ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ಲೇಬಾಯ್' ಮ್ಯಾಗಜಿನ್ ಸಂಸ್ಥಾಪಕ ರಸಿಕ ಹಗ್ ಹಫ್ನರ್ ನಿಧನ

By Sachhidananda Acharya
|
Google Oneindia Kannada News

ಲಾಸ್ ಏಂಜಲೀಸ್, ಸೆಪ್ಟೆಂಬರ್ 28: ಜಗತ್ತಿನಾದ್ಯಂತ ಜನಪ್ರಿಯವಾಗಿರುವ ವಿಶಿಷ್ಟ ನಿಯತಕಾಲಿಕೆ 'ಪ್ಲೇಬಾಯ್'ನ ಸಂಸ್ಥಾಪಕ ಹಗ್ ಹಫ್ನರ್ 91ನೇ ವಯಸ್ಸಿನಲ್ಲಿ ಅಸುನೀಗಿದ್ದಾರೆ.

ವಯೋ ಸಂಬಂಧಿ ಅನಾರೋಗ್ಯದಿಂದ ಹಗ್ ಹಫ್ನರ್ ನಿಧನರಾಗಿದ್ದಾರೆ ಎಂದು ಸಂಸ್ಥೆಯ ಮೂಲಗಳು ಹೇಳಿವೆ.

ಅಮೆರಿಕಾದಲ್ಲಿ 1953ರಲ್ಲಿ ಪ್ಲೇಬಾಯ್ ಮಾಗಜೀನ್ ಗೆ ಚಾಲನೆ ನೀಡಿದ್ದ ಹಗ್ ಹಫ್ನರ್ ಅದೇ ಹಾದಿಯಲ್ಲಿ ಕಂಪನಿ ತೆರೆದು 'ಪ್ಲೇಬಾಯ್' ಬ್ರಾಂಡ್ ಕಟ್ಟಿದ್ದರು. ಮುಂದೆ ಪ್ಲೇಬಾಯ್ ಬ್ರಾಂಡ್ ಅಮೆರಿಕಾ ಗಡಿಯನ್ನು ದಾಟಿ ವಿಶ್ವದಾದ್ಯಂತ ಜನಪ್ರಿಯವಾಗಿತ್ತು.

Playboy magazine founder Hugh Hefner dead at 91

ಶಿಕಾಗೋದಲ್ಲಿ 1926ರಲ್ಲಿ ಹುಟ್ಟಿದ ಹಫ್ನರ್ ತುಂಡುಡುಗೆ ತೊಟ್ಟ ಲಲನೆಯರ ಜತೆಯೇ ಕಾಣಸಿಕೊಳ್ಳುತ್ತಾ, ತಮ್ಮ ರಸಿಕತೆಗಳಿಂದಲೇ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದರು.

ಆರಂಭದಲ್ಲಿ ಅಮೆರಿಕಾದ ಮಿಲಿಟರಿ ಸುದ್ದಿ ಪತ್ರಿಕೆಯಲ್ಲಿ ಬರೆವಣಿಗೆ ಮಾಡುತ್ತಿದ್ದ ಹಫ್ನರ್ ಪುರುಷರಿಗಾಗಿ ಪ್ಲೇಬಾಯ್ ಮಾಸಿಕ ಹೊರ ತಂದಿದ್ದರು. ವಿವರವಾದ ಬರವಣಿಗೆಯ ಜತೆ ಪ್ರಕಟವಾಗುತ್ತಿದ್ದ ಬೆತ್ತಲೆ ಯುವತಿಯರ ಫೋಟೋಗಳು, ಸಂದರ್ಶನಗಳು, ಜತೆಗೆ ಖ್ಯಾತ ಲೇಖಕರ ಲೇಖನಗಳ ಮೂಲಕ ಕಡಿಮೆ ಅವಧಿಯಲ್ಲೇ ಪ್ಲೇಬಾಯ್ ಅಮೆರಿಕಾ ಸೇರಿದಂತೆ ಜಾಗತಿಕವಾಗಿ ಮನೆ ಮಾತಾಯಿತು.

'ಪ್ಲೇಬಾಯ್ ಆಫ್ಟರ್ ಡಾರ್ಕ್' ಹಾಗೂ 'ದ ಗರ್ಲ್ಸ್ ನೆಕ್ಸ್ ಡೋರ್' ಹೆಸರಿನ ರಿಯಾಲಿಟಿ ಶೋಗಳ ನಿರೂಪಕರಾಗಿಯೂ ಹಫ್ನರ್ ಕಾರ್ಯ ನಿರ್ವಹಿಸಿದ್ದರು.

Playboy magazine founder Hugh Hefner dead at 91

ಇತ್ತೀಚೆಗೆ ಅಂದರೆ 2012ರಲ್ಲಿ ಹಗ್ ಹಫ್ನರ್ ನಾಲ್ಕನೇ ಮದುವೆಯಾಗಿದ್ದರು. ಆಗ ಅವರಿಗೆ 86 ವರ್ಷ ವಯಸ್ಸಾಗಿತ್ತು; ಅವರ ಪತ್ನಿ ಮಾಡೆಲ್ ಕ್ರಿಸ್ಟಲ್ ಹ್ಯಾರಿಸ್ ಗೆ ಆಗ ಕೇವಲ 26 ವರ್ಷ ವಯಸ್ಸಾಗಿತ್ತು.

ಹೀಗೆ ತಮ್ಮ ವಿಶಿಷ್ಟ ಬದುಕಿನಿಂದಲೇ ಹೆಸರುವಾಸಿಯಾಗಿದ್ದ ಹಗ್ ಹಫ್ನರ್ ಇಂದು ನಿಧನರಾಗಿದ್ದು, ಪತ್ನಿ ಕ್ರಿಸ್ಟಲ್ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

English summary
Hugh Hefner, the founder of the iconic Playboy magazine has died, Playboy Enterprises announced. He was 91.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X