ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

G20 Summit: ರೋಮ್‌ಗೆ ಬಂದಿಳಿದ ಪ್ರಧಾನಿ ಮೋದಿ

|
Google Oneindia Kannada News

ರೋಮ್‌ನಲ್ಲಿ ನಡೆಯಲಿರುವ 16ನೇ G20 ರಾಷ್ಟ್ರನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರೋಮ್‌ಗೆ ಬಂದಿಳಿದಿದ್ದಾರೆ.

ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ ಮೇರೆಗೆ ರೋಮ್‌ನಲ್ಲಿ ನಡೆಯಲಿರುವ 16ನೇ ಜಿ20 ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅವರು ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಗೂ ಭೇಟಿ, ಪೋಪ್‌ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲಿದ್ದಾರೆ.

ರೋಮ್‌ನಲ್ಲಿ ನಡೆಯಲಿರುವ 16ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯಿಂದ ಜಾಗತಿಕ ಆರ್ಥಿಕ ಮತ್ತು ಆರೋಗ್ಯ ಚೇತರಿಕೆ ಬಗ್ಗೆ ಚರ್ಚೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.

PM Modi Arrives In Rome To Participate In G20 Summit

ನವೆಂಬರ್ 1-2 ರವರೆಗೆ ಮೋದಿ ಬ್ರಿಟನ್‌ನ ಗ್ಲಾಸ್ಗೋಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಈ ವೇಳೆ ಅವರು ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ.

ಜಿ20 ಶೃಂಗಸಭೆಗಾಗಿ ಇಟಲಿಗೆ ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್​ 31ರವರೆಗೆ ಅಲ್ಲಿಯೇ ಇರಲಿದ್ದಾರೆ. ಈ ವೇಳೆ ವ್ಯಾಟಿಕನ್​ ನಗರಕ್ಕೂ ಭೇಟಿ ನೀಡುವರು. ನಂತರ ಅಲ್ಲಿಂದ ಯುಕೆ (ಇಂಗ್ಲೆಂಡ್​)ಗೆ ತೆರಳುವರು. ಇನ್ನು ರೋಮ್​​ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅವರು, ಕೊರೊನಾ ಸಾಂಕ್ರಾಮಿಕದಿಂದ ಆರೋಗ್ಯ ಚೇತರಿಕೆ ಮತ್ತು ಜಾಗತಿಕ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಬಗ್ಗೆ ಮಾತನಾಡಲಿದ್ದಾರೆ. ನಂತರ ಯುಕೆಯ ಗ್ಲಾಸ್ಗೋದಲ್ಲಿ, ಹವಾಮಾನ ವೈಪರಿತ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯತೆಯ ಬಗ್ಗೆ ಸಮಗ್ರವಾಗಿ ಮಾತನಾಡಲಿದ್ದಾರೆ.

ಕಳೆದ 12 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ರೋಮ್​​ಗೆ ಭೇಟಿ ನೀಡುತ್ತಿರುವುದು ವಿಶೇಷವೂ ಹೌದು. ನರೇಂದ್ರ ಮೋದಿಯವರು ರೋಮ್​​ಗೆ ಭೇಟಿ ನೀಡುವ ಬಗ್ಗೆ ಇಟಲಿಯಲ್ಲಿರುವ ಭಾರತದ ರಾಯಭಾರಿ ನೀನಾ ಮಲ್ಹೋತ್ರಾ ಕೂಡ ಖಚಿತ ಪಡಿಸಿದ್ದರು. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ರೋಮ್​ಗೆ ಭೇಟಿಕೊಡುತ್ತಿದ್ದಾರೆ ಎಂದೂ ತಿಳಿಸಿದ್ದರು.

ಸಂಜೆ 5.30ಕ್ಕೆ ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಟಾಲಿಯನ್ ಅಧ್ಯಕ್ಷತೆಯಲ್ಲಿನ ಪ್ರಮುಖ ಆದ್ಯತೆಗಳು COVID ಬಿಕ್ಕಟ್ಟನ್ನು ಎದುರಿಸುವುದು, ಅದರ ಆರ್ಥಿಕ ಪರಿಣಾಮ.

ಗಮನಾರ್ಹವಾಗಿ, ಶೃಂಗಸಭೆಯ ಕೊನೆಯ ಆವೃತ್ತಿಯು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸೌದಿ ಪ್ರೆಸಿಡೆನ್ಸಿಯ ಅಡಿಯಲ್ಲಿ ನಡೆಯಿತು. ಶೃಂಗಸಭೆಯು ರಚನೆಯಾದ ನಂತರ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ನಡೆದದ್ದು ಇದೇ ಮೊದಲು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಜಪಾನ್‌ನ ಪಿಎಂ ಫುಮಿಯೊ ಕಿಶಿಡಾ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಸೇರಿದಂತೆ ಹಲವು ನಾಯಕರು ಈ ಶೃಂಗಸಭೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ.

ಜಪಾನಿನ ಪಿಎಂ ಮತ್ತು ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಆ ದಿನಾಂಕಗಳಲ್ಲಿ ಚುನಾವಣೆಗಳಲ್ಲಿ ನಿರತರಾಗಿರುತ್ತಾರೆ, ರಷ್ಯಾದ ಅಧ್ಯಕ್ಷರು ಅಲ್ಲಿನ COVID-19 ಬಿಕ್ಕಟ್ಟಿನ ಹಿನ್ನಲೆಯಲ್ಲಿ ಕಾರಣ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ.

Recommended Video

ಕರ್ನಾಟಕ ರಾಜ್ಯೋತ್ಸವ:ನಮ್ಮ ಭಾಷೆ ನಮ್ಮ ಹೆಮ್ಮೆ | Oneindia Kannada

English summary
Prime Minister Narendra Modi on Friday arrived here in Italy to participate in the G20 Summit. In Rome, Prime Minister Modi will hold discussions on global economic and health recovery from the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X