ಚರ್ಚೆಯ ವೇಳೆ ಪತ್ರಕರ್ತನನ್ನು ನೆಲಕ್ಕೆ ಕೆಡವಿ ಬಡಿದ ಇಮ್ರಾನ್ ಪಕ್ಷದ ನಾಯಕ

ಪಾಕಿಸ್ತಾನದಲ್ಲಿನ ಆಡಳಿತಾರೂಢ ಪಕ್ಷ, ಇಮ್ರಾನ್ ಖಾನ್ ರ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ ಗೆ ಸೇರಿದ ನಾಯಕರೊಬ್ಬರು ಸೋಮವಾರ ಟೀವಿಯ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ವೇಳೆ ಪ್ಯಾನೆಲಿಸ್ಟ್ ಹಾಗೂ ಪತ್ರಕರ್ತರೂ ಆದ ಇಮ್ತಿಯಾಜ್ ಖಾನ್ ಫರಾನ್ ಮೇಲೆ ಹಲ್ಲೆ ನಡೆಸಿದ್ದಾರೆ. ಪಿಟಿಐ ಪಕ್ಷದ ಮಸ್ರೂರ್ ಅಲಿ ಸಿಯಾಲ್ ಹಲ್ಲೆ ಮಾಡಿದ ವ್ಯಕ್ತಿ.

ಟೀವಿ ಷೋನ ನೇರಪ್ರಸಾರದಲ್ಲಿ ಭಾಗವಹಿಸಿದ್ದ ಈ ಮುಖಂಡ ದಾಳಿ ನಡೆಸಿದ್ದಾಗಿ ಜರ್ನಲಿಸಂ ಪಾಕಿಸ್ತಾನ್ ವೆಬ್ ಸೈಟ್ ವರದಿ ಮಾಡಿದೆ. ವಿಡಿಯೋದಲ್ಲಿ ಇರುವ ಪ್ರಕಾರ: ಮೊದಲಿಗೆ ಇಬ್ಬರೂ ದೊಡ್ಡ ಧ್ವನಿಯಲ್ಲಿ ವಾಗ್ವಾದ ನಡೆಸುತ್ತಾರೆ. ಆ ನಂತರ ಎದ್ದು ನಿಲ್ಲುವ ಸಿಯಾಲ್ ಏಕಾಏಕಿ ಖಾನ್ ರನ್ನು ನೆಲಕ್ಕೆ ತಳ್ಳಿ ದಾಳಿ ಮಾಡುತ್ತಾರೆ. ಗುದಿಯುತ್ತಾರೆ ಹಾಗೂ ಹೊಡೆಯುತ್ತಾರೆ.

Pakistan Tehrik E Insaf party leader assault on journalist during TV show

ಈ ಇಬ್ಬರ ಹೊಡೆದಾಟವನ್ನು ಇತರ ಅತಿಥಿಗಳು ಹಾಗೂ ಅಲ್ಲಿದ್ದ ಸಿಬ್ಬಂದಿ ಬಿಡಿಸಿದ್ದಾರೆ. ವಿಚಿತ್ರ ಏನೆಂದರೆ, ಈ ಹೊಡೆದಾಟದ ನಂತರ ಸಿಯಾಲ್ ಮತ್ತೆ ತಮ್ಮ ಕುರ್ಚಿ ಮೇಲೆ ಕೂತಿದ್ದಾರೆ. ಕೆಲ ನಿಮಿಷದ ನಂತರ ಕರಾಚಿ ಪ್ರೆಸ್ ಕ್ಲಬ್ ನ ಅಧ್ಯಕ್ಷರೂ ಆದ ಖಾನ್ ಸ್ಟುಡಿಯೋಗೆ ಬಂದು, ಮತ್ತೆ ಷೋ ಆರಂಭಿಸುತ್ತಾರೆ; ಏನೂ ಆಗೇ ಇಲ್ಲ ಎಂಬಂತೆ.

ಸಿಯಾಲ್ ಮಾಡಿದ ದಾಳಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸಿಯಾಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಇಮ್ರಾನ್ ಖಾನ್ ರನ್ನು ಆಗ್ರಹಿಸಲಾಗಿದೆ. "ಇದೇನಾ ನಿಮ್ಮ ನಯಾ ಪಾಕಿಸ್ತಾನ್?" ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಇಮ್ರಾನ್ ಖಾನ್ ರನ್ನು ಪ್ರಶ್ನೆ ಕೂಡ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+