ಶುಕ್ರವಾರ ಬೆಳಗ್ಗೆ ಚೀನಾದಲ್ಲಿ ಭಾರಿ ಭೂಕಂಪ
ಬೀಜಿಂಗ್, ಜೂನ್ 26: ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಶುಕ್ರವಾರ ಬೆಳಗ್ಗೆ ಭಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪದ ತೀವ್ರತೆ ರಿಕ್ಚರ್ ಮಾಪಕದಲ್ಲಿ 6.4ರಷ್ಟಿದೆ ಎಂದು ಚೀನಾದ ಭೂಕಂಪ ಜಾಲ ಕೇಂದ್ರ(ಸಿಇಎನ್ ಸಿ) ವರದಿ ಮಾಡಿದೆ. ಬೀಜಿಂಗ್ ಸಮಯ ಬೆಳಗ್ಗೆ 5.05ಕ್ಕೆ ಸಂಭವಿಸಿದೆ.ಕ್ಸಿನ್ ಜಿಯಾಂಗ್ ನಿಂದ ನೈಋತ್ಯ ಹೋಟನ್ ಪ್ರಾಂತ್ಯದಿಂದ 279 ಕಿ. ಮೀ ದೂರದಲ್ಲಿ ಕಂಪನದ ಅನುಭವವಾಗಿದೆ.

ಭೂಕಂಪದ ಕೇಂದ್ರ ಬಿಂದು ಕ್ಸಿನ್ ಜಿಯಾಂಗ್ ಪ್ರಾಂತ್ಯದ ಯಿಗೂರ್ ಪ್ರಾಂತ್ಯ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಯಾವುದೇ ಸಾವು, ನೋವು ಸಂಭವಿಸಿದ ವರದಿಗಳು ಬಂದಿಲ್ಲ.
Prelim M6.4 Earthquake Xinjiang-Xizang border region Jun-25 21:05 UTC, updates https://t.co/jFgK3WSVrJ
— USGSted (@USGSted) June 25, 2020
ಕೇಂದ್ರ ಬಿಂದುವಿನಿಂದ 20 ಕಿ. ಮೀ ವ್ಯಾಪ್ತಿಯಲ್ಲಿ ಯಾವುದೇ ಹಳ್ಳಿಗಳಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications