ಇಡೀ ವಿಮಾನಕ್ಕೆ ಒಬ್ಬಳೇ ಪ್ರಯಾಣಿಕಳು, ಏಳು ಸಿಬ್ಬಂದಿ!

ನವದೆಹಲಿ, ಜನವರಿ 3: ಸದಾ ಗಿಜಿಗುಡುವ ಬಸ್‌ನಲ್ಲಿ ಊರಿಗೆ ಹೋಗುವ ಸಂಕಟ ಅನುಭವಿಸಿದವರಿಗೆ ಒಮ್ಮೊಮ್ಮೆ ಖಾಲಿ ಬಸ್‌ನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಾಗ ಸಂಭ್ರಮ ಹೇಳತೀರದು. ಯಾವ ಸೀಟಿನಲ್ಲಿ ಬೇಕಾದರೂ ಕುಳಿತು, ಗದ್ದಲವಿಲ್ಲದೆ ಪ್ರಯಾಣಿಸುವ ಸುಖವನ್ನು ಅನುಭವಿಸಿದವರೇ ಬಲ್ಲರು.

ವಿಮಾನದಲ್ಲಿಯೂ ಹೀಗೆಯೇ ಅವಕಾಶ ಸಿಕ್ಕರೆ? ವಿಮಾನಗಳಲ್ಲೇನೂ ಗಿಜಿಗುಡುವಷ್ಟು ಜನರು ಇರುವುದಿಲ್ಲ. ಲಭ್ಯವಿರುವ ಸೀಟಿನ ಮಿತಿಯಷ್ಟೇ ಪ್ರಯಾಣಿಕರು ತೆರಳಲು ಸಾಧ್ಯ. ಆದರೆ, ಆ ಸೀಟುಗಳೂ ಪ್ರಯಾಣಿಕರಿಲ್ಲದೆ ಖಾಲಿ ಉಳಿದರೆ? ರಾಜ/ರಾಣಿಯಂತೆ ಪ್ರಯಾಣಿಸುತ್ತೀರಿ ಅಲ್ಲವೇ?

ಇಡೀ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಮಾತ್ರ ಪ್ರಯಾಣಿಸಿದ ಪ್ರಸಂಗ ಫಿಲಿಪ್ಪೀನ್ಸ್‌ನಲ್ಲಿ ಕಳೆದ ವಾರ ವರದಿಯಾಗಿದೆ.

ಇಂತಹ ಅವಕಾಶ ಫಿಲಿಪ್ಪೀನ್ಸ್ ಮಹಿಳೆ ಲೌಸಾ ಎರಿಸ್ಪೆ ಅವರಿಗೆ ಒದಗಿಬಂದಿತ್ತು. ಡಿಸೆಂಬರ್ 24ರಂದು ಎರಿಸ್ಪೆ ಅವರು ಡಾವೊದಿಂದ ಮನೀಲಾಕ್ಕೆ ಫಿಲಿಪ್ಪೀನ್ಸ್ ಏರ್‌ಲೈನ್ಸ್‌ ವಿಮಾನದಲ್ಲಿ ತೆರಳಿದ್ದರು. ವಿಮಾನ ಏರುವ ಸಮಯದಲ್ಲಿ ಅವರಿಗೆ ಗೊತ್ತಾಗಿದ್ದು, ಇಡೀ ವಿಮಾನದಲ್ಲಿ ತಾವೊಬ್ಬರೇ ಪ್ರಯಾಣಿಕಳೆಂದು.

ಮಿಯಾಮಿಯ ಪ್ರಯಾಣಿಕರಾದ ಲಾಟ್ಸ್ಮೆ ಮೆಕ್‌ಅಡೂ ಬ್ಯಾಂಕಾಕ್‌ನಿಂದ ಕೊಹ್ ಸಮುಯಿಗೆ ಒಬ್ಬರೇ ಪ್ರಯಾಣಿಸಿದ್ದ ವರದಿಯಾಗಿತ್ತು.

ಸಿಬ್ಬಂದಿಗೂ ಅಚ್ಚರಿ

ಸಿಬ್ಬಂದಿಗೂ ಅಚ್ಚರಿ

ವಿಮಾನ ಹೊರಟ ಬಳಿಕ ಸುರಕ್ಷತೆಯ ಸೂಚನೆ ನೀಡಲು ಬಂದ ಸಹಾಯಕಿ, ಎರಿಸ್ಪೆ ಒಬ್ಬರನ್ನೇ ಕಂಡು ಆಶ್ಚರ್ಯಚಕಿತರಾದರು. ವಿಶೇಷವೆಂದರೆ ವಿಮಾನದಲ್ಲಿ ಏಕೈಕ ಪ್ರಯಾಣಿಕರ ಸೇವೆಗೆ ಇದ್ದದ್ದು ಒಟ್ಟು ಏಳು ಮಂದಿ ಸಿಬ್ಬಂದಿ. ಪ್ರಯಾಣಿಕರಿಲ್ಲದೆ ಸಿಬ್ಬಂದಿಯೂ ನಿರಾಳರಾಗಿದ್ದರು. ಎರಿಸ್ಪೆ ಅವರಿಗೆ ಬೇಕಾದ ಎಲ್ಲ ಸೇವೆಗಳನ್ನು ನೀಡಿ ಅವರೊಟ್ಟಿಗೆ ಹರಟಿದರು. ಖುಷಿಯಿಂದ ಫೋಟೊಗಳಿಗೆ ಪೋಸ್ ನೀಡಿದರು.

ಸೀಟು ಬಿಟ್ಟು ಬೇರೆಡೆ ಕುಳಿತರು

ಸೀಟು ಬಿಟ್ಟು ಬೇರೆಡೆ ಕುಳಿತರು

ಕ್ಯಾಬಿನ್ ಸಿಬ್ಬಂದಿ ಹೊರತುಪಡಿಸಿ ತಾವೊಬ್ಬರೇ ಪ್ರಯಾಣಿಸುತ್ತಿರುವುದು ಎಂಬುದು ಗೊತ್ತಾದಾಗ ಎರಿಸ್ಪೆ ಅವರಲ್ಲಿ ಕೊಂಚ ಆತಂಕ ಮೂಡಿತ್ತು. ಆದರೆ, ಸ್ವಲ್ಪ ಸಮಯದ ಬಳಿಕ ಅವರಲ್ಲಿ ಹುರುಪು ಮೂಡಿತು. ತಮಗೆ ನೀಡಲಾಗಿದ್ದ ಸೀಟನ್ನು ಬಿಟ್ಟು ಬೇರೆಡೆ ಕುಳಿತರು. ವಿಮಾನ ಸಿಬ್ಬಂದಿಯಿಂದ ಆಹಾರ, ಪಾನೀಯ ತರಿಸಿಕೊಂಡು ಸೇವಿಸಿದರು.

ಖಾಲಿ ಸೀಟುಗಳೊಂದಿಗೆ ಸೆಲ್ಫಿ

ಖಾಲಿ ಸೀಟುಗಳೊಂದಿಗೆ ಸೆಲ್ಫಿ

ತಮ್ಮ ಈ ಮೋಜಿನ ಪ್ರಯಾಣದ ಬಗ್ಗೆ ಎರಿಸ್ಪೆ ಫೇಸ್ಬುಕ್ ಪೋಸ್ಟ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಜೀವಮಾನದಲ್ಲಿ ಒಮ್ಮೆ ಸಿಕ್ಕ ಇಂತಹ ಅತ್ಯಪರೂಪದ ಅವಕಾಶವನ್ನು ಸಂಭ್ರಮಿಸಿದ್ದಕ್ಕೆ ಕುರುಹುಗಳು ಅವರ ಪೋಸ್ಟ್‌ನಲ್ಲಿದ್ದವು. ಟಿಕೆಟ್ ಮತ್ತು ಸಿಬ್ಬಂದಿಯೊಂದಿಗೆ ಫೋಟೊ ತೆಗೆದುಕೊಂಡ ಎರಿಸ್ಪೆ, ವಿಮಾನದ ಖಾಲಿ ಸೀಟುಗಳು ಕಾಣಿಸುವ ಸೆಲ್ಫಿಯನ್ನು ಸಹ ಹಂಚಿಕೊಂಡಿದ್ದರು.

ಬಿಜಿನೆಸ್ ಸೀಟಿನಲ್ಲಿ ಪ್ರಯಾಣ

'ಬೆಳ್ಳಂಬೆಳಿಗ್ಗೆ ವಿಮಾನ ಹೊರಡಬೇಕಿದ್ದರಿಂದ ಬೇಗನೆ ತೆರಳಿದ್ದೆ. ಬಿಜಿನೆಸ್ ಸೀಟು ಪಡೆದಿದ್ದರಿಂದ ಮೊದಲು ವಿಮಾನವೇರಿದ್ದೆ. ನನ್ನ ಫೋನ್ ಪರಿಶೀಲಿಸುತ್ತಿದ್ದಾಗ ವಿಮಾನದ ಸಹಾಯಕಿ ಬಾಗಿಲು ಬಂದ್ ಮಾಡಿದ್ದನ್ನು ಕಂಡೆ. ಸುತ್ತಲೂ ನೋಡಿದರೆ ವಿಮಾನದಲ್ಲಿ ಬೇರೆ ಯಾವ ಪ್ರಯಾಣಿಕರೂ ಇಲ್ಲ. ಬಹುಶಃ ಮಳೆ ಬರುತ್ತಿರುವುದರಿಂದ ವಿಮಾನದ ಬಾಗಿಲು ಮುಚ್ಚುತ್ತಿರುವುದೇ ಎಂದು ಪ್ರಶ್ನಿಸಿದಾಗ, ಸಿಬ್ಬಂದಿ 'ಇಲ್ಲ. ಇನ್ನು ಯಾವ ಪ್ರಯಾಣಿಕರೂ ಬರುವುದಿಲ್ಲ' ಎಂದು ಪ್ರತಿಕ್ರಿಯಿಸಿದರು ಎಂಬುದಾಗಿ ಎರಿಸ್ಪೆ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+