ಕೊರೆವ ಚಳಿಯಲ್ಲೂ ಖುಷಿಪಡಲು ಎಷ್ಟೆಲ್ಲ ಕಾರಣ!

Posted By:
Subscribe to Oneindia Kannada

ವಾರಾಂತ್ಯಕ್ಕೆ ಬಂದು ನಿಂತಿದ್ದೇವೆ. ಕಣ್ಣೆದುರು ಭಾನುವಾರ ಕುಣಿಯುತ್ತಿದೆ. ಜಗತ್ತಿನ ವಿವಿಧೆಡೆ ಏನೇನೋ ಘಟನೆಗಳು ನಡೆದಿವೆ. ಅವುಗಳ ಫೋಟೋಗಳು ಮತ್ತೊಂದಿಷ್ಟು ವಿವರಣೆ ಇಲ್ಲಿವೆ. ಇವೆಲ್ಲ ನಾನಾ ದೇಶದ ಆಚರಣೆಗಳು, ವಾತಾವರಣವನ್ನು ಬಿಂಬಿಸುವಂಥ ಫೋಟೋಗಳು. ಆದರೆ ಅಲ್ಲೊಬ್ಬರು ಭಾರತೀಯರಿದ್ದಾರೆ.

ಸಂಪ್ರದಾಯವಾದಿ ಕ್ರಿಶ್ಚಿಯನ್ನರು ಕ್ರಿಸ್ ಮಸ್ ಅನ್ನು ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆಚರಿಸುವುದು ಕೇಳಿದ್ದಿರಾ? ಹೌದು, ರಷ್ಯಾದ ಮಾಸ್ಕೋಗೆ 500 ಕಿ.ಮೀ. ದೂರದಲ್ಲಿ ಜನವರಿ 7ರಂದು ಕ್ರಿಸ್ ಮಸ್ ಆಚರಿಸಿದ್ದಾರೆ. ದೀಪಿಕಾ ಪಡುಕೋಣೆ ತಮ್ಮ ಹಾಲಿವುಡ್ ಸಿನಿಮಾದ ಪ್ರಚಾರದಲ್ಲಿ ಸಕತ್ ಆಗಿ ಮಿಂಚಿದ್ದಾರೆ.

ಇನ್ನು ಬಲ್ಗೇರಿಯನ್ನರ ಹೊಸ ವರ್ಷಾಚರಣೆ ಗಮನಿಸಿದಿರಾ, ಅಬ್ಬಾ ಕೊರೆವ ಚಳಿಯಲ್ಲಿ ಮಂಜುಗಡ್ಡೆಯಂಥ ನದಿ ನೀರಿನಲ್ಲಿ ಶಿಲುಬೆ ಹುಡುಕಿದವರ ಆರೋಗ್ಯ ಚೆನ್ನಾಗುತ್ತದೆ ಎಂಬುದು ಅಲ್ಲಿನವರ ನಂಬಿಕೆಯಂತೆ. ಎಂಥ ಖುಷಿಯಾಗಿ ಹಾಡಿ, ಕುಣಿದು ಭಾಗವಹಿಸಿದ್ದಾರೆ ಗೊತ್ತಾ? ಒಟ್ಟಿನಲ್ಲಿ ಕ್ರಿಸ್ ಮಸ್, ಹೊಸ ವರುಷದ ಸಂಭ್ರಮ ಜಗತ್ತಿನ ನಾನಾ ಕಡೆ ಮುಂದುವರಿದಿದೆ. ಅವುಗಳೆಲ್ಲದರ ಫೋಟೋಗಳು ಇಲ್ಲಿವೆ.

ದೀಪಿಕಾ ಸಿನಿಮಾದ ಪ್ರೀಮಿಯರ್ ಷೋ

ದೀಪಿಕಾ ಸಿನಿಮಾದ ಪ್ರೀಮಿಯರ್ ಷೋ

ನಟಿ ದೀಪಿಕಾ ಪಡುಕೋಣೆ ತನ್ನ ಹೊಸ ಇಂಗ್ಲಿಷ್ ಸಿನಿಮಾ XXX: Return of Xander cage ನ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ವರ್ಲ್ಡ್ ಪ್ರೀಮಿಯರ್ ಷೋ ಮೆಕ್ಸಿಕೋ ನಗರದಲ್ಲಿತ್ತು. ಅಲ್ಲಿ ಕ್ಯಾಮೆರಾಕ್ಕೆ ಆಕೆ ಪೋಸು ನೀಡಿದ್ದು ಹೀಗೆ.

