India & Ukraine: ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಯಾವ ಕಾರಣಕ್ಕೆ?

ಉಕ್ರೇನ್ & ರಷ್ಯಾ ಯುದ್ಧ ಘೋರವಾಗುತ್ತಿದ್ದು, ಯಾವ ಕ್ಷಣದಲ್ಲಿ ಪರಿಸ್ಥಿತಿ ಏನಾಗುತ್ತೋ ಎಂಬ ವಾತಾವರಣ ನಿರ್ಮಾಣವಾಗಿದೆ. ಹಿಗಿದ್ದಾಗ ಪ್ರಧಾನಿ ಮೋದಿ ಅವರು ಮಹತ್ವದ ಚರ್ಚೆ ನಡೆಸಲು ಉಕ್ರೇನ್‌ಗೆ ಭೇಟಿ ನೀಡಲಿದ್ದು ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆಗೆ ಮಹತ್ವದ ಮಾತುಕತೆ ನಡೆಸಲು ಸಜ್ಜಾಗಿದ್ದಾರೆ. ಹಾಗಾದ್ರೆ ಭಾರತ ಈ ರೀತಿ ಮಾತುಕತೆ ನಡೆಸುವುದರಿಂದ ರಷ್ಯಾ & ಉಕ್ರೇನ್ ನಡುವಿನ ಯುದ್ಧ ನಿಲ್ಲುತ್ತಾ? ಬನ್ನಿ ತಿಳಿಯೋಣ.

ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಜಗತ್ತಿನಲ್ಲಿ ನೆಮ್ಮದಿಯೇ ಇಲ್ಲ. ಯಾಕಂದ್ರೆ ಈ ಎರಡೂ ದೇಶಗಳು ಕಿತ್ತಾಡಲು ಶುರು ಮಾಡಿದ ನಂತರ ಇಸ್ರೇಲ್ & ಗಾಜಾ ನಡುವೆಯೂ ಗಲಾಟೆ ಆರಂಭ ಆಗಿದೆ. ಮತ್ತೊಂದು ಕಡೆ ಇರಾನ್ & ಇಸ್ರೇಲ್ ನಡುವೆ ಕೂಡ ಯುದ್ಧವು ನಡೆಯುತ್ತೆ ಎಂಬ ಭಯ ಆವರಿಸಿದೆ. ಇಷ್ಟೆಲ್ಲಾ ಸಾಲದು ಎಂಬಂತೆ ಜಗತ್ತಿನ ಹಲವು ಭೂ ವಿವಾದಗಳು ಕೂಡ ದೊಡ್ಡದಾಗುತ್ತಿವೆ. ಪರಿಸ್ಥಿತಿ ಹೀಗೆ ನಿಧಾನವಾಗಿ ಕೈಮೀರಿ ಹೋಗುತ್ತಿದೆ. ಇಂತಹ ಸಮಯದಲ್ಲೇ, ಭಾರತ ಕೂಡ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಮಹತ್ವದ ಹೆಜ್ಜೆ ಇಟ್ಟಂತೆ ಕಾಣುತ್ತಿದೆ.

Prime Minister Narendra Modi Will Visit To Ukraine On This Date

ಪ್ರಧಾನಿ ಮೋದಿ & ಉಕ್ರೇನ್ ಅಧ್ಯಕ್ಷರ ಚರ್ಚೆ

ಭಾರತ ಜಗತ್ತಿನ ಪ್ರತಿಯೊಂದು ದೇಶದ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದು, ಇದೇ ಕಾರಣಕ್ಕೆ ಭಾರತದ ಜೊತೆಗೆ ಬಹುತೇಕ ಎಲ್ಲಾ ದೇಶಗಳು ವ್ಯಾಪಾರ & ವಹಿವಾಟು ನಡೆಸುತ್ತಿವೆ. ಆದರೆ ಈ ವಿಚಾರದಲ್ಲಿ ಉಕ್ರೇನ್ ಮಾತ್ರ, ರಷ್ಯಾ ವಿಷಯ ಪ್ರಸ್ತಾಪಿಸಿ ಕಿರಿಕ್ ಮಾಡುತ್ತಿತ್ತು. ಆದರೆ ಇದೀಗ ಎಲ್ಲಾ ಸಮಸ್ಯೆಗಳಿಗೆ ಒಂದು ಅಂತ್ಯ ಹಾಡುವ ಸಮಯ ಕೂಡ ಬಂದಾಗಿದೆ. ಆಗಸ್ಟ್ 23 ರಂದು ಪ್ರಧಾನಿ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಹಲವು ವಿಚಾರಗಳನ್ನೂ ಚರ್ಚೆ ಮಾಡಲಿದ್ದಾರೆ. ಅದೇ ಸಮಯದಲ್ಲಿ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆಗೆ, ಯುದ್ಧವನ್ನು ನಿಲ್ಲಿಸುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಭಾರಿ ಕುತೂಹಲ ಕೆರಳಿಸಿದ ಭೇಟಿ!

ಅಲ್ಲದೆ ಇದರ ಜೊತೆಯಲ್ಲಿ ಭಾರತ & ಉಕ್ರೇನ್ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆಯೂ ಪ್ರಸ್ತಾಪ ಆಗಬಹುದು ಎಂಬ ನಿರೀಕ್ಷೆ ಇದೆ. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡ ವೇಳೆ, ಉಕ್ರೇನ್ ಅಧ್ಯಕ್ಷರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಉಕ್ರೇನ್‌ಗೆ ಖುದ್ದು ಭಾರತದ ಪ್ರಧಾನಿ ಮೋದಿ ಅವರು ವಿಸಿಟ್ ಕೊಡುತ್ತಿರುವುದು ಭರ್ಜರಿ ಕುತೂಹಲ ಕೆರಳಿಸಿದೆ. ಹೀಗಾಗಿ ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+