ಸುರತದಲ್ಲಿ ತಲ್ಲೀನ, ಜಾರಿತು ಕಾರು, ಹೋಯ್ತು ಪ್ರಾಣ
ಬೆಂಗಳೂರು, ಮೇ.18: ಇದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ರಷ್ಯಾದ ದಂಪತಿ ಸುಖದ ಅಮಲಿನಲ್ಲಿ ತೇಲಾಡುತ್ತಿದ್ದರು. ಸುರತದಲ್ಲಿ ಇಬ್ಬರು ತಲ್ಲೀನರಾಗಿದ್ದಾಗ ಇವರಿದ್ದ ಕಾರು ನದಿಗೆ ಜಾರಿದೆ ಮುಂದಾಗಿದ್ದು ಅನಾಹುತ.
ರಷ್ಯಾದ ಕುಬಾನ್ ನದಿಯಲ್ಲಿ ಆಕೆ ಹೆಣ ತೇಲುತ್ತಿದೆ. ಅಮಲಿನಿಂದ ಇನ್ನೂ ಚೇತರಿಸಿಕೊಳ್ಳದ ಆತನಿಗೆ ಇನ್ನೂ ಏನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ವಾರಾಂತ್ಯದ ಪಿಕ್ನಿಕ್ ಗೆ ದಂಪತಿ ನದಿ ಹತ್ತಿರ ಬಂದಿದ್ದರು. ಚೆನ್ನಾಗಿ ಕುಡಿದು ಅಮಲೇರುತ್ತಿದ್ದಂತೆ ಇಬ್ಬರು ಕಾರಿನ ಒಳ ಹೊಕ್ಕಿದ್ದಾರೆ.

ನಶೆಯಲ್ಲೂ ಇಬ್ಬರಿಗೂ ಸೆಕ್ಸ್ ಮೂಡ್ ಬಂದಿದೆ. ಸುರತ ಕ್ರೀಡೆಯಲ್ಲಿ ತೊಡಗಿದ್ದಾರೆ. ಲಾಡಾ ಸಮಾರಾ ಎಂದು ಕರೆಯಲ್ಪಡುವ Vaz-2115 ಕಾರು ಇವರಿಬ್ಬರ ಒದ್ದಾಟವನ್ನು ಸಹಿಸಿಕೊಳ್ಳಲಾಗದೆ ಮುಂದಕ್ಕೆ ಸಾಗಿದೆ. ಕಾರು ಕೊನೆಗೆ ಕುಬಾನ್ ನದಿ ಸೇರಿದೆ. ಕಾರಿನ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮರೆತ ದಂಪತಿ ಬೆಲೆ ತೆತ್ತಿದ್ದಾರೆ.
ಅದರೆ, ಅಶ್ಚರ್ಯಕರ ರೀತಿಯಲ್ಲಿ ಆತ ಕಾರಿನ ಕಿಟಕಿ ಒಡೆದು ಹಾಕಿ ಹೊರ ಬಿದ್ದಿದ್ದಾನೆ. 35 ವರ್ಷ ವಯಸ್ಸಿನ ಮಹಿಳೆ ಮಾತ್ರ ನಶೆಯಲ್ಲೇ ನದಿ ಪಾಲಾಗಿದ್ದಾಳೆ. ಮೈಬಿಸಿ ಮಾಡಿಕೊಂಡಿದ್ದ ಇಬ್ಬರಿಗೆ ನದಿ ನೀರಿನ ಕೊರೆತ ಕೂಡಾ ಅರಿವಿಗೆ ಬಂದಿಲ್ಲ. ಘಟನೆ ನಡೆದಾಗ ಇಬ್ಬರ ಮೈಮೇಲೆ ಪ್ರಜ್ಞೆ ಇರಲಿಲ್ಲ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳ ರಾಶಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)












Click it and Unblock the Notifications