ನೀಲಿ ಆಗಸದಾಚೆ ವಯಸ್ಕರ ಚಿತ್ರ ಶೂಟಿಂಗ್!
ಮಾಂಟ್ರಿಯಲ್, ಜೂ.12: ನೀಲಿ ಆಗಸದಾಚೆ ಬಾಹ್ಯಾಕಾಶದಲ್ಲಿ ವಯಸ್ಕರ ಚಿತ್ರವೊಂದರ ಶೂಟಿಂಗ್ ಯೋಜನೆ ಬಗ್ಗೆ ;ಪೋರ್ನ್ ಹಬ್ ;ವಿವರ ನೀಡಿದೆ. 2016ರ ವೇಳೆಗೆ ಯೋಜನೆ ಜಾರಿ ಬರಲಿದ್ದು, ಬಾಹ್ಯಾಕಾಶದಲಿ ಮೊದಲ 'ಸೆಕ್ಸ್ ಟೇಪ್' ತಯಾರಿಗೆ ಸಕಲ ಸಿದ್ಧತೆ ಪೂರ್ಣಗೊಳ್ಳುತ್ತಿದೆ ಎಂದು ಕೆನಡಾ ಮೂಲದ ವೆಬ್ ಸೈಟ್ ನ ವಕ್ತಾರರು ಹೇಳಿದ್ದಾರೆ. ಎಸ್ ಎಲ್ ಭೈರಪ್ಪ ಅವರ 'ಯಾನ' ಕಾದಂಬರಿಯ ದೃಶ್ಯಗಳು ನೆನಪಿಗೆ ಬಂದರೆ ನಿಮ್ಮ ತಪ್ಪಲ್ಲ ಬಿಡಿ.
ಜನರಿಂದ, ಜನರಿಗಾಗಿ ಎಂಬ ಆಶಯದೊಂದಿಗೆ ಈ ಯೋಜನೆ ರೂಪಿಸಿರುವುದಾಗಿ ಪೋರ್ನ್ ಹಬ್ ವೆಬ್ ಸೈಟ್ ಹೇಳಿಕೊಂಡಿದೆ. ಗುರುವಾರ ಈ ಬಗ್ಗೆ ಅಭಿಯಾನ ಆರಂಭಿಸಿದ್ದು, 'ಸೆಕ್ಸ್ ಪ್ಲೋರೇಷನ್' ಎಂಬ ಹೆಸರಿನಲ್ಲಿ ಸುಮಾರು 3.4 ಮಿಲಿಯನ್ ಡಾಲರ್ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಮೊದಲ ದಿನವೇ 10,000 ಡಾಲರ್ ದೇಣಿಗೆ ಸಿಕ್ಕಿದೆ.

ಭೂಮಿಯಿಂದ ಮೇಲ್ಮೈನಿಂದ ಆಚೆ ಗುರುತ್ವಾಕರ್ಷಣೆ ಇಲ್ಲದ ಪ್ರದೇಶದಲ್ಲೂ ಸಂತೃಪ್ತ ಲೈಂಗಿಕ ಕ್ರಿಯೆ ಸಾಧ್ಯ ಎಂಬುದನ್ನು ನಿರೂಪಿಸಲು ಈ ಯೋಜನೆ ಹಮ್ಮಿಕೊಂಡಿರುವುದಾಗಿ ಪೋರ್ನ್ ಹಬ್ ಹೇಳಿದೆ. 'ಸೆಕ್ಸ್ ಪ್ಲೋರೇಷನ್' ಅಭಿಯಾನ ಇನ್ನೂ 30 ದಿನಗಳ ಕಾಲ ನಡೆಯಲಿದ್ದು, ಹೆಚ್ಚೆಚ್ಚು ಹಣ ಸಂಗ್ರಹಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಪೋರ್ನ್ ನಟಿ ಇವಾ ಲೋವಿಯ ಮತ್ತು ಜಾನಿ ಸಿನ್ಸ್ ವಯಸ್ಕರ ಚಿತ್ರದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಬಾಹ್ಯಾಕಾಶದಲ್ಲಿ ಚಿತ್ರೀಕರಣವಾಗಲಿರುವುದರಿಂದ ಇವಾ ಲೋವಿಯ ಮತ್ತು ಜಾನಿ ಸಿನ್ಸ್ ಗೆ 6 ತಿಂಗಳ ಕಾಲ ಕಠಿಣ ತರಬೇತಿ ನೀಡಲಾಗುತ್ತದೆ. ಹಣಕಾಸು ಹೊಂದಿಕೆಯಾದ ಮೇಲೆ ಇಬ್ಬರು ಗಗನಯಾನಿಗಳಾಗಿ ಆಕಾಶದಾಚೆ ಮಾಯಾಲೋಕದಲ್ಲಿ ವಿಹರಿಸಲಿದ್ದಾರೆ ಎಂದು ವೆಬ್ ಸೈಟ್ ಹೇಳಿದೆ.












Click it and Unblock the Notifications