Donald Trump: ಡೊನಾಲ್ಡ್ ಟ್ರಂಪ್ ಪ್ರಮಾಣ ವಚನದಲ್ಲಿ ಭಾಗವಹಿಸಿರುವ ಭಾರತೀಯರು
ಯುಎಸ್ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಸೋಮವಾರ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಕಾಲಮಾನ 10.30ಕ್ಕೆ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಎರಡನೇ ಬಾರಿ ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸೋಮವಾರ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಗತ್ತಿನ ಹಲವು ದೇಶಗಳ ಪ್ರಮುಖ ನಾಯಕರು, ಉದ್ಯಮಿಗಳಿಗೆ ಆಹ್ವಾನ ನೀಡಲಾಗಿದೆ.
ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರತದ ಹಲವು ಪ್ರಮುಖರಿಗೆ ಆಹ್ವಾನ ಸಿಕ್ಕಿದೆ. ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಜೈಶಂಕರ್ ಭಾಗವಹಿಸುತ್ತಿದ್ದರೆ, ಪ್ರಮುಖ ಉದ್ಯಮಿಗಳು ಕೂಡ ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಭಾರತೀಯರ ಪಟ್ಟಿ ಇಲ್ಲಿದೆ.

ಭಾರತದಿಂದ ಯಾರಿಗೆಲ್ಲಾ ಆಹ್ವಾನ?
ವಿದೇಶಾಂಗ ಸಚಿವ ಎಸ್. ಜೈಶಂಕರ್ ; ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾರತ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ. ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಅವರ ಪತ್ನಿ ಉಷಾ ಭಾರತೀಯ ಮೂಲದವರು ಎನ್ನುವುದು ವಿಶೇಷ.
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ: ರಿಲಯನ್ಸ್ ಸಮೂಹದ ಅಧ್ಯಕ್ಷ, ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಕೂಡ ಟ್ರಂಪ್ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಟ್ರಂಪ್ ಜೊತೆ ಅಂಬಾನಿ ದಂಪತಿಗಳು ಇರುವ ಫೋಟೊ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಲ್ಪೇಶ್ ಮೆಹ್ತಾ: ಟ್ರಂಪ್ ಯುಎಸ್ ಅಧ್ಯಕ್ಷರಾಗುವ ಮುನ್ನ ಅವರೊಬ್ಬ ಯಶಸ್ವಿ ಉದ್ಯಮಿ, ಹಲವು ಉದ್ಯಮಗಳನ್ನು ಅವರು ಹೊಂದಿದ್ದು, ಭಾರತದಲ್ಲಿ ಕೂಡ ಅವರು ಹೂಡಿಕೆ ಮಾಡಿದ್ದಾರೆ. ಭಾರತದಲ್ಲಿರುವ ಟ್ರಂಪ್ ಆರ್ಗನೈಸೇಶನ್‌ನ ಪರವಾನಗಿ ಪಡೆದಿರುವ ಟ್ರಿಬೆಕಾ ಡೆವಲಪರ್ಸ್‌ನ ಸಂಸ್ಥಾಪಕ ಕಲ್ಪೇಶ್ ಮೆಹ್ತಾ ಕೂಡ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪಂಕಜ್ ಬನ್ಸಾಲ್: ಗುರು ಗ್ರಾಮದಲ್ಲಿರುವ ಟ್ರಂಪ್ ಟವರ್ಸ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ರಿಯಲ್ ಎಸ್ಟೇಟ್ ಕಂಪನಿಯಾದ ಎಂ3ಎಂ ಡೆವಲಪರ್ಸ್‌ನ ಎಂಡಿ ಪಂಕಜ್ ಬನ್ಸಾಲ್ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕಾಗೆ ತೆರಳಿದ್ದಾರೆ.
ಆಶಿಶ್ ಜೈನ್: ಪುಣೆ ಮೂಲದ ರಿಯಲ್ ಎಸ್ಟೇಟ್ ಕಂಪನಿಯ ಕುಂದನ್‌ನ ಸ್ಪೇಸಸ್‌ನ ಎಂಡಿ ಆಶಿಶ್ ಜೈನ್‌ಗೆ ಕೂಡ ಆಹ್ವಾನ ಸಿಕ್ಕಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಸುಂದರ್ ಪಿಚೈ: ಗೂಗಲ್ ಮತ್ತು ಅದರ ಮಾತೃ ಸಂಸ್ಥೆಯಾದ ಆಲ್ಫಾಬೆಟ್‌ನ ಸಿಎಒ ಭಾರತೀಯ ಮೂಲದವಾರದ ಸುಂದರ್ ಪಿಚೈ ಈ ಸಮಾರಂಭದಲ್ಲಿ ಎಲೋನ್ ಮಸ್ಕ್ ಮತ್ತು ಜೆಸ್ ಬೆಜೋಸ್ ಅವರ ಜೊತೆ ಭಾಗವಹಿಸಲಿದ್ದಾರೆ.












Click it and Unblock the Notifications