ಜನವರಿ 6ರಂದು ಸೂರ್ಯ ಗ್ರಹಣ, ಭಾರತದಲ್ಲಿ ಕಾಣದು

ಸೂರ್ಯ ಗ್ರಹಣವೆಂದರೇನೇ ಸೋಜಿಗ. ನಭೋಮಂಡಲದಲ್ಲಿ ಜನವರಿ 6ರಂದು ಸಂಭವಿಸಲಿರುವ ಈ ಕೌತುಕವನ್ನು ನೋಡಲು ಇಡೀ ಜಗತ್ತೇ ಸಜ್ಜಾಗಿದೆ. ಆದರೆ, ಇದು ಭಾಗಶಃ ಸಂಭವಿಸಲಿದ್ದು, ಭಾರತದಲ್ಲಿ ಇದನ್ನು ನೋಡುವ ಸೌಭಾಗ್ಯ ಇಲ್ಲಿನ ಜನರಿಗೆ ಸಿಗುವುದಿಲ್ಲ.

ಚೀನಾ, ಏಷ್ಯಾದ ಈಶಾನ್ಯ ಭಾಗ, ಸೈಬೇರಿಯಾದ ಕೆಲ ಭಾಗ, ರಷ್ಯಾ, ಕೊರಿಯಾ ಮತ್ತು ಜಪಾನ್ ನ ಕೆಲ ಭಾಗಗಳಲ್ಲಿ ಮಾತ್ರ ಈ ಭಾಗಶಃ ಸೂರ್ಯ ಗ್ರಹಣ ಗೋಚರಿಸಲಿದೆ. ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬರದಿರುವುದರಿಂದ, ಚಂದಿರ ಸೂರ್ಯನಿಗೆ ಸಂಪೂರ್ಣವಾಗಿ ಅಡ್ಡಬರುವುದಿಲ್ಲ.

ಬೆಳಿಗ್ಗೆ 5 ಗಂಟೆಗಳ ಕಾಲ ಗ್ರಹಣದ ನೆರಳು ಬೆಳಕಿನಾಟವನ್ನು ಮೇಲಿನ ರಾಷ್ಟ್ರಗಳಲ್ಲಿ ನೋಡಬಹುದು. ಭಾರತದಲ್ಲಿರುವವರು ಆನ್ ಲೈನ್ ನಲ್ಲಿ, ಟಿವಿಗಳಲ್ಲಿ ನೋಡಿ ಆನಂದಿಸಬಹುದು. ಬೆಳಿಗ್ಗೆ 4.05 ಗಂಟೆಗೆ ಗ್ರಹಣ ಹಿಡಿಯಲಿದ್ದು, 9.18 ಗಂಟೆಗೆ ಬಿಡುಗಡೆಯಾಗಲಿದೆ.

Partial Solar Eclipse on 6th January 2019

ಆದರೆ, ಸೂರ್ಯ ಗ್ರಹಣ ವೀಕ್ಷಿಸಬಯಸುವವರು ಕಣ್ಣಿಗೆ ಹಾನಿಯಾಗದಂತೆ ಸುರಕ್ಷಿತ ವಿಧಾನಗಳ ಮುಖಾಂತರ ಗ್ರಹಣ ವೀಕ್ಷಿಸಬಹುದು. ಗ್ರಹಣ ಹಿಡಿದಾಗ ಮಾತ್ರವಲ್ಲ, ಗ್ರಹಣ ಇಲ್ಲದಿದ್ದಾಗಲೂ ಸೂರ್ಯನನ್ನು ನೇರವಾಗಿ ನೋಡುವಂತಿಲ್ಲ. ಗ್ರಹಣ ಹಿಡಿದಾಗ ನೇರವಾಗಿ ನೋಡಿದರೆ ದೃಷ್ಟಿ ಹೋಗುವ ಸಾಧ್ಯತೆಯೂ ಇರುತ್ತದೆ.

2019ರಲ್ಲಿ ಒಟ್ಟು ಆರು ಸೂರ್ಯ ಗ್ರಹಣ ಸಂಭವಿಸಲಿವೆ. ಇದೇ ತಿಂಗಳು ಜನವರಿ 21ರಂದು ಚಂದ್ರ ಗ್ರಹಣ (ಸೂಪರ್ ಬ್ಲಡ್ ಮೂನ್) ಸಂಭವಿಸಲಿದ್ದು, ಇದು ಕೂಡ ಭಾರತದಲ್ಲಿ ಕಂಡುಬರುವುದಿಲ್ಲ. ಜುಲೈ 2ರಂದು ಖಂಡಗ್ರಾಸ ಸೂರ್ಯ ಗ್ರಹಣ ಸಂಭವಿಸಲಿದ್ದು, ಚಿಲಿ ಮತ್ತು ಅರ್ಜೆಂಟಿನಾದಲ್ಲಿ ಮಾತ್ರ ಕಂಡುಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+