ಮಹಿಳಾ ಮೇಯರ್ ಎಳೆದಾಡಿ ತಲೆಗೂದಲು ಕತ್ತರಿಸಿದ ಪ್ರತಿಭಟನಾಕಾರರು

ವಿಂಟೋ, ನವೆಂಬರ್ 7: ಮಹಿಳಾ ಮೇಯರ್ ಒಬ್ಬರನ್ನು ಬರಿಗಾಲಿನಲ್ಲಿ ರಸ್ತೆಗೆ ಎಳೆದುಕೊಂಡು ಬಂದ ವಿರೋಧಪಕ್ಷದ ಪ್ರತಿಭಟನಾಕಾರರು ಅವರ ಮುಖಕ್ಕೆ ಕೆಂಪು ಬಣ್ಣ ಮೆತ್ತಿ ಬಲವಂತವಾಗಿ ತಲೆಗೂದಲು ಕತ್ತರಿಸಿದ ಘಟಕೆ ಬೊಲಿವಿಯಾದ ಸಣ್ಣ ಪಟ್ಟಣವೊಂದರಲ್ಲಿ ನಡೆದಿದೆ.

ಆಡಳಿತಾರೂಢ ಮಾಸ್ ಪಾರ್ಟಿಯ ವಿಂಟೋ ಪಟ್ಟಣದ ಮೇಯರ್ ಪ್ಯಾಟ್ರಿಕಾ ಆರ್ಸೆ ಅವರ ಮೇಲೆ ಈ ದಾಳಿ ನಡೆದಿದೆ.

ಅ.20ರಂದು ನಡೆದ ಅಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಬೊಲಿವಿಯಾದಲ್ಲಿ ಉಂಟಾಗಿರುವ ವಿವಾದವು ಮತ್ತಷ್ಟು ತೀವ್ರವಾಗಿದ್ದು, ಸರ್ಕಾರದ ಬೆಂಬಲಿಗರು ಮತ್ತು ವಿರೋಧಪಕ್ಷಗಳ ಬೆಂಬಲಿಗರ ನಡುವೆ ಸಂಘರ್ಷ ನಿರಂತರವಾಗಿ ನಡೆಯುತ್ತಿವೆ. ಹಿಂಸಾತ್ಮಕ ಚಟುವಟಿಕೆಗಳಲ್ಲಿ ಇದುವರೆಗೂ ಮೂವರು ಮೃತಪಟ್ಟಿದ್ದಾರೆ.

 Protesters In Bolivia Cuts Hair Of Vinto Woman Mayor

ಕೇಂದ್ರ ಬೊಲಿವಿಯಾದ ಕೊಚಬಂಬಾ ಪ್ರಾಂತ್ಯದಲ್ಲಿನ ಸಣ್ಣ ಪಟ್ಟಣವಾದ ವಿಂಟೋದಲ್ಲಿ ಸರ್ಕಾರ ವಿರೋಧಿ ಪ್ರತಿಭಟನಾಕಾರರು ಸೇತುವೆಯೊಂದನ್ನು ಬ್ಲಾಕ್ ಮಾಡಿದ್ದರು. ಸಮೀಪದಲ್ಲಿ ಬೊಲಿವಿಯಾ ಅಧ್ಯಕ್ಷ ಇವೊ ಮೊರೇಲ್ಸ್ ಅವರ ಬೆಂಬಲಿಗರೊಂದಿಗೆ ನಡೆದ ಘರ್ಷಣೆ ವೇಳೆ ವಿರೋಧಪಕ್ಷದ ಇಬ್ಬರು ಪ್ರತಿಭಟನಾಕಾರರನ್ನು ಕೊಲೆ ಮಾಡಲಾಗಿದೆ ಎಂಬ ವದಂತಿ ಹಬ್ಬಿತ್ತು. ಇದರ ವಿರುದ್ಧ ಪಟ್ಟಣದಲ್ಲಿ ಪ್ರತಿಭಟನೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+