನ ಶತ್ರು ರಷ್ಯಾ ಹಣಿಯಲು ಅಮೆರಿಕ ತಂತ್ರ ರೂಪಿಸಿದೆ. ಆದರೆ ಇದು ಈಡೇರದ ಕಾರಣ ಪುಟಿನ್ ಆರೋಗ್ಯದ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆಂಬ ಆರೋಪ ಕೂಡ ಬಲವಾಗಿ ಕೇಳಿಬರುತ್ತಿದೆ.

ಅಧಿಕೃತ ಮಾಹಿತಿ ನೀಡದ ರಷ್ಯಾ

ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಮಾಹಿತಿಗಳು ಕೇವಲ ಊಹಾಪೋಹ. ಆದರೆ ಅಧಿಕೃತವಾಗಿ ಈ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನ ರಷ್ಯಾ ಸರ್ಕಾರ ನೀಡಿಲ್ಲ. ಜೊತೆಗೆ ಪುಟಿನ್ ಕೂಡ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಾ, ತಮ್ಮ ಸ್ನೇಹಿತ ರಾಷ್ಟ್ರಗಳೊಡನೆ ರಷ್ಯಾದ ಸಂಬಂಧವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲೇ ವ್ಲಾದಿಮಿರ್ ಪುಟಿನ್ ಆರೋಗ್ಯದ ಬಗ್ಗೆ ಎದ್ದಿರುವ ಪ್ರಶ್ನೆಗಳು ಸಹಜವಾಗಿಯೇ ಪುಟಿನ್ ಅಭಿಮಾನಿಗಳಲ್ಲಿ ಬೇಸರ ಹಾಗೂ ಭಯ ಎರಡನ್ನೂ ಹುಟ್ಟುಹಾಕಿದೆ.

Putin Health gossips created tension in Russian presidents followers

ಯಾರೇ ಫೇಮಸ್ ಆಗಿದ್ದರೂ ಅವರ ಬಗ್ಗೆ ಹಾಗೂ ಅವರ ಆರೋಗ್ಯದ ಬಗ್ಗೆ ಇಂತಹ ಊಹಾಪೋಹಗಳು ಹರಿದಾಡುವುದು ಮಾಮೂಲು. ಇದೀಗ ರಷ್ಯಾ ಅಧ್ಯಕ್ಷರ ವಿಚಾರದಲ್ಲೂ ಅಂತಹದ್ದೇ ಬೆಳವಣಿಗೆ ನಡೆಯುತ್ತಿದೆ ಅನ್ನುತ್ತಿದ್ದಾರೆ ಕೆಲವರು. ಆದರೆ ಇನ್ನೂ ಕೆಲವರ ಪ್ರಕಾರ ಪುಟಿನ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಕ್ಷೀಣಿಸಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಮತ್ತೊಂದು ಕಡೆ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ರಷ್ಯಾ, ಉಕ್ರೇನ್ ಮತ್ತು ನ್ಯಾಟೋ ಪಡೆಗಳ ವಿರುದ್ಧದ ಹೋರಾಟ ಮುಂದುವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+