ಬ್ರೆಜಿಲ್‌ನಲ್ಲಿ ವಿಮಾನ ಪತನ, 14 ಜನರು ಸಾವು

ರಿಯೊ ಡಿ ಜನೈರೊ, ಸೆಪ್ಟೆಂಬರ್ 17; ಬ್ರೆಜಿಲ್‌ನಲ್ಲಿ 12 ಪ್ರವಾಸಿಗರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪೈಲೆಟ್ ನಿಯಂತ್ರಣ ಕಳೆದುಕೊಂಡು ಪತನಗೊಂಡ ವಿಮಾನದಲ್ಲಿ ಇಬ್ಬರು ಸಿಬ್ಬಂದಿಗಳಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಬ್ರೆಜಿಲ್‌ನ ಉತ್ತರ ಭಾಗದ ಬಾರ್ಸಿಲೋಸ್ ಎಂಬಲ್ಲಿ ಈ ಘಟನೆ ನಡೆದಿದೆ. ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, 12 ಪ್ರವಾಸಿಗರು ಮತ್ತು ಇಬ್ಬರು ಸಿಬ್ಬಂದಿ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಗೌರ್ನರ್ ವಿಲ್ಸನ್ ಲೀಮಾ ಟ್ವೀಟ್ ಮಾಡಿದ್ದಾರೆ.

plane-crashes-in-brazil

ವಿಮಾನದಲ್ಲಿದ್ದ ಯಾರೂ ಸಹ ಬದುಕಿಲ್ಲ ಎಂದು ಬ್ರೆಜಿಲ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ವಿಮಾನ ಬಾರ್ಸಿಲೋಸ್‌ನಿಂದ ಮನೌಸ್‌ ಎಂಬ ಪ್ರದೇಶಕ್ಕೆ ಹಾರಾಟ ಆರಂಭಿಸಿತ್ತು. ಈ ಪ್ರಯಾಣ 90 ನಿಮಿಷದ ಅವಧಿಯದ್ದಾಗಿತ್ತು.

ಪ್ರತಿಕೂಲ ಹವಾಮಾನದ ಕಾರಣ ವಿಮಾನ ಪೈಲೆಟ್ ನಿಯಂತ್ರಣ ಕಳೆದುಕೊಂಡಿದೆ. ಬಳಿಕ ಹಲವಾರು ವನ್ಯಧಾಮಗಳು, ಸಂರಕ್ಷಿತ ಪ್ರದೇಶಗಳು ಇರುವ ಕಾಡಿನಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಪ್ರವಾಸದ ಭಾಗವಾಗಿ ಜಲಕ್ರೀಡೆಗಾಗಿ ತೆರಳುವಾಗ ಈ ಅಪಘಾತ ನಡೆದಿದೆ.

ಈ ಪ್ರದೇಶದಲ್ಲಿ ಹವಾಮಾನ ವೈಫರಿತ್ಯದ ಕಾರಣ ಮಳೆಯಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ವಿಮಾನ ಇಳಿಯಲು ಪ್ರಯತ್ನ ನಡೆಸಲಾಗಿದೆ. ಆದ್ದರಿಂದ ಅದು ಪತನಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+