ಕಣ್ಣು ಮಿಟುಕಿಸುವುದರೊಳಗೆ ನಾಲ್ಕು ಜನರನ್ನು ಕೊಂದ ಮೀನು
ಪರಾಗ್ವೆ ಜನವರಿ 07: ದಕ್ಷಿಣ ಅಮೆರಿಕದ ಸಾಂಟಾ ಫೆಯ ಪರಾನಾ ನದಿಯ ತೀರದಲ್ಲಿ ಜಲ ದೈತ್ಯ ಎಂದು ಕರೆಯಲ್ಪಡುವ ಕುಖ್ಯಾತ ಪಿರಾನ್ಹಾ ಮೀನುಗಳಿಂದ ಮತ್ತೆ ನಾಲ್ವರು ಸಾವನ್ನಪ್ಪಿರುವುದು ವರದಿಯಾಗಿದೆ. ಪಿರಾನ್ಹಾ ಮೀನುಗಳು ಮನುಷ್ಯರನ್ನು ಬೇಟೆಯಾಡುವ ರೀತಿ ತುಂಬಾ ಭಯಾನಕವಾಗಿದೆ. ಈ ಪಿರಾನ್ಹಾ ಮೀನು ಮನುಷ್ಯರಿಗೆ ಭಯಾನಕ ಹಾನಿಯನ್ನುಂಟುಮಾಡುವ ಮೀನುಗಳಲ್ಲಿ ಒಂದಾಗಿದೆ. ಮತ್ತೊಂದು ಭಯಾನಕ ಸಂಗತಿ ಅಂದರೆ ಇದು ಮನುಷ್ಯರನ್ನು ಕಣ್ಣು ಮಿಟುಕಿಸುವುದರಲ್ಲಿ ಕೊಲ್ಲುತ್ತದೆ. ಆದ್ದರಿಂದ ಪಿರಾನ್ಹಾ ಮೀನು ಶಾರ್ಕ್‌ಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತದೆ. ವಿಶ್ವದ ದೊಡ್ಡ ನದಿಗಳಲ್ಲಿ ಒಂದಾಗಿರುವ ದಕ್ಷಿಣ ಅಮೆರಿಕದ ಅಮೆಜಾನ್ ನದಿ, ದೈತ್ಯ ಮೊಸಳೆಗಳು, ಅನಕೊಂಡಾದಂತಹ ದೈತ್ಯ ಹಾವುಗಳು ಸೇರಿದಂತೆ ಹಲವು ವಿಶಿಷ್ಟ ಪ್ರಭೇದದ ಜೀವಿಗಳಿಗೆ ವಾಸಸ್ಥಾನವಾಗಿದೆ. ಈ ನದಿಯಲ್ಲಿ ಕಾಣಸಿಗುವ ಅಪರೂಪದ ಮತ್ತು ಅಪಾಯಕಾರಿ ಮತ್ಸ್ಯ ಪಿರಾನ್ಹಾ ಮೀನು.

ದೈತ್ಯಾಕಾರದ ಮೀನು ಕಂಡು ಪ್ರವಾಸಿಗರು ಶಾಕ್
ದಕ್ಷಿಣ ಅಮೆರಿಕಾದ ಪಿರಾನ್ಹಾ ಮೀನುಗಳ ದಾಳಿ ಪರಾಗ್ವೆಯಲ್ಲಿ ಶೋಕದ ಅಲೆಯನ್ನು ಉಂಟುಮಾಡಿದೆ. ಈ ಪಿರಾನ್ಹಾ ಮೀನುಗಳು ಇತ್ತೀಚೆಗೆ ನಾಲ್ವರು ಸಮುದ್ರ ಈಜುಗಾರರನ್ನು ಕೊಂದಿದೆ. ವಾಸ್ತವವಾಗಿ ಪರಾಗ್ವೆಯಲ್ಲಿ ತಂಪಾದ ವಾತಾವರಣದಲ್ಲಿ ಸೂರ್ಯನ ಶಾಖವು ಹೊರಬಂದ ನಂತರ ಹೆಚ್ಚಿನ ಸಂಖ್ಯೆಯ ಜನರು ನದಿಯ ದಡದಲ್ಲಿ ಜಮಾಯಿಸುತ್ತಾರೆ. ನದಿಯ ದಡದಲ್ಲಿ ಶಾಖವನ್ನು ಆನಂದಿಸುತ್ತಾರೆ. ಈ ಘಟನೆ ಇದೇ ವೇಳೆ ಸಂಭವಿಸಿದೆ. ಹೊಸ ವರ್ಷ 22 ವರ್ಷದ ಯುವಕನೊಬ್ಬ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಪಿರಾನ್ಹಾ ಮೀನು ದಾಳಿ ಮಾಡಿದೆ. ಈ ದಾಳಿ ಥೇಟ್ 'ಶಾರ್ಕ್ ಅಟ್ಯಾಕ್' ಸಿನಿಮಿಯಾ ದೃಶ್ಯಗಳನ್ನು ನೆನಪಿಸುವಂತಿದೆ.

