Nobel Prize: ಶ್ರೀಮಂತ ಪ್ರಶಸ್ತಿ ‘ನೊಬೆಲ್’ ಸಿಕ್ಕಿದ್ದು ಯಾರಿಗೆ?
ಅದೊಂದು ಪ್ರಶಸ್ತಿ ಸಿಕ್ಕರೆ ಸಾಕು ಜೀವನ ಪಾವನ, ಲೈಫ್ ಕೂಡ ಸೆಟಲ್ ಗುರೂ ಅಂತಾ ಹೇಳ್ತಾರೆ ಸಂಶೋಧಕರು. ಹೀಗಾಗಿಯೇ ಇಡೀ ಜಗತ್ತಲ್ಲಿ ಈ ಪ್ರಶಸ್ತಿಯನ್ನು ಅತಿ ಶ್ರೀಮಂತ ಪ್ರಶಸ್ತಿ ಅಂತಾನೆ ಕರೆಯಲಾಗುತ್ತೆ. ಅಷ್ಟಕ್ಕೂ ನಾವು ಹೇಳ್ತಾ ಇರೋದು 'ನೊಬೆಲ್' ಬಗ್ಗೆ ನಿನ್ನೆಯಷ್ಟೇ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟವಾಗಿತ್ತು, ಇದೀಗ ಭೌತಶಾಸ್ತ್ರದಲ್ಲಿನ ಸಂಶೋಧನೆಗೂ 'ನೊಬೆಲ್' ಪ್ರಶಸ್ತಿ ಪ್ರಕಟವಾಗಿದೆ.
2023ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆ್ಯನಿ ಎಲ್ ಹಲ್ಲಿಯರ್ ಅವರು ಆಯ್ಕೆ ಆಗಿದ್ದಾರೆ. 'ಎಲೆಕ್ಟ್ರಾನ್ ಡೈನಾಮಿಕ್ಸ್' ಬಗ್ಗೆ ಅಧ್ಯಯನ ನಡೆಸಿದ್ದ ಈ ಮೂವರು ವಿಜ್ಞಾನಿಗಳಿಗೆ ಜಗತ್ತಿನ ಅತ್ಯಂತ ಶ್ರೀಮಂತ ನೊಬೆಲ್ ಪ್ರಶಸ್ತಿ ಒಲಿದು ಬಂದಿದೆ. ಇನ್ನು ಮನುಷ್ಯರ ಭವಿಷ್ಯದ ದೃಷ್ಟಿಯಿಂದ ಇದೀಗ ಮೂವರು ವಿಜ್ಞಾನಿಗಳು ಕೈಗೊಂಡಿದ್ದ ಸಂಶೋಧನೆ ಸಾಕಷ್ಟು ಮಹತ್ವ ಪಡೆದಿದೆ. ಇದೇ ಕಾರಣಕ್ಕೆ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಹಾಗೂ ಆ್ಯನಿ ಎಲ್ ಹಲ್ಲಿಯರ್ ಅವರಿಗೆ 'ನೊಬೆಲ್' ಪ್ರಶಸ್ತಿ ನೀಡಲಾಗಿದೆ.

'ಕೊರೊನಾ' ಲಸಿಕೆ ಕಂಡುಹಿಡಿದವರಿಗೆ...
