ಅಮೆರಿಕದ ನೆಲಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ: ಶತ್ರುಗಳಿಗೆ ಶುರುವಾಯ್ತು ನಡುಕ!
ಭಾರತ & ಅಮೆರಿಕದ ನಡುವೆ ನೂರಾರು ವರ್ಷಗಳಿಂದ ಕೂಡ ಅತ್ಯುತ್ತಮ ಸಂಬಂಧ ಇದೆ. ಅದರಲ್ಲೂ ಭಾರತಕ್ಕೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನ ಕಳೆದ ನಂತರ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ, ಹೀಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅಧಿಕಾರ ಹಿಡಿದ ನಂತರ ಸ್ನೇಹ ಇನ್ನಷ್ಟು ಹೆಚ್ಚಾಗಿದ್ದು. ಇದೀಗ ದಿಢೀರ್ ಪ್ರಧಾನಿ ಮೋದಿ ಅವರು ಅಮೆರಿಕದ ನೆಲಕ್ಕೆ ಎಂಟ್ರಿ ಕೊಡಲಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಅಮೆರಿಕ ಭೇಟಿಯ ಹಿಂದಿನ ಉದ್ದೇಶ ಏನು? ಈ ಬೆಳವಣಿಗೆ ಭಾರತದ ಶತ್ರುಗಳಿಗೆ ಹೇಗೆ ನಡುಕ ತರಿಸಿದೆ?
'ಕ್ವಾಡ್' ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಏಷ್ಯಾ ಭಾಗದಲ್ಲಿ ಅಮೆರಿಕದ ನೇತೃತ್ವದಲ್ಲಿ ಹೊಸ ಒಕ್ಕೂಟ ರಚನೆ ಮಾಡಲಾಗಿತ್ತು, ಇದಕ್ಕೆ 'ಕ್ವಾಡ್' ಎಂದು ಹೆಸರು ಇಡಲಾಗಿದೆ. ಈ ಮೂಲಕ ಕೆಲ ವರ್ಷಗಳಿಂದಲೂ 'ಕ್ವಾಡ್' ದೇಶಗಳು ಏಷ್ಯಾ ಭಾಗದಲ್ಲಿ ಸಾಕಷ್ಟು ಸದ್ದು ಮಾಡ್ತಿವೆ. ಈ ಒಕ್ಕೂಟದ ಮಹತ್ವದ ಶೃಂಗಸಭೆ ಇದೀಗ ಅಮೆರಿಕದಲ್ಲಿ ನಡೆಯಲಿದೆ. ಇದೇ ಕಾರಣಕ್ಕೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 21 ರಿಂದ 23 ರವರೆಗೆ ಅಮೆರಿಕಗೆ ಭೇಟಿ ನೀಡಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಸೆಪ್ಟೆಂಬರ್ 21 ರಂದು ಅಮೆರಿಕ ಅಧ್ಯಕ್ಷ ಬೈಡನ್‌ರ ನಿವಾಸದಲ್ಲಿ ನಡೆಯುವ 'ಕ್ವಾಡ್' ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುವರು. ಈ ಕುರಿತು ಇದೀಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿಯನ್ನ ನೀಡಿದೆ.

'ಕ್ವಾಡ್' ಸಭೆಯಲ್ಲಿ ಯಾರೆಲ್ಲಾ ಭಾಗಿ?
ಜೋ ಬೈಡನ್ ಆಯೋಜನೆ ಮಾಡಿರುವ 'ಕ್ವಾಡ್' ರಾಷ್ಟ್ರಗಳ ಶೃಂಗಸಭೆಗೆ ಭಾರತ ಸೇರಿದಂತೆ, ಆಸ್ಟ್ರೇಲಿಯಾ, ಜಪಾನ್‌ನ ಪ್ರಧಾನ ಮಂತ್ರಿಗಳು ಭಾಗವಹಿಸುವರು. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಈ ಸಭೆಗೆ ಹಾಜರ್ ಆಗಲಿದ್ದಾರೆ. ಹಾಗೇ ಭಾರತದ ಪರ ಖುದ್ದಾಗಿ, ಪ‍್ರಧಾನಿ ನರೇಂದ್ರ ಮೋದಿ ಅವರೇ ಮುಂದಿನ ವಾರ ಅಮೆರಿಕಗೆ ತೆರಳಿ ಶೃಂಗಸಭೆಯಲ್ಲಿ ಭಾಗವಹಿಸುವರು ಎಂದು ಇದೀಗ ಮಾಹಿತಿ ಸಿಕ್ಕಿದೆ. 'ಕ್ವಾಡ್' ಒಕ್ಕೂಟದ ಶೃಂಗಸಭೆ ನಡೆಸಲು ಅಮೆರಿಕ ಇದೀಗ ಸಕಲ ಸಿದ್ಧತೆ ಆರಂಭ ಮಾಡಿದೆ.
ಅಧ್ಯಕ್ಷೀಯ ಚುನಾವಣೆ ಮಧ್ಯೆ ಸಭೆ
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ನವೆಂಬರ್ 5ಕ್ಕೆ ಮತದಾನ ಕೂಡ ಮುಗಿಯಲಿದೆ. ಹೀಗಿದ್ದಾಗ, ಚೀನಾಗೆ ಬಿಸಿ ಮುಟ್ಟಿಸಿ, ಭಾರತ ಸೇರಿದಂತೆ ಏಷ್ಯಾ ಸುತ್ತಲೂ ಇರುವ ದೇಶಗಳನ್ನ ಒಗ್ಗೂಡಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮುಂದೆ ಬಂದಿರುವಂತೆ ಕಾಣುತ್ತಿದೆ. ಅದರಲ್ಲೂ ಚೀನಾ ಜೊತೆಗೆ ಗಡಿ ಹಂಚಿಕೊಂಡಿರುವ ಭಾರತದ ಜೊತೆ ಇದರ ಬಗ್ಗೆ ಗಾಢವಾದ ಚರ್ಚೆ ನಡೆಸಬೇಕಿದೆ ಅಮೆರಿಕ. ಹೀಗಾಗಿಯೇ ಇದೀಗ ಮಹತ್ವದ ಶೃಂಗಸಭೆ ನಡೆಸಲು ಮುಂದಾಗಿದೆ ಅಮೆರಿಕ ಎಂಬ ಮಾತುಗಳು ಕೇಳಿಬಂದಿವೆ.












Click it and Unblock the Notifications