4 ಜನ ಬಲಿ, 20 ಮಂದಿಗೆ ಗಾಯ
ವರದಿಯ ಪ್ರಕಾರ, ನದಿಯಲ್ಲಿ ಸ್ನಾನ ಮಾಡುವಾಗ, ಪಿರಾನ್ಹಾ ಮೀನುಗಳು ಜನರ ಮೇಲೆ ದಾಳಿ ಮಾಡಿ 4 ಜನರನ್ನು ಕೊಂದಿವೆ. ಈ ಘಟನೆಯಲ್ಲಿ ಕನಿಷ್ಠ 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಲ ದೈತ್ಯ ಮೀನಿನ ದಾಳಿಯ ನಂತರ ನದಿ ದಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಡೈಲಿ ಮೇಲ್ ವರದಿಯ ಪ್ರಕಾರ, ಮೊದಲ ಪಿರಾನ್ಹಾ ದಾಳಿಯಲ್ಲಿ 22 ವರ್ಷದ ಯುವಕ ನಾಪತ್ತೆಯಾಗಿದ್ದು, ಆತನನ್ನು ಹುಡುಕಲು ಪ್ರಯತ್ನಿಸಲಾಗುತ್ತಿದೆ. ಆದರೆ ಅವನು ಎಲ್ಲಿಯೂ ಪತ್ತೆಯಾಗಿಲ್ಲ. ನಂತರ ಕುಟುಂಬ ಸದಸ್ಯರು ನಾಪತ್ತೆಯಾದ ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು ಮತ್ತು ಸ್ವಲ್ಪ ಸಮಯದ ನಂತರ 22 ವರ್ಷದ ಯುವಕನ ಶವ ತೀರಾ ಕೆಟ್ಟ ಸ್ಥಿತಿಯಲ್ಲಿ ಸಮುದ್ರತೀರದಲ್ಲಿ ಪತ್ತೆಯಾಗಿದೆ.

ವಿಚಿತ್ರವಾಗಿ ಗಾಯಗೊಂಡಿದ್ದ ಶವಗಳು ಪತ್ತೆ
ವರದಿಯ ಪ್ರಕಾರ, ಪಿರಾನ್ಹಾ ಮೀನು ಸ್ನಾನ ಮಾಡುವಾಗ 22 ವರ್ಷದ ಯುವಕನ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದೆ ಎಂದು ತನಿಖೆಯ ಸಮಯದಲ್ಲಿ ಕಂಡುಬಂದಿದೆ ಮತ್ತು ಫೋರೆನ್ಸಿಕ್ ತನಿಖೆಯಲ್ಲಿ ಪಿರಾನ್ಹಾ ಮೀನು ಯುವಕರನ್ನು ಕೆಟ್ಟದಾಗಿ ಕಚ್ಚಿದೆ ಎಂದು ತಿಳಿದುಬಂದಿದೆ. ಪಿರಾನ್ಹಾ ಮೀನುಗಳು ಆಕ್ರಮಣಕಾರಿ ಆಗುವ ಘಟನೆಗಳು ಆಗಾಗ್ಗೆ ನಡೆಯುತ್ತವೆ ಮತ್ತು ಈ ಹಿಂದೆ ಪರಾಗ್ವೆಯಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಇದಕ್ಕೂ ಮೊದಲು, ಈ ದಡದಲ್ಲಿ 49 ವರ್ಷದ ವ್ಯಕ್ತಿಯೊಬ್ಬರು ಪಿರಾನ್ಹಾ ಮೀನುಗಳಿಂದ ಸಾವನ್ನಪ್ಪಿದರು. ಅವರ ದೇಹ ಪಿರಾನ್ಹಾ ಮೀನುಗಳಿಂದ ತೀವ್ರವಾಗಿ ಗಾಯಗೊಂಡಿತ್ತು.

