ನೇಪಾಳ: ಕಠ್ಮಂಡುವಿನಲ್ಲಿ ವಿಮಾನ ಪತನ: 18 ಜನ ಸಾವು
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಟೇಕಾಫ್ ಆಗುವ ವೇಳೆ ವಿಮಾನವೊಂದು ಪತನಗೊಂಡಿದೆ. ಈ ವಿಮಾನದಲ್ಲಿ 19 ಮಂದಿ ಇದ್ದರು. ಈ ಅವಘಡದಲ್ಲಿ 18 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದೇ ವೇಳೆ ವಿಮಾನದ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತದ ಸುದ್ದಿ ಬುಧವಾರ ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಈ ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುತ್ತಿರುವಾಗ ಪತನಗೊಂಡಿದೆ. ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ಹೋಗುತ್ತಿತ್ತು ಮತ್ತು ಅದರಲ್ಲಿ 19 ಜನರಿದ್ದರು.

ಮಾಹಿತಿಯ ಪ್ರಕಾರ, ಖಾಸಗಿ ಕಂಪನಿ ಸೌರ್ಯ ಏರ್‌ಲೈನ್ಸ್‌ನ ವಿಮಾನವು ಬುಧವಾರ 19 ಜನರೊಂದಿಗೆ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬೆಳಿಗ್ಗೆ ಟೇಕಾಫ್ ಆಗುತ್ತಿರುವಾಗ ವಿಮಾನ ಪತನಗೊಂಡಿದೆ. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಕನಿಷ್ಠ 19 ಜನರು ಇದ್ದರು ಎಂದು ತಿಳಿದು ಬಂದಿದೆ.
ವಿಮಾನದ ಪೈಲಟ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾದ ಭದ್ರತಾ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಬೆಂಕಿಯನ್ನು ನಂದಿಸಲಾಗಿದೆ. ಆದರೆ, ವಿಮಾನದಲ್ಲಿದ್ದ ಪ್ರಯಾಣಿಕರ ಸ್ಥಿತಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ.
⚡Plane Crashes During Takeoff In Nepal, 19 People On Board
— RT_India (@RT_India_news) July 24, 2024
Fire & smoke can be seen rising from the area, in unverified videos posted to social media, where a Saurya Airlines flight is reported to have crashed, Wednesday morning.
The aircraft was bound for Pokhara and carrying… pic.twitter.com/9Txz2FkiLj
ವಿಮಾನ ನಿಲ್ದಾಣದ ಮೂಲಗಳನ್ನು ಉಲ್ಲೇಖಿಸಿ, ಕಠ್ಮಂಡು ಪೋಸ್ಟ್ ಸುದ್ದಿಯ ಪ್ರಕಾರ, ಟೇಕ್-ಆಫ್ ಸಮಯದಲ್ಲಿ ವಿಮಾನವು ರನ್‌ವೇಯಿಂದ ಜಾರಿತು, ಇದರಿಂದಾಗಿ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ವಿಮಾನಕ್ಕೆ ಬೆಂಕಿ ಕಾಣಿಸಿಕೊಂಡಿತು ಮತ್ತು ಹೊಗೆ ಆವರಿಸಿತು. ಅಪಘಾತದಿಂದಾಗಿ ವಿಮಾನದಲ್ಲಿ ಸಂಭವಿಸಿದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ತಂಡ ಹರಸಾಹಸ ಪಟ್ಟಿದೆ.
Video shows moment of plane crash in Nepal's Kathmandu.
— Vani Mehrotra (@vani_mehrotra) July 24, 2024
18 people have died as the plane skid off the runway.#Nepal #PlaneCrash pic.twitter.com/YIviYnyz3o












Click it and Unblock the Notifications