ಫಿಲಿಪೈನ್ಸ್‌ನಲ್ಲಿ ರಷ್ಯಾ ಕೊರೊನಾ ಲಸಿಕೆಯ 3ನೇ ಹಂತದ ಪ್ರಯೋಗ

ಮನಿಲಾ, ಆಗಸ್ಟ್ 15: ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ 5 ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಫಿಲಿಪೈನ್ಸ್‌ನಲ್ಲಿ ನಡೆಯಲಿದೆ.

Recommended Video

      CT Ravi ಪ್ರಕಾರ ನಡೆದ ಗೋಲಿಬಾರ್‌ಗೆ Zameer Ahmed ಡೈರೆಕ್ಟರ್ ಹಾಗು ಪ್ರೊಡ್ಯೂಸರ್ | Oneindia Kannada

      ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಟ್ರಯಲ್ ನಡೆಯಲಿದೆ. ಈ ಕುರಿತು ಫಿಲಿಪೈನ್ಸ್ ವಕ್ತಾರ ಹ್ಯಾರಿ ರೋಕ್ ತಿಳಿಸಿದ್ದಾರೆ.ರಷ್ಯಾ ಸರ್ಕಾರವು ಕ್ಲಿನಿಕಲ್ ಟ್ರಯಲ್ ನಡೆಸಲು ಅನುದಾನವನ್ನು ನೀಡುತ್ತಿದೆ ಎಂದು ಯಾವುದೋ ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದರು.

      2021ರೊಳಗೆ ಫಿಲಿಪೈನ್ಸ್‌ನ ಆಹಾರ ಮತ್ತು ಔಷಧಾಡಳಿತವು ರಷ್ಯಾದ ಲಸಿಕೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.ಈ ಲಸಿಕೆಯನ್ನು ಗಮಲೇಯಾ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ್ದು, ಅದಕ್ಕೆ ಸ್ಪುಟ್ನಿಕ್ 5 ಎಂದು ನಾಮಕರಣ ಮಾಡಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತ್ರಿಗೆ ಮೊದಲ ಲಸಿಕೆ ನೀಡಲಾಗುತ್ತಿದ್ದು, ಬಳಿಕ ವೈದ್ಯರು ಮತ್ತು ಶಿಕ್ಷಕರಿಗೆ ಮೊದಲ ಹಂತದ ಲಸಿಕೆ ನೀಡಲಾಗುತ್ತಿದೆ.

      Philippines To Begin Phase 3 Trials Of Russian COVID-19 Vaccine In October

      ದೇಶೀಯ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ದೇಶವು ನಿಯಂತ್ರಿಸುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆರಂಭದಲ್ಲಿ ಡೋಸೇಜ್ ನೀಡಲು ಭಾರತವು ಅಂತಾರಾಷ್ಟ್ರೀಯ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

      ಭಾರತ ಮತ್ತು ಬ್ರೆಜಿಲ್ ಸೇರಿದಂತೆ ವಿಶ್ವದ 20 ರಾಷ್ಟ್ರಗಳು ರಷ್ಯಾದ ಈ ಲಸಿಕೆಯನ್ನು ತಮ್ಮ ದೇಶಗಳಲ್ಲಿ ಉತ್ಪಾದಿಸಲು ಮುಂದೆ ಬಂದಿವೆ ಎಂದು ರಷ್ಯಾ ಹೇಳಿದೆ. ಆದರೆ ಅಮೆರಿಕ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ರಷ್ಯಾದ ಸಲಿಕೆ ಬಗ್ಗೆ ಅಪಸ್ವರ ಎತ್ತಿದ್ದು, ಅದರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+