ದಾಳಿಯಿಂದ ತಪ್ಪಿಸಲು ಚಿಂತನೆ
22ರ ಹರೆಯದ ಯುವಕನ ಜೊತೆಗೆ ಇನ್ನೂ ಇಬ್ಬರನ್ನು ಟೆಬಿಕ್ವಿರಿ ನದಿಯ ಬಳಿ ಪಿರಾನ್ಹಾ ಮೀನುಗಳು ಕೊಂದಿದೆ ಎಂದು ಕ್ಲಬ್ ಮ್ಯಾನೇಜರ್ ಹೇಳಿದ್ದಾರೆ. ಈಗ ನೀರಿನಲ್ಲಿ ರಾಸಾಯನಿಕಗಳನ್ನು ಹಾಕುವ ಆಲೋಚನೆ ಇದೆ. ಇದರಿಂದ ಪಿರಾನ್ಹಾ ಮೀನುಗಳು ಸಾಮಾನ್ಯ ಜನರಿಗಿಂತ ಹೆಚ್ಚು ದೂರವಿರುತ್ತವೆ. ವರದಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಪಿರಾನ್ಹಾ ಮೀನುಗಳು ಕನಿಷ್ಠ 20 ಜನರಿಗೆ ಗಂಭೀರ ಗಾಯಗಳನ್ನು ಉಂಟುಮಾಡಿದೆ ಮತ್ತು ಇನ್ನೂ ಅನೇಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
|
ಹಠಾತ್ ದಾಳಿಯಿಂದ ತಪ್ಪಿಸಿಕೊಳ್ಳಲು ಅಸಾಧ್ಯ
ಈ ಮೀನುಗಳು ಒಂದು ರೀತಿಯ ಕ್ರೂರ ಮೀನುಗಳಾಗಿವೆ. ಮುಖ್ಯವಾಗಿ ಈ ಪಿರಾನ್ಹಾ ಮೀನುಗಳು ಪರಾಗ್ವೆ ನದಿಗಳಲ್ಲಿವೆ ಎಂದು ಜೀವಶಾಸ್ತ್ರಜ್ಞರು ಹೇಳಿದ್ದಾರೆ. ಜೀವಶಾಸ್ತ್ರಜ್ಞರು ಹೇಳುವಂತೆ, ಈ ಮೀನುಗಳು ಮನುಷ್ಯರ ಮೇಲೆ ಹಠಾತ್ ದಾಳಿ ಮಾಡುತ್ತವೆ. ದಾಳಿಗೂ ಮುನ್ನ ಈ ಮೀನುಗಳು ನೀರಿನಲ್ಲಿ ಇರುವ ಸಸ್ಯಗಳ ನಡುವೆ ಅಡಗಿಕೊಳ್ಳುತ್ತವೆ. ನಂತರ ಹಿಂಡಿನಲ್ಲಿ ಒಟ್ಟಿಗೆ ದಾಳಿ ಮಾಡುತ್ತವೆ. ಇದರಿಂದ ಜನರು ತಪ್ಪಿಸಿಕೊಳ್ಳಲು ಸಹ ಅವಕಾಶವಿರುವುದಿಲ್ಲ. ವಿಜ್ಞಾನಿಗಳು ಹೇಳುವಂತೆ, ಪಿರಾನ್ಹಾ ಮೀನುಗಳು ಸಂತಾನೋತ್ಪತ್ತಿ ಅವಧಿಯಲ್ಲಿ ಆಗಾಗ್ಗೆ ದಾಳಿ ಮಾಡುತ್ತವೆ ಮತ್ತು ಆ ಸಮಯದಲ್ಲಿ ಗಂಡು ಪಿರಾನ್ಹಾ ಮೀನುಗಳು ತುಂಬಾ ಆಕ್ರಮಣಕಾರಿಯಾಗುತ್ತವೆ. ದಾಳಿ ಮಾಡಿದಾಗ ದೇಹವನ್ನು ಕಚ್ಚಿ ತಿನ್ನುತ್ತವೆ ಎಂದಿದ್ದಾರೆ.

