Israel War: ಅಮೆರಿಕದ ಬುಡ ಅಲುಗಾಡಿಸಲು ಪುಟಿನ್ ರಣತಂತ್ರ?
ಅಮೆರಿಕ & ಮಿತ್ರರ ಬುಡ ಅಲುಗಾಡಿಸಲು ರಷ್ಯಾ ಅಧ್ಯಕ್ಷ ಪುಟಿನ್ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಂತೆ ಕಾಣುತ್ತಿದೆ. ಅತ್ತ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿ, ಇತ್ತ ಗಾಜಾಪಟ್ಟಿ ಪರ ನಿಂತಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್. ಇದು ಸಾಲದು ಎಂಬಂತೆ ದಿಢೀರ್ ಚೀನಾ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಚೀನಾ ಅಧ್ಯಕ್ಷ ಜಿನ್‌ಪಿಂಗ್ ಮತ್ತು ಪುಟಿನ್ ಮಧ್ಯೆ ಮಹತ್ವದ ಮಾತುಕತೆಗೆ ಕ್ಷಣಗಣನೆ ಆರಂಭವಾಗಿದೆ.
ಜಗತ್ತು ಪೀಸ್ ಪೀಸ್ ಆಗಿದೆ, ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ಸೇನೆಯ ಮಧ್ಯೆ ಸೆಣೆಸಾಟ ಶುರುವಾದ ನಂತರ 3ನೇ ಮಹಾಯುದ್ಧ ಆತಂಕ ಎದುರಾಗಿದೆ. ಇದೇ ಹೊತ್ತಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ದೇಶ ಬಿಟ್ಟು ಹೊರಗೆ ಹೋಗುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಅರೆಸ್ಟ್ ವಾರೆಂಟ್ ಪ್ರಕಟಿಸಿದ ನಂತರ ಪುಟಿನ್‌ಗೆ ಬಂಧನದ ಆತಂಕ ಕಾಡುತ್ತಿದೆ. ಹೀಗಾಗಿ ವ್ಲಾದಿಮಿರ್ ಪುಟಿನ್ ರಷ್ಯಾ ಬಿಟ್ಟು ಹೊರಗೆ ಹೋಗಿರಲಿಲ್ಲ. ಇದೀಗ ದಿಢೀರ್ ಚೀನಾಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಯಾಕೆ ಗೊತ್ತಾ?

ನಾಳೆ ಹಾಗೂ ನಾಡಿದ್ದು ಅಂದರೆ, ಅಕ್ಟೋಬರ್ 17 & 18 ರಂದು ಚೀನಾದಲ್ಲಿ 'ಬೆಲ್ಟ್ & ರೋಡ್' ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ಪುಟಿನ್ ಹೊರಟು ನಿಂತಿದ್ದಾರೆ. ಇನ್ನೇನು ಕೆಲ ಹೊತ್ತಲ್ಲೇ ವ್ಲಾದಿಮಿರ್ ಪುಟಿನ್ ಚೀನಾ ತಲುಪಲಿದ್ದಾರೆ. ಈ ಮೂಲಕ ಚೀನಾ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಈ ವೇಳೆ ಚೀನಾ ಮತ್ತು ರಷ್ಯಾ ಮುಖ್ಯಸ್ಥರ ಮಧ್ಯೆ ಇಸ್ರೇಲ್ ವಾರ್ ಬಗ್ಗೆಯು ಚರ್ಚೆ ನಡೆಯಲಿದೆ ಅನ್ನೋ ಮಾತು ಓಡಾಡುತ್ತಿದೆ. ಏಕೆಂದರೆ ಚೀನಾ ಮತ್ತು ಇರಾನ್ ಅತ್ಯುತ್ತಮ ಸ್ನೇಹಿತರು. ಇದೀಗ ಹಮಾಸ್ ಬಂಡುಕೋರರ ಪರವಾಗಿ ಇರಾನ್ ನಿಂತಿದ್ದು, ಚೀನಾಗೆ ಇಸ್ರೇಲ್ ಶತ್ರುವಿನಂತೆ. ಹೀಗಾಗಿ ಚೀನಾ & ರಷ್ಯಾ ನಡೆ ಕುತೂಹಲ ಕೆರಳಿಸಿದೆ.
ಪ್ರಪಂಚವೇ ಪೀಸ್ ಪೀಸ್ ಆಗುತ್ತಾ?
ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಇಸ್ರೇಲ್ ಮತ್ತು ಹಮಾಸ್ ಯುದ್ಧ ಪ್ರಸ್ತಾಪಿಸಿ, ಹಮಾಸ್‌ಗೆ ಬೆಂಬಲ ನೀಡುವಂತೆ ಮಾತನಾಡಿದ್ದರು. ಅಲ್ಲದೆ ಅಮೆರಿಕದ ತಪ್ಪು ದೊಡ್ಡದಿದೆ, ಅವರು ಯುದ್ಧ ನಿಲ್ಲಿಸುವಲ್ಲಿ ಸೋತಿದ್ದಾರೆ ಎಂದು ತನ್ನ ಶತ್ರು ಅಮೆರಿಕದ ನಾಯಕರಿಗೆ ಎಚ್ಚರಿಕೆ ನೀಡಿದ್ದರು. ಇದೀಗ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆ ಈ ಬಗ್ಗೆ ಮಹತ್ವದ ಚರ್ಚೆ ನಡೆಸಿ ಪ್ಯಾಲೆಸ್ತೀನ್‌ಗೆ ಇನ್ನಷ್ಟು ನೆರವು ನೀಡಲು ಪುಟಿನ್ ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಇರಾನ್ ಭಾರಿ ಪ್ರಮಾಣದ ನೆರವನ್ನು ಹಮಾಸ್‌ಗೆ ನೀಡಿರುವ ಆರೋಪ ಕೂಡ ಕೇಳಿಬಂದಿದೆ.

