Ukraine War: ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕಲು ಎಂಟ್ರಿ ಕೊಡುತ್ತಾ ಚೀನಾ?
ಎಷ್ಟು ದಿನ ಅಂತಾ ಗಲಾಟೆ ಮಾಡ್ತಾರೆ? ರಷ್ಯಾ & ಉಕ್ರೇನ್ ಯುದ್ಧ 3-4 ತಿಂಗಳಲ್ಲಿ ಮುಗಿದು ಹೋಗುತ್ತೆ ನೋಡಿ... ಹೀಗಂತಾ ಹೇಳಿದ್ದವರೇ ಹೆಚ್ಚು, ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ 3 ವರ್ಷ ಮುಗಿಸಿ ಇದೀಗ 4ನೇ ವರ್ಷವನ್ನೂ ಪೂರೈಸಲು ಸಜ್ಜಾಗಿದೆ. ಇಷ್ಟಾದರು ರಷ್ಯಾ & ಉಕ್ರೇನ್ ಯುದ್ಧಕ್ಕೆ ಮಾತ್ರ ಇನ್ನೂ ಬ್ರೇಕ್ ಬಿದ್ದೇ ಇಲ್ಲ. ಇಂತಹ ಸಮಯದಲ್ಲೇ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಪರವಾಗಿ ನಿಂತು ಬಾಯಿ ಬಡಿದುಕೊಳ್ಳುತ್ತಾ ಇವೆ, ಆದರೆ ಉಕ್ರೇನ್ ಅಧ್ಯಕ್ಷನ ದಡ್ಡತನ ಯುದ್ಧ ನಿಲ್ಲಿಸಲು ಅಡ್ಡಿಯಾಗಿದೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಸುದ್ದಿ ಸಂಚಲನಕ್ಕೆ ಕಾರಣವಾಗಿದೆ.
ಹೌದು, ರಷ್ಯಾ & ಉಕ್ರೇನ್ ಬಡಿದಾಟದಲ್ಲಿ ಉಕ್ರೇನ್ ಸುಮ್ಮನೆ ಎಗರಾಡುತ್ತಿದೆ.. ರಷ್ಯಾ ವಿರುದ್ಧ ಗೆಲ್ಲಲು ಆಗಲ್ಲ ಅಂತಾ ಗೊತ್ತಿದ್ದರೂ ಹೀಗೆ ಉಕ್ರೇನ್ ಕಿರಿಕ್ ಮುಂದುವರಿಸಿದೆ ಅಂತಾ ಆರೋಪ ಮಾಡಲಾಗ್ತಿದೆ. ಯಾಕಂದ್ರೆ ಈ ಮಾತು ನಿಜ ಕೂಡ, ರಷ್ಯಾ ಸೇನೆಯ ಎದುರು ಉಕ್ರೇನ್ ಮಿಲಿಟರಿ ಹೋಲಿಕೆ ಮಾಡಲು ಕೂಡ ಅಸಾಧ್ಯ. ಇಷ್ಟಾದರೂ ರಷ್ಯಾ ಎದುರು ಸುಮ್ಮನೆ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲಿಸುವ ಬದಲು ಜಗಳಕ್ಕೆ ನಿಂತಿದೆ ಉಕ್ರೇನ್ ಎಂಬ ಆರೋಪ ಇದೆ. ಹೀಗಿದ್ದಾಗ ಪಾಶ್ಚಿಮಾತ್ಯ ದೇಶಗಳು ಈಗ ಒಗ್ಗಟ್ಟಿನಿಂದ ಉಕ್ರೇನ್ ಬೆನ್ನಿಗೆ ನಿಂತು ಚೀನಾ ಮೇಲೆ ಒತ್ತಡ ಹಾಕಲು ಮುಂದಾಗಿವೆ.

ಚೀನಾ ಅಧ್ಯಕ್ಷರಿಂದ ಯುದ್ಧಕ್ಕೆ ಬ್ರೇಕ್?
ರಷ್ಯಾ ಅಧ್ಯಕ್ಷ ಪುಟಿನ್ ಅವರು ಕೆಲವು ದಿನಗಳ ಹಿಂದಷ್ಟೇ ಚೀನಾ ಪ್ರವಾಸ ಕೈಗೊಂಡಿದ್ದರು, ಚೀನಾ ಅಧ್ಯಕ್ಷರ ಜೊತೆ ಮಾತುಕತೆ ಕೂಡ ನಡೆಸಿದ್ದರು. ಅದರಲ್ಲೂ ಅಮೆರಿಕ ಮಾಡುತ್ತಿರುವ ಕಿರಿಕ್ ತಪ್ಪಿಸಲು ಏಷ್ಯಾದಿಂದ ಬಲಿಷ್ಠ ದೇಶಗಳು ಚೀನಾದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದವು. ಈ ಘಟನೆ ಬೆನ್ನಲ್ಲೇ ಯುರೋಪ್ ಒಕ್ಕೂಟದ ಪ್ರಬಲ ದೇಶದ ಅಧ್ಯಕ್ಷರೊಬ್ಬರು, ಚೀನಾದ ಮೇಲೆ ಒತ್ತಡ ಹೇರುವ ಕೆಲಸ ಮಾಡಿದ್ದಾರೆ.
ಅಂದಹಾಗೆ ಪೋರ್ಚುಗಲ್ ಪ್ರಧಾನಿ ಲೂಯಿಸ್ ಮಾಂಟೆನೆಗ್ರೊ ಇದೀಗ ಚೀನಾ ಅಧ್ಯಕ್ಷರ ಮೇಲೆ ಒತ್ತಡ ಹೇರಿದ್ದು, ನಿಮ್ಮ & ರಷ್ಯಾ ನಡುವಿನ ಉತ್ತಮ ಸಂಬಂಧ ಬಳಸಿಕೊಂಡು ಶಾಂತಿ ಕಾಪಾಡಿ ಅಂತಾ ಒತ್ತಾಯ ಮಾಡಿದ್ದಾರೆ. ಆದರೆ ಈ ಬಗ್ಗೆ ಚೀನಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ, ರಷ್ಯಾ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಚೀನಾ ಈ ವಿಚಾರದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತೆ? ಎಂಬ ಕುತೂಹಲ ಈಗ ಡಬಲ್ ಆಗಿದೆ.












Click it and Unblock the Notifications