ನಿನ್ನೆಯಷ್ಟೇ ವೈದ್ಯಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯು ಪ್ರಕಟವಾಗಿತ್ತು. 'ಕೊರೊನಾ' ಲಸಿಕೆ ಕಂಡುಹಿಡಿಯಲು ಸಹಾಯ ಮಾಡಿದ್ದ ಸಂಶೋಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ನಡುವೆ ಇಂದು ಭೌತಶಾಸ್ತ್ರ ವಿಭಾಗದಲ್ಲಿ ನೀಡುವ ನೊಬೆಲ್ ಪ್ರಶಸ್ತಿಯೂ ಪ್ರಕಟವಾಗಿದೆ. ಜಗತ್ತಿನ ಅತ್ಯಂತ ದುಬಾರಿ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದಿರುವ ನೊಬೆಲ್ ವಿಜ್ಞಾನಿಗಳ ಪಾಲಿಗೆ ಆಸ್ಕರ್ ಅವಾರ್ಡ್ ಇದ್ದಂತೆ. ಅದರಲ್ಲೂ ಇಡೀ ಜಗತ್ತನ್ನೇ ಕಾಡಿದ್ದ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಸಹಾಯ ಮಾಡಿದ್ದ ಧೀರರಿಗೆ ನಿನ್ನೆಯಷ್ಟೇ ನೊಬೆಲ್ ಪ್ರಶಸ್ತಿ ಒಲಿದು ಬಂದಿತ್ತು. ಈಗ 'ಎಲೆಕ್ಟ್ರಾನ್ ಡೈನಾಮಿಕ್ಸ್' ಕುರಿತು ಅಧ್ಯಯನ ನಡೆಸಿದ್ದ ಈ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಸಿಕ್ಕಿದೆ.
'ನೊಬೆಲ್ ಪ್ರಶಸ್ತಿ' ಬಹುಮಾನ ಎಷ್ಟು?
ಅಷ್ಟಕ್ಕೂ 1901 ರಿಂದ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ಸಂಶೋಧಕ ಆಲ್ಫ್ರೆಡ್ ನೊಬೆಲ್ ಆಶಯಕ್ಕೆ ಅನುಗುಣವಾಗಿ ಜಗತ್ತಿನ ಪ್ರಗತಿಗೆ ಕಾರಣವಾದ ಕಾರ್ಯಕ್ಕೆ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ವರ್ಷ ಬಹುಮಾನ ವಿಜೇತರನ್ನ ಅಕ್ಟೋಬರ್ 2ರ ಸೋಮವಾರದಿಂದ ಅಕ್ಟೋಬರ್ 9ರ ತನಕ ಪ್ರತಿದಿನ ಪ್ರಕಟಿಸಲಾಗುತ್ತದೆ. ಈ ವರ್ಷದ ನೊಬೆಲ್ ಪ್ರಶಸ್ತಿಗಳನ್ನು ಗೆಲ್ಲುವವರಿಗೆ 11 ಮಿಲಿಯನ್ ಸ್ವೀಡಿಷ್ ಕ್ರೌನ್ ಸಿಗಲಿದೆ, ಅಂದರೆ ಈ ಹಣವು ಅಮೆರಿಕದ ಡಾಲರ್‌ನಲ್ಲಿ 9,86,000ನಷ್ಟು ಆಗುತ್ತದೆ. ಇದು ಹತ್ತಿರ ಹತ್ತಿರ ಸುಮಾರು 8 ಕೋಟಿಗೆ ಸಮವಾಗಿದೆ.
ಒಟ್ನಲ್ಲಿ ಸಂಶೋಧನಾ ಕ್ಷೇತ್ರದ ಆಸ್ಕರ್ ಅವಾರ್ಡ್ 'ನೊಬೆಲ್ ಪ್ರಶಸ್ತಿ'ಗೆ ಸಾಧಕರು ಈಗ ಮುತ್ತಿಟ್ಟಿದ್ದಾರೆ. ಅದರಲ್ಲೂ ಈ ಬಾರಿ 'ನೊಬೆಲ್' ಬಹುಮಾನ 1 ಮಿಲಿಯನ್ ಸ್ವೀಡಿಷ್ ಕ್ರೌನ್ ಹೆಚ್ಚಾಗಿ ಸಿಗಲಿದೆ. ಈ ಮೂಲಕ ಸಂಶೋಧಕರಿಗೆ ಮತ್ತಷ್ಟು ಸಹಾಯಕವಾಗಲಿದೆ. ಇನ್ನೂ 6 ದಿನಗಳ ಕಾಲ ವಿವಿಧ ಕ್ಷೇತ್ರಗಳ ಸಾಧಕರಿಗೆ ಇದೇ ರೀತಿ ನೊಬೆಲ್ ಪ್ರಶಸ್ತಿಯನ್ನ ಪ್ರಕಟಿಸಲಾಗುತ್ತದೆ.












Click it and Unblock the Notifications