Donald Trump: ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ದ್ವೇಷಕ್ಕೆ ಅವಕಾಶವಿಲ್ಲ ಎಂದು ನಂಬಿದ್ದೇನೆ; ಪೋಪ್ ಫ್ರಾನ್ಸಿಸ್
ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ಕೆಲವು ಕ್ಷಣಗಳು ಬಾಕಿ ಇವೆ. ಎರಡನೇ ಬಾರಿ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇಡೀ ಜಗತ್ತು ಇದೀಗ ಅಮೆರಿಕದ ಕಡೆ ನೋಡುತ್ತಿದೆ. ಅಮೆರಿಕ ತೆಗೆದುಕೊಳ್ಳುವ ನಿರ್ಣಯಗಳು ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ಪರಿಣಾಮ ಬೀರುವುದರಿಂದ ಎಲ್ಲರ ಚಿತ್ತ ಈಗ ಅಮೆರಿಕದತ್ತ ನೆಟ್ಟಿದೆ.
ಟ್ರಂಪ್ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಪೋಪ್ ಫ್ರಾನ್ಸಿಸ್ ಕಿವಿ ಮಾತು ಹೇಳಿದ್ದಾರೆ. ದ್ವೇಷಕ್ಕೆ ಅವಕಾಶವಿಲ್ಲದ ಸಮಾಜವನ್ನು ಮುನ್ನಡೆಸುವಂತೆ ಮತ್ತು ಜನರಲ್ಲಿ ಶಾಂತಿ ಮತ್ತು ಸಾಮರಸ್ಯ ಉತ್ತೇಜಿಸುವಂತೆ ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ.

88 ವರ್ಷ ಪೋಪ್ ಫ್ರಾನ್ಸಿಸ್ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಶುಭಾಶಯ ಕೋರಿದರು. "ನಿಮಗೆ ಸೌಹಾರ್ದಯುತ ಶುಭಾಶಯಗಳು, ಸರ್ವಶಕ್ತನಾದ ದೇವರು ನಿಮಗೆ ಬುದ್ಧಿವಂತಿಕೆ, ಶಕ್ತಿ ಮತ್ತು ರಕ್ಷಣೆಯನ್ನು ನೀಡಲು ಎಂದು ಪ್ರಾರ್ಥಿಸುತ್ತೇನೆ" ಎಂದರು.
"ನಿಮ್ಮ ನಾಯಕತ್ವದಲ್ಲಿ ಅಮೆರಿಕದ ಜನತೆ ಅಭಿವೃದ್ಧಿ ಹೊಂದುತ್ತಾರೆ. ದ್ವೇಶ, ತಾರತಮ್ಯ ಅಥವಾ ಅಸ್ಪೃಶ್ಯತೆಗೆ ಅವಕಾಶವಿಲ್ಲದ ನ್ಯಾಯಯುತ ಸಮಾಜವನ್ನು ನಿರ್ಮಿಸಲು ಯಾವಾಗಲೂ ಶ್ರಮಿಸುತ್ತಾರೆ ಎನ್ನುವುದು ನನ್ನ ಆಶಯ" ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಜಗತ್ತು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಯುದ್ಧದ ಭೀತಿಯನ್ನು ಹೆಚ್ಚಿಸದೆ, ಜನರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಆ ದೇವರು ನಿಮಗೆ ಮಾರ್ಗದರ್ಶನ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ವಲಸಿಗರ ಗಡೀಪಾರಿಗೆ ಪೋಪ್ ವಿರೋಧ
ದಾಖಲೆ ಇಲ್ಲದೆ ಅಕ್ರಮವಾಗಿ ವಲಸೆ ಬಂದಿರುವವರನ್ನು ಗಡೀಪಾರು ಮಾಡುತ್ತೇನೆ ಎಂದು ಹೇಳಿರುವ ಟ್ರಂಪ್ ಅವರ ಯೋಜನೆಯನ್ನು ಫ್ರಾನ್ಸಿನ್ ಖಂಡಿಸಿದ್ದರು. ಟ್ರಂಪ್ ಅವರ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ವಲಸಿಗರನ್ನು ಗಡೀಪಾರು ಮಾಡುವುದಾದರೆ ಅದು ದೊಡ್ಡ ವಿಪತ್ತಿಗೆ ಕಾರಣವಾಗಬಹುದು. ಗಡೀಪಾರು ಮಾಡಿದರೆ ಏನೂ ಇಲ್ಲದ ನಿರ್ಗತಿಕರಿಗೆ ಹೆಚ್ಚಿನ ಸಮಸ್ಯೆಯಾಗುತ್ತದೆ ಎಂದು ಅರ್ಜೆಂಟೀನಾದ ಜೆಸ್ಯೂಟ್ ಇಟಾಲಿಯನ್ ಟೆಲಿವಿಷನ್ ಚಾನೆಲ್ ನೋವ್‌ಗೆ ತಿಳಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಮೆರಿಕ ಇತಿಹಾಸದಲ್ಲೇ ಅತಿ ದೊಡ್ಡ ಗಡೀಪಾರು ಕಾರ್ಯಾಚರಣೆ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದರು. ಆದರೆ ಇದಕ್ಕೆ ಕಾನೂನು ಅಡ್ಡಿಪಡಿಸುವ ಸಾಧ್ಯತೆ, ಟ್ರಂಪ್ ಗಡೀಪಾರು ಮಾಡಲು ಉದ್ದೇಶಿಸಿದರು, ಅವರನ್ನು ಮೂಲ ದೇಶಗಳು ಸ್ವೀಕರಿಸುವ ಸಾಧ್ಯತೆ ಕಡಿಮೆ ಇದೆ.
2016ರಲ್ಲಿ ಟ್ರಂಪ್‌ರ ವಲಸೆ ವಿರೋಧಿ ನೀತಿಯನ್ನು ಫ್ರಾನ್ಸಿಸ್ ಟೀಕಿಸಿದ್ದರು. ಯಾರೇ ಆಗಿದ್ದರೂ ಗೋಡೆಗಳನ್ನು ಮಾತ್ರ ನಿರ್ಮಿಸಲು ಬಯಸುವವರು ಕ್ರಿಶ್ಚಿಯನ್ ಆಗಲು ಸಾಧ್ಯವಿಲ್ಲ, ಸೇತುವೆಗಳನ್ನು ನಿರ್ಮಿಸುವವರು ಕ್ರಿಶ್ಚಿಯನ್ ಎಂದಿದ್ದರು.












Click it and Unblock the Notifications