ಇಲ್ಲಿ ಸತ್ತ ಬೆಕ್ಕುಗಳ ಗಂಟುಗಳು ಮರದಲ್ಲಿ ನೇತಾಡ್ತಿವೆ

plastic-bags-with-dead-cats-found-hanging-from-tree-branches-new-york
ನ್ಯೂಯಾರ್ಕ್, ಏ.26: ಅಮೆರಿಕದ ವಾಷಿಂಗ್ಟನ್ ನಲ್ಲಿ ಅಸುನೀಗಿದ 25 ಬೆಕ್ಕುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಗಂಟು ಕಟ್ಟಿ ಮರದಲ್ಲಿ ನೇತುಹಾಕಿರುವ ಪ್ರಸಂಗ ನಡೆದಿದೆ.

USA Today ಇದನ್ನು ವರದಿ ಮಾಡಿದ್ದು, ಮೃತ ಬೆಕ್ಕುಗಳಿದ್ದ ಗಂಟನ್ನು ಮರದ ಕೊಂಬೆಗೆ ಸಾವಕಾಶವಾಗಿ ಕಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. 'ನ್ಯೂಯಾರ್ಕ್ ನಗರದ ಪೌರ ಕಾರ್ಮಿಕರು ನಗರವನ್ನು ಸ್ವಚ್ಛಗೊಳಿಸುವಾಗ ಈ ದೃಶ್ಯ ಕಂಡಿದ್ದಾರೆ. ಇದು ತುಂಬಾ ವಿಚಿತ್ರವಾಗಿದೆ' ಎಂದು ಕಾನೂನುಜಾರಿ ನಿರ್ದೇಶನಾಲಯದ ಮುಖ್ಯಸ್ಥ ಅರ್ನೆಸ್ಟ್ ಲಂಗರೊ ಪತ್ರಿಕೆಗೆ ತಿಳಿಸಿದ್ದಾರೆ.

25ಕ್ಕೂ ಹೆಚ್ಚು ಮೃತ ಬೆಕ್ಕುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಪ್ರತ್ಯೇಕವಾಗಿ ಕಟ್ಟಿ ನೇತುಹಾಕಲಾಗಿದೆ. ದೊಡ್ಡ ಮರದಿಂದ ಅವುಗಳನ್ನು ಒಂದೊಂದಾಗಿ ಬಿಚ್ಚಿ, ವಿಲೇವಾರಿ ಮಾಡಬೇಕಿದೆ. ಬಹುತೇಕ ಬೆಕ್ಕುಗಳು ಚೀಲದಲ್ಲಿ ಗಂಟುಕಟ್ಟುವ ಮುನ್ನವೇ ಅಸುನೀಗಿರಬಹುದು.

ಆ ಬೆಕ್ಕುಗಳ ಚೀಲಗಳನ್ನೆಲ್ಲಾ ಕೆಳಗಿಳಿಸಿ ವಿಲೇವಾರಿ ಮಾಡುವುದು ದೊಡ್ಡ ಕೆಲಸವಾಗಲಿದೆ. ಬೆಕ್ಕುಗಳೆಲ್ಲಾ ಕೊಳೆತು ನಾರುತ್ತಿವೆ ಎಂದು ಅರ್ನೆಸ್ಟ್ ಲಂಗರೊ ಪತ್ರಿಕೆಗೆ ವಿವರಿಸಿದ್ದಾರೆ.

ಆದರೆ ಪೊಲೀಸರು ಈ ಬಗ್ಗೆ ಏನನ್ನೂ ಹೇಳುತ್ತಿದ್ದ. ಈ ದುಷ್ಕೃತ್ಯದ ಹಿಂದೆ ಯಾರ ಕೈವಾಡವಿದೆ. ಯಾರಾದರೂ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರಾ? ಈ ಕುಕೃತ್ಯದ ಹಿಂದಿನ ಉದ್ದೇಶವೇನು? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಅಥವಾ ಯಾವುದಾದರೂ ಮಾಟಮಂತ್ರಕ್ಕೆ ಬಳಸಲಾಗಿದೆಯಾ? ಎಂಬುದರ ಸುತ್ತಲೂ ಪೊಲೀಸರ ಅನುಮಾನ ವ್ಯಕ್ತವಾಗಿದೆ. ತನಿಖೆ ಮುಂದಿವರಿದಿದೆ ಎಂದು ಪತ್ರಿಕೆ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+