ಲಂಡನ್ ದಾಳಿಗೆ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಖಂಡನೆ
ಲಂಡನ್, ಜೂನ್ 4: ಲಂಡನ್ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನರೇಂದ್ರ ಮೋದಿ, "ನಾವು ಘಟನೆಯನ್ನು ಖಂಡಿಸುತ್ತೇವೆ.
ನನ್ನ ಆಲೋಚನೆಗಳು ಸಾವಿಗೀಡಾದವರ ಕುಟುಂಬಗಳೊಂದಿಗೆ ಇವೆ , ಗಾಯಗೊಂಡವರು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಟ್ವೀಟ್ ಮಾಡಿದ್ದಾರೆ.[ಲಂಡನ್ನಿನ ಉಗ್ರರ ದಾಳಿಗೂ ಬೆಂಗಳೂರಿಗೂ ನಂಟಿದೆ!]
Attacks in London are shocking & anguishing. We condemn them. My thoughts are with families of the deceased & prayers with the injured.
— Narendra Modi (@narendramodi) June 4, 2017
ಇದೇ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಟ್ವೀಟ್ ಮಾಡಿದ್ದು, "ನಾವು ಮತ್ತಷ್ಟು ಸ್ಮಾರ್ಟ್, ಜಾಗರೂಕರು ಮತ್ತು ಕಠಿಣವಾಗಬೇಕಾಗಿದೆ.ನಮ್ಮ ಹಕ್ಕುಗಳನ್ನು ಮರಳಿ ನಮಗೆ ನೀಡಲು ನ್ಯಾಯಾಲಯಗಳು ಬೇಕಾಗಿವೆ. ಹೆಚ್ಚಿನ ಭದ್ರತೆಗಾಗಿ ಪ್ರಯಾಣ ನಿಷೇಧ ಬೇಕಾಗಿದೆ," ಎಂದು ಪ್ರತಿಪಾದಿಸಿದ್ದಾರೆ.[ಲಂಡನ್ ದಾಳಿ ಬೆನ್ನಲ್ಲೇ ಇತ್ತ ಜಿಹಾದಿ ಗುಂಪುಗಳು ಸಂಭ್ರಮಾಚರಣೆ]
Whatever the United States can do to help out in London and the U. K., we will be there - WE ARE WITH YOU. GOD BLESS!
— Donald J. Trump (@realDonaldTrump) June 3, 2017
ಇನ್ನು, "ಲಂಡನ್ ಮತ್ತು ಬ್ರಿಟನಿಗೆ ಅಮೆರಿಕಾ ಸಾಧ್ಯವಾದಷ್ಟು ಸಹಾಯ ಮಾಡಲಿದೆ. ನಾವು ಜತೆಗಿದ್ದೇವೆ. ದೇವರು ಒಳ್ಳೆದು ಮಾಡಲಿ," ಎಂದು ಮತ್ತೊಂದು ಟ್ವೀಟ್ ನಲ್ಲಿ ಟ್ರಂಪ್ ಹಾರೈಸಿದ್ದಾರೆ.












Click it and Unblock the Notifications