ನದಿಯಲ್ಲಿ ಪ್ರತಿಫಲನ

ನದಿಯಲ್ಲಿ ಪ್ರತಿಫಲನ

ಸೈಕಲ್ ಸವಾರರು ಸೇತುವೆ ಮೇಲೆ ಹಾಗೂ ರಸ್ತೆಯಲ್ಲಿ ಪಾದಚಾರಿಗಳು ಸಾಗುವಾಗ ಉತ್ತರ ಕೊರಿಯಾದ ಪ್ಯೋನ್ ಗ್ಯಾಂಗ್ ನ ಪೋತಂಗ್ ನದಿಯಲ್ಲಿ ಕಂಡುಬಂದ ಪ್ರತಿಫಲನದ ಅಪೂರ್ವ ಚಿತ್ರ ಇದು. ಅದ್ಭುತ ಕಲಾವಿದನೊಬ್ಬನ ಕುಂಚದಲ್ಲಿ ಅರಳಿದ ಚಿತ್ರದಂತಿರುವ ಇದು ಫೋಟೋ ಫೋಟೋ ಫೋಟೋ.

ಮಲ್ಲಕಂಬದ ಥರದ ಅಗ್ನಿಶಾಮಕ ದಳದವರ ಸಾಹಸ

ಮಲ್ಲಕಂಬದ ಥರದ ಅಗ್ನಿಶಾಮಕ ದಳದವರ ಸಾಹಸ

ಹಾಗೇ ನೋಡಿದರೆ ಮಲ್ಲಕಂಬದ ಥರ ಕಾಣುವ ಈ ಸಾಹಸ ಏಣಿಯನ್ನು ಬಳಸಿ ಅಗ್ನಿಶಾಮಕದವರು ಪ್ರದರ್ಶಿಸುವ ವಾರ್ಷಿಕ ಹೊಸ ವರ್ಷದ ಸಾಹಸ. ಜಪಾನ್ ನ ಟೋಕಿಯೋದಲ್ಲಿ ಕಂಡುಬಂದಿದ್ದು.

ಬಲ್ಗೇರಿಯಾದಲ್ಲಿ ಹೊಸ ವರ್ಷದ ಸಂಭ್ರಮ

ಬಲ್ಗೇರಿಯಾದಲ್ಲಿ ಹೊಸ ವರ್ಷದ ಸಂಭ್ರಮ

ಬಲ್ಗೇರಿಯಾದ ಕಲೋಫರ್ ನ ಟುಂಡ್ಜಾ ನದಿಯಲ್ಲಿ ನಿಂತು ಹೊಸ ವರ್ಷದ ಹಾಡು, ನೃತ್ಯದಲ್ಲಿ ತೊಡಗಿರುವ ಬಲ್ಗೇನಿಯನ್ನರು ಇವರು. ಈ ಸಂದರ್ಭದಲ್ಲಿ ಚರ್ಚ್ ನ ಪಾದ್ರಿ ನದಿಯೊಳಗೆ ಶಿಲುಬೆ ಹಾಕುತ್ತಾರೆ. ಯಾರು ಅದನ್ನು ಹುಡುಕುತ್ತಾರೋ

ಮೀನುಗಾರರ ಜತೆಗೆ ಪುಟಿನ್ ಕ್ರಿಸ್ ಮಸ್

ಮೀನುಗಾರರ ಜತೆಗೆ ಪುಟಿನ್ ಕ್ರಿಸ್ ಮಸ್

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೀನುಗಾರರ ಜತೆಗೆ ಶನಿವಾರ ಕ್ರಿಸ್ ಮಸ್ ಆಚರಿಸಿದ್ದಾರೆ. ಸಂಪ್ರದಾಯವಾದಿ ಕ್ರಿಶ್ಚಿಯನ್ನರು ಜೂಲಿಯನ್ ಕ್ಯಾಲೆಂಡರ್ ಅನ್ವಯ ಜನವರಿ ಏಳಕ್ಕೆ ಕ್ರಿಸ್ ಮಸ್ ಅಚರಿತ್ತಾರಂತೆ. ಮಾಸ್ಕೋಗೆ 500 ಕಿ.ಮೀ. ವಾಯವ್ಯದಲ್ಲಿರುವ ಸೇಂಟ್ ಜಾರ್ಜ್ ಮೊನಾಸ್ಟರಿಯಲ್ಲಿ ಪುಟಿನ್ ಕ್ರಿಸ್ ಮಸ್ ಆಚರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various international photos with a major theme of Christmas, New Year- represnt through PTI photos.
Please Wait while comments are loading...