ಹೊತ್ತಿ ಉರಿದ 173 ಪ್ರಯಾಣಿಕರಿದ್ದ ವಿಮಾನ
ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ಭೀಕರ ವಿಮಾನ ದುರಂತದಲ್ಲಿ 242ಕ್ಕೂ ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಮಾಸುವ ಮುನ್ನವೇ 173 ಪ್ರಯಾಣಿಕರಿದ್ದ ವಿಮಾನ ಹೊತ್ತಿ ಉರಿದ ಘಟನೆ ನಡೆದಿದ್ದು, ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಹಾಗಾದ್ರೆ ಇದು ಎಲ್ಲಿ ನಡೆದಿದ್ದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ಅಹಮದಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ 242ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ದುರಂತ ಮಾಸುವ ಮುನ್ನವೇ ಅಮೆರಿಕಾ ಏರ್‌ಲೈನ್ಸ್‌ನ ವಿಮಾನಕ್ಕೆ ಬೆಂಕಿ ಹೊತ್ತಿ ಉಳಿದ ಘಟನೆ ನಡೆದಿದೆ.

ಹೊತ್ತಿ ಉರಿದ ವಿಮಾನ: ಅಮೆರಿಕದ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಗುವ ವೇಳೆ ಅಮೇರಿಕನ್ ಏರ್‌ಲೈನ್ಸ್ ವಿಮಾನದ ಎಡಭಾಗದ ಮುಖ್ಯ ಲ್ಯಾಂಡಿಂಗ್ ಟೈರ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ಭೂಸ್ಪರ್ಶ ಮಾಡಲಾಗಿದೆ. ಮಿಯಾಮಿಗೆ ತೆರಳುತ್ತಿದ್ದ AA3023 ವಿಮಾನವು ಟೇಕ್ ಆಫ್ ಆದ ತಕ್ಷಣವೇ ರನ್ ವೇನಯಲ್ಲಿ ಇದ್ದಾಗ ಬೆಂಕಿ ಕಾಣಿಸಿಕೊಂಡಿತು.
ವಿಮಾನದ ಕೆಳಗೆ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ತುರ್ತು ಸ್ಲೈಡ್‌ಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಇನ್ನು ಘಟನೆಯಲ್ಲಿ ಹಲವು ಪ್ರಯಾಣಿರು ಹಾಗೂ ಕೆಲ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಸದ್ಯ ಎಲ್ಲಾ 173 ಪ್ರಯಾಣಿಕರು ಸುರಕ್ಷಿತ ಆಗಿದ್ದು, ಘಟನೆಗೆ ಆರು ಸಿಬ್ಬಂದಿಯನ್ನ ಹೊಣೆ ಮಾಡಲಾಗಿದೆ. ಆದರೆ, ಇದಕ್ಕೆ ನಿಖರವಾದ ಕಾರಣ ಏನೆಂದು ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳೀಯ ಸಮಯ ಮಧ್ಯಾಹ್ನ 2:45ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಮೆರಿಕನ್ ಏರ್‌ಲೈನ್ಸ್ ವಿಮಾನದ ಚಕ್ರಗಳಿಂದ ಜ್ವಾಲೆಗಳು ಹೊರಹೊಮ್ಮುತ್ತಿರುವ ಬಗ್ಗೆ DEN ಪ್ರಥಮ ಪ್ರತಿಕ್ರಿಯೆ ನೀಡುವವರು ಮತ್ತು ಡೆನ್ವರ್ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಬೆಂಕಿಯು ವಿಮಾನ ನಿಲ್ದಾಣದಲ್ಲಿ ಅಲ್ಪಾವಧಿಯ ನೆಲದ ನಿಲುಗಡೆಗೆ ಕಾರಣವಾಯಿತು.
ಇನ್ನು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತ್ವರಿತವಾಗಿ ನಂದಿಸುವಲ್ಲಿ ಯಶಸ್ವುಯಾದರು. ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಿಯಾಮಿಗೆ ಹಾರಲು ನಿಗದಿ ಆಗಿದ್ದ ಅಮೇರಿಕನ್ ಏರ್ಲೈನ್ಸ್ ವಿಮಾನವು ಟೇಕ್ ಆಫ್ ಆಗುವ ಮೊದಲೇ ವಿಮಾನದ ಟೈರ್ ಬೆಂಕಿಗೆ ಆಹುತಿಯಾಗಿ, ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆಯು ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.
ಅಲ್ಲದೆ, ಬೆಂಕಿ ಕಾಣಿಸಿಕೊಂಡ ತಕ್ಷಣವೇ ವಿಮಾನ ರನ್‌ವೇನಲ್ಲಿರುವಾಗಲೇ ನಿಲ್ಲಿಸಲಾಯಿತು. ಆಗ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಮತ್ತು ನಮ್ಮ ನಿರ್ವಹಣಾ ತಂಡವು ವಿಮಾನವನ್ನು ಪರಿಶೀಲನೆ ನಡೆಸುತ್ತಿದೆ ಎಂದು ವಿಮಾನಯಾನ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲು ಹರಿದಾಡುತ್ತಿರುವ ಘಟನೆಯ ವೀಡಿಯೊದಲ್ಲಿ, ತುರ್ತು ಸ್ಲೈಡ್‌ಗಳ ಮೂಲಕ ಪ್ರಯಾಣಿಕರು ವಿಮಾನದಿಂದ ಹೊರಬರುತ್ತಿರುವುದು ಮತ್ತು ವಿಮಾನದ ಎಡ ಹಿಂಭಾಗದ ಭಾಗದಿಂದ ಹೊಗೆ ಆಡುತ್ತಿರುವುದನ್ನು ಕಾಣಬಹುದು. ವಿಮಾನಯಾನ ಸಂಸ್ಥೆಯ ಪ್ರಕಾರ, ಪ್ರಯಾಣಿಕರನ್ನು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿಕೊಡಲಾಗಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications