Trump & Putin: ಟ್ರಂಪ್ ವಿರುದ್ಧ ಬೈಡನ್ ಮಸಲತ್ತು ಮಾಡುತ್ತಿದ್ದಾರೆ ಎಂದ ರಷ್ಯಾ ಅಧ್ಯಕ್ಷ ಪುಟಿನ್!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದು, ಡೊನಾಲ್ಡ್ ಟ್ರಂಪ್ ಅವರು ಅದ್ಧೂರಿಯಾಗಿ ಇದೀಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಕೂಡ ಆಗಿದ್ದಾರೆ. ಹೀಗೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಷ್ಯಾ & ಉಕ್ರೇನ್ ಯುದ್ಧ ಆದಷ್ಟು ಬೇಗ ನಿಲ್ಲುವುದು ಗ್ಯಾರಂಟಿ ಎಂಬ ಮಾತು ಕೇಳಿ ಬರುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಿಂದ ಕೂಡ ತುಂಬಾ ಆತ್ಮೀಯರು. ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ಅಮೆರಿಕದಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಇದೇ ವ್ಲಾದಿಮಿರ್ ಪುಟಿನ್ ಅವರು ಆತ್ಮೀಯ ಸಂಬಂಧ ಹೊಂದಿದ್ದರು. ಅಲ್ಲದೆ ಅಮೆರಿಕ & ರಷ್ಯಾ ನಡುವಿನ ಸಂಬಂಧ ಕೂಡ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಂಡಿತ್ತು ಎಂಬ ಮಾತು ಕೇಳಿ ಬಂದಿತ್ತು. ಹೀಗಿದ್ದಾಗಲೇ, ಹೊಸ ಸುದ್ದಿ ಈಗ ಸಂಚಲನ ಸೃಷ್ಟಿ ಮಾಡಿದೆ.

ಟ್ರಂಪ್ ವಿರುದ್ಧ ಬೈಡನ್ ಪಿತೂರಿ?
ಡೊನಾಲ್ಡ್ ಟ್ರಂಪ್ & ಜೋ ಬೈಡನ್ ಅವರ ರಾಜಕೀಯ ಮೌಲ್ಯಗಳಲ್ಲಿ ಭಾರಿ ದೊಡ್ಡದಾಗಿ ವ್ಯತ್ಯಾಸ ಕಾಣಬಹುದು. ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಮೌಲ್ಯಕ್ಕೂ, ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರ ರಾಜಕೀಯ ಮೌಲ್ಯಗಳಿಗೂ ಭಾರಿ ವ್ಯತ್ಯಾಸವೇ ಇದೆ. ಇಂತಹ ವಾತಾವರಣದಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿಯಾಗಿ ಗೆದ್ದು ಇದೀಗ ಅಮೆರಿಕದಲ್ಲಿ ತಮ್ಮದೇ ಆಡಳಿತ ಜಾರಿಗೆ ತರಲು ಮುಂದಾಗಿದ್ದಾರೆ. ಆದರೆ ಇಂತಹ ಸಮಯದಲ್ಲೇ ಜೋ ಬೈಡನ್ ಸರಿಯಾಗಿ ಫಿಟ್ಟಿಂಗ್ ಇಡುತ್ತಿದ್ದಾರಂತೆ!
ಪುಟಿನ್ ಸ್ಫೋಟಕ ಆರೋಪ ಏನು?
ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಅಮೆರಿಕದ ಒಳಗೆ ಏನಾಗುತ್ತಿದೆ? ಎಂಬ ಪ್ರಶ್ನೆ ಮತ್ತಷ್ಟು ಭುಗಿಲೇಳುವಂತೆ ಕೂಡ ಆಗಿದೆ. ಅಂದಹಾಗೆ ಡೊನಾಲ್ಡ್ ಟ್ರಂಪ್ ಅವರು ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಆದ್ರೆ ಹೀಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಹಾಲಿ ಅಧ್ಯಕ್ಷರಾದ ಜೋ ಬೈಡನ್ ಪಿತೂರಿ ಮಾಡುತ್ತಿದ್ದಾರೆ. ಅದರಲ್ಲೂ ಉಕ್ರೇನ್‌ಗೆ ಮಿಸೈಲ್ ಮೂಲಕ ರಷ್ಯಾ ವಿರುದ್ಧ ದಾಳಿ ಮಾಡಲು ಬೈಡನ್ ಅವಕಾಶ ಕೊಟ್ಟಿದ್ದು ಇದಕ್ಕೆಲ್ಲಾ ಸಾಕ್ಷಿ ಎಂದು ಆರೋಪಿಸಿದ್ದಾರೆ ರಷ್ಯಾದ ಅಧ್ಯಕ್ಷ ಪುಟಿನ್. ಇದೇ ಆರೋಪ ಸಂಚಲನ ಸೃಷ್ಟಿಸಿ, ಎಲ್ಲೆಲ್ಲೂ ಚರ್ಚೆಗೆ ವೇದಿಕೆ ಒದಗಿಸಿದೆ.












Click it and Unblock the Notifications