ಜಾಗತಿಕವಾಗಿ ಚೀನಾಗೆ ಮಹತ್ವದ ಸಮ್ಮೇಳನ
ಚೀನಾ ನೇತೃತ್ವದಲ್ಲಿ ನಡೆಯುವ ಈ 'ಬೆಲ್ಟ್ & ರೋಡ್' ಸಮ್ಮೇಳನದಲ್ಲಿ 130 ದೇಶಗಳು ಭಾಗಿಯಾಗುವ ನಿರೀಕ್ಷೆ ಇದೆ. ಅದ್ರಲ್ಲೂ ಪುಟಿನ್ ಕೂಡ ಈ ಸಮ್ಮೇಳನದಲ್ಲಿ ಭಾಗಿಯಾಗಿ ಮತ್ತಷ್ಟು ಬಲ ತುಂಬಲಿದ್ದಾರೆ. ಭಾರತದಲ್ಲಿ ನಡೆದಿದ್ದ ಜಿ20 ಸಮ್ಮೇಳನಕ್ಕೂ ವ್ಲಾದಿಮಿರ್ ಪುಟಿನ್ ಬಂದಿರಲಿಲ್ಲ. ಆದರೆ ಇದೀಗ ಚೀನಾ ನೆಲದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾಗವಹಿಸಲು ಓಡೋಡಿ ಹೋಗುತ್ತಿದ್ದಾರೆ. ಇಷ್ಟರಲ್ಲೇ ಅರ್ಥವಾಗುತ್ತಿದೆ ಚೀನಾ & ರಷ್ಯಾ ಇಡುತ್ತಿರುವ ಮುಂದಿನ ಹೆಜ್ಜೆ ಎಂತಹದ್ದು ಎಂದು.
ಬೇರೆ ದೇಶಕ್ಕೆ ಹೋಗಿರಲಿಲ್ಲ ಪುಟಿನ್!
ಪುಟಿನ್ ಬಂಧನಕ್ಕೆ ಉಕ್ರೇನ್ ಯುದ್ಧವನ್ನೇ ನೆಪವಾಗಿ ಇಟ್ಟುಕೊಂಡು ಅಮೆರಿಕ ಕುತಂತ್ರವನ್ನು ಹೆಣೆದಿದೆ ಎಂದು ರಷ್ಯಾ ಆರೋಪಿಸ್ತಿದೆ. ಉಕ್ರೇನ್ ವಿರುದ್ಧ ಯುದ್ಧದಲ್ಲಿ, ಯುದ್ಧಾಪರಾಧ ಎಸಗಿದ ಆರೋಪದಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಮಾರ್ಚ್ ತಿಂಗಳಲ್ಲಿ ಪುಟಿನ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿ ಸಂಚಲನ ಸೃಷ್ಟಿಸಿತ್ತು. ರಷ್ಯಾ ಕೂಡ ಈ ಆದೇಶದ ಬಳಿಕ ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ಮತ್ತಷ್ಟು ಭೀಕರ ದಾಳಿ ನಡೆಸಿದೆ. ಹೀಗಾಗಿ ಪುಟಿನ್ ಬೇರೆ ದೇಶಗಳಿಗೆ ಹೋಗಿರಲಿಲ್ಲ. ಆದ್ರೆ ಮೊನ್ನೆಯಷ್ಟೇ ಕಿರ್ಗಿಸ್ತಾನಕ್ಕೆ ಭೇಟಿಯನ್ನು ಕೊಟ್ಟಿದ್ದರು ವ್ಲಾದಿಮಿರ್ ಪುಟಿನ್. ಇದೀಗ ಚೀನಾಗೆ ಹೊರಟು ನಿಂತಿದ್ದಾರೆ.












Click it and Unblock the Notifications