ಸಂತಾನೋತ್ಪತ್ತಿ ಅವಧಿಯಲ್ಲಿ ದಾಳಿ
ಈ ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ನದಿಗಳಲ್ಲಿ ಸ್ನಾನ ಮಾಡದಂತೆ ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಲಾಗಿದೆ. ದೀರ್ಘಕಾಲದವರೆಗೆ ನದಿಯಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಪಿರಾನ್ಹ ಮೀನುಗಳು ಇರುವ ಪ್ರದೇಶಗಳಿಗೆ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ವಿಜ್ಞಾನಿಗಳು ಹೇಳುವ ಪ್ರಕಾರ, ಈ ಮೀನುಗಳು ತಮ್ಮ ಮೊಟ್ಟೆಗಳನ್ನು ಸಸ್ಯಗಳ ಹಿಂದೆ ಮರೆಮಾಡುತ್ತವೆ ಮತ್ತು ಯಾರಾದರೂ ಆ ಬದಿಯಲ್ಲಿ ಸ್ನಾನ ಮಾಡಲು ಹೋದರೆ, ಈ ಮೀನುಗಳು ತುಂಬಾ ಆಕ್ರಮಣ ಮಾಡುತ್ತವೆ. ಇದಕ್ಕೂ ಮುನ್ನ ಅರ್ಜೆಂಟೀನಾದ ಸಾಂಟಾ ಫೆಯ ಪರಾನಾ ನದಿಯ ದಡದ ಬಳಿ ಕುಳಿತಿದ್ದ 13 ವರ್ಷದ ಬಾಲಕಿ ಮೇಲೆ ಏಕಾಏಕಿ ಪಿರಾನ್ಹಾ ಗಳು ದಾಳಿ ಮಾಡಿವೆ. ಈ ದಾಳಿಯಲ್ಲಿ ಬಾಲಕಿಯ ಕಾಲ್ಬೆರಳುಗಳನ್ನು ಮೀನುಗಳು ಕಚ್ಚಿ ಗಾಯಗೊಳಿಸಿದರಿಂದ ಬಾಲಕಿ ತನ್ನ ಕಾಲ್ಬೆರಳುಗಳನ್ನು ಕಳೆದುಕೊಂಡಿದ್ದಾಳೆ. ಈ ಘಟನೆಗೂ ಮುಂಚೆ 30 ಜನ ಈ ಮೀನುಗಳು ದಾಳಿ ಮಾಡಿವೆ.

2008ರಲ್ಲಿ 40 ಜನರಿಗೆ ಗಾಯ
ಇನ್ನು ಸಾಂಟಾ ಫೆಯ ಪರಾನಾ ನದಿಯ ತೀರದಲ್ಲಿ ಆಗಾಗ ಪ್ಹಿರಾನಾ ಮೀನಿನ ದಾಳಿ ನಡೆಯುತ್ತಲೇ ಇರುತ್ತದೆ.. ಹೀಗಾಗಿ 2008ರಿಂದ 2008 ರಿಂದ ನಗರದಲ್ಲಿ ಈ ದಾಳಿಯನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. 2008ರಲ್ಲಿ ಪಿರಾನ್ಹಾ ಮೀನುಗಳು ನಡೆಸಿದ್ದ ದಾಳಿಯಲ್ಲಿ 40 ಮಂದಿ ಗಾಯಗೊಂಡಿದ್ದರು.












Click it and Unblock the Notifications