ಇಸ್ರೇಲ್ ಗಡಿಯಲ್ಲಿ ಪ್ರತಿಭಟನೆ: ಸೇನೆ ಗುಂಡಿಗೆ 16 ಬಲಿ
ಪ್ಯಾಲೆಸ್ಟೀನ್, ಮೇ 14: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನಾ ಪಡೆ ನಡೆಸಿದ ಗುಂಡಿನ ದಾಳಿಗೆ ಕನಿಷ್ಠ 16 ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.
ಜೆರುಸಲೆಂನಲ್ಲಿ ಅಮೆರಿಕದ ಹೊಸ ರಾಯಭಾರ ಕಚೇರಿಯನ್ನು ತೆರೆಯುತ್ತಿರುವುದನ್ನು ಖಂಡಿಸಿ ಸಾವಿರಾರು ಪ್ಯಾಲೆಸ್ಟೀನ್ ಪ್ರತಿಭಟನಾಕಾರರು ಇಸ್ರೇಲ್ ಗಡಿಭಾಗದಲ್ಲಿ ಸೋಮವಾರ ನೆರೆದಿದ್ದರು.
ಈ ವೇಳೆ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಭಾರಿ ಪ್ರಮಾಣದ ಬೆಂಕಿ ದಟ್ಟವಾದ ಹೊಗೆ ಗಡಿಭಾಗವನ್ನು ಆವರಿಸಿತು. ಈ ವೇಳೆ ಇಸ್ರೇಲ್ ಸೈನಿಕರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಪ್ರತಿಭಟನಾಕಾರರು ಗಡಿ ಬೇಲಿಯನ್ನು ಮುರಿಯಲು ಪ್ರಯತ್ನಿಸಿದ್ದರು ಎಂದು ಇಸ್ರೇಲ್ ಸೇನಾ ಪಡೆ ಆರೋಪಿಸಿದೆ. ಘಟನೆಯಲ್ಲಿ